/newsfirstlive-kannada/media/post_attachments/wp-content/uploads/2024/12/ROHIT_SHARMA-7.jpg)
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಾದ್ರೂ ಕ್ಯಾಪ್ಟನ್ ರೋಹಿತ್ ಶರ್ಮಾ ಕಮ್ಬ್ಯಾಕ್ ಮಾಡ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಸಮರಾಭ್ಯಾಸದ ಕಣದಲ್ಲೇ ಹಿಟ್ಮ್ಯಾನ್ ಮುಗ್ಗರಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ನೆಟ್ಸ್ನಲ್ಲಿ ಪರದಾಡಿರೋದನ್ನ ನೋಡಿದ್ರೆ ರೋಹಿತ್ ಕರಿಯರ್ ಶೀಘ್ರದಲ್ಲೇ ಅಂತ್ಯ ಅಂತಾ ಅನ್ನಿಸದೇ ಇರಲ್ಲ.
ಇಂಡೋ-ಆಸಿಸ್ ಬಾಕ್ಸಿಂಗ್ ಡೇ ಟೆಸ್ಟ್ಗೆ ಕೌಂಟ್ಡೌನ್ ಶುರುವಾಗಿದೆ. ಮಹತ್ವದ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧತೆ ಜೋರಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಬೀಗಲು ತಯಾರಿ ನಡೆಸಿರೋ ಟೀಮ್ ಇಂಡಿಯಾಗೆ ನಾಯಕನೇ ದೊಡ್ಡ ತಲೆನೋವಾಗಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಆಟ ಸದ್ಯ ಮ್ಯಾನೇಜ್ಮೆಂಟ್ ತಲೆ ಕೆಡಿಸಿದೆ.
ಮುಂದುವರೆದ ಹಿಟ್ಮ್ಯಾನ್ ಪರದಾಟ
3 ಇನ್ನಿಂಗ್ಸ್. 19 ರನ್. 6.33ರ ಎವರೇಜ್. ಇದು ವಿಶ್ವ ಕ್ರಿಕೆಟ್ ಲೋಕದ ಒನ್ ಆಫ್ ದ ಬೆಸ್ಟ್ ಬ್ಯಾಟ್ಸ್ಮನ್, ಟೀಮ್ ಇಂಡಿಯಾ ನಾಯಕ, ಹಿಟ್ಮ್ಯಾನ್ ಎಂದೇ ಕರೆಸಿಕೊಳ್ಳೋ ರೋಹಿತ್ ಶರ್ಮಾರ ಸಾಧನೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪಾಲಿಗೆ ವಿಲನ್ ಆಗ್ತಾರೆ ಅಂದ್ಕೊಂಡಿದ್ದ ರೋಹಿತ್ ಇದೀಗ ಟೀಮ್ ಇಂಡಿಯಾಗೆ ವಿಲನ್ ಆಗಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಫ್ಲಾಪ್ ಶೋ ನೀಡಿ ತಂಡಕ್ಕೆ ಹೊರೆಯಾಗಿದ್ದಾರೆ.
ಇದನ್ನೂ ಓದಿ:ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ.. ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದ MAX
ಆಸಿಸ್ ಪ್ರವಾಸ ಮಾತ್ರವಲ್ಲ. ಇದಕ್ಕೂ ಮುನ್ನ ತವರಿನಲ್ಲಿ ನಡೆದ ನ್ಯೂಜಿಲೆಂಡ್, ಬಾಂಗ್ಲಾದೇಶ ಎದುರಿನ ಸರಣಿಗಳಲ್ಲೂ ವೈಫಲ್ಯ ಅನುಭವಿಸಿದ್ರು. ಬಾಕ್ಸಿಂಗ್ ಡೇ ಕದನದಲ್ಲಿ ರೋಹಿತ್ ಶರ್ಮಾ ಕಮ್ಬ್ಯಾಕ್ ಮಾಡ್ತಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆ ನಿರೀಕ್ಷೆ ಪಂದ್ಯಕ್ಕೂ ಮುನ್ನವೇ ಹುಸಿಯಾಗಿದೆ. ಅಭ್ಯಾಸದ ಕಣದಲ್ಲೇ ಹಿಟ್ಮ್ಯಾನ್ ಪರದಾಟ ಶುರುಮಾಡಿದ್ದಾರೆ.
ಪಡಿಕ್ಕಲ್ ಸ್ಪಿನ್ಗೆ ಕ್ಲೀನ್ ಬೋಲ್ಡ್
ಜಸ್ಪ್ರಿತ್ ಬೂಮ್ರಾ, ಸಿರಾಜ್ ಅಥವಾ ಜಡೇಜಾ ಅಲ್ಲ. ಅನಾನುಭವಿ, ದೇಶಿ ಕ್ರಿಕೆಟ್ನಲ್ಲೂ ಬೌಲಿಂಗ್ ಮಾಡದ ಪಡಿಕ್ಕಲ್ಗೆ ರೋಹಿತ್ ಶರ್ಮಾ ಕ್ಲೀನ್ ಕ್ಲೀನ್ಬೋಲ್ಡ್ ಆಗಿರೋದು. ಒಂದು ಸಣ್ಣ ಕ್ಲೂ ಕೂಡ ಸಿಗದ ರೀತಿಯಲ್ಲಿ ರೋಹಿತ್ ಶರ್ಮಾ, ಪಡಿಕ್ಕಲ್ ಬೌಲಿಂಗ್ನಲ್ಲಿ ಔಟಾಗಿದ್ದಾರೆ. ಈ ಔಟಾದ ರೀತಿ ರೋಹಿತ್ ಯುಗಾಂತ್ಯದ ಸೂಚನೆ ನೀಡ್ತಿದೆ.
ರೋಹಿತ್ ಪರದಾಟ
ನೆಟ್ಸ್ನಲ್ಲಿ ದೇವದತ್ತ್ ಪಡಿಕ್ಕಲ್ ಬೌಲಿಂಗ್ನಲ್ಲಿ ಔಟಾಗಿದ್ದು ಮಾತ್ರವಲ್ಲ. ಈ ವರ್ಷದಲ್ಲಿ ಸ್ಪಿನ್ ಎದುರು ರೋಹಿತ್ ವೀಕ್ನೆಸ್ ಪದೇ ಪದೇ ಎಕ್ಸ್ಪೋಸ್ ಆಗಿದೆ. ತವರು ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳೂ ಸೇರಿದಂತೆ ಒಟ್ಟಾರೆ ರೋಹಿತ್ ಶರ್ಮಾ ಸ್ಪಿನ್ ಎದುರು ಪರದಾಡಿದ್ದಾರೆ.
ಇದನ್ನೂ ಓದಿ:ಮತ್ತೊಂದು ಐತಿಹಾಸಿಕ ಸಂಭ್ರಮಕ್ಕೆ ಕುಂದಾನಗರಿ ಸಜ್ಜು; ಇದೇ ತಿಂಗಳು ನಡೆಯುಲಿವೆ 3 ಪ್ರಮುಖ ಕಾರ್ಯಕ್ರಮಗಳು
2024ರಲ್ಲಿ ಸ್ಪಿನ್ ಎದುರು ರೋಹಿತ್
2024ರಲ್ಲಿ ಒಟ್ಟು 9 ಬಾರಿ ಸ್ಪಿನ್ನರ್ಗಳ ಎದುರು ರೋಹಿತ್ ಔಟಾಗಿದ್ದಾರೆ. ಈ ಪೈಕಿ ತಲಾ 2 ಬಾರಿ ಬೋಲ್ಡ್ ಹಾಗೂ ಎಲ್ಬಿ ಬಲೆಗೆ ಬಿದ್ದಿದ್ದಾರೆ. 1 ಬಾರಿ ವಿಕೆಟ್ ಕೀಪರ್ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದ್ರೆ, 4 ಬಾರಿ ಫೀಲ್ಡರ್ಸ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ದಾರೆ. ಒಂದೆಡೆ ಸ್ಪಿನ್ ಎದುರು ಪರದಾಟ ನಡೆಸ್ತಿರೋ ರೋಹಿತ್ ಶರ್ಮಾ, ರನ್ಗಳಿಕೆಗಂತೂ ತಿಣುಕಾಟ ನಡೆಸ್ತಿದ್ದಾರೆ. ಕಳೆದ 13 ಟೆಸ್ಟ್ ಪಂದ್ಯಗಳ ಪರ್ಫಾಮೆನ್ಸ್ ಅಂತೂ ನೀರಸವಾಗಿದೆ. ಅಂಕಿ-ಅಂಶಗಳನ್ನ ನೋಡಿದ್ರೆ, ರೋಹಿತ್ ಶರ್ಮಾ ಟೆಸ್ಟ್ ಕರಿಯರ್ಗೆ ಫುಲ್ ಸ್ಟಾಪ್ ಇಡೋದು ಬೆಸ್ಟ್ ಅನ್ನಿಸದೇ ಇರಲ್ಲ.
7 ಟೆಸ್ಟ್ಗಳಲ್ಲಿ ರೋಹಿತ್ ಶರ್ಮಾ
ಕಳೆದ 7 ಟೆಸ್ಟ್ ಪಂದ್ಯಗಳಿಂದ 13 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಶರ್ಮಾ ಕೇವಲ 152 ರನ್ಗಳಿಸಿದ್ದಾರೆ. ಕೇವಲ 11.69ರ ಹೀನಾಯ ಸರಾಸರಿಯನ್ನ ಹೊಂದಿದ್ದಾರೆ. ಒಟ್ಟಿನಲ್ಲಿ ರನ್ಗಳಿಕೆಗೆ ತಿಣುಕಾಟ ನಡೆಸ್ತಿರೋ ರೋಹಿತ್ ಶರ್ಮಾ, ನೆಟ್ಸ್ನಲ್ಲಿ ಕೂಡ ಬ್ಯಾಟಿಂಗ್ ಮಾಡಲು ಪರದಾಡಿದ್ದಾರೆ. ಪಾರ್ಟ್ ಟೈಮ್ ಬೌಲರ್ ದೇವದತ್ತ್ ಪಡಿಕ್ಕಲ್ಗೇ ಕ್ಲೀನ್ ಬೋಲ್ಡ್ ಆಗಿರೋ ರೋಹಿತ್ ಶರ್ಮಾ, ಇನ್ನು ಮ್ಯಾಚ್ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ನಥನ್ ಲಯನ್ರಂತ ದಿಗ್ಗಜರನ್ನ ಹೇಗೆ ಎದುರಿಸ್ತಾರೋ.
ಇದನ್ನೂ ಓದಿ:2 ಕೋಟಿ ಚಿನ್ನ ವಂಚನೆ ಕೇಸ್ಗೆ ಬಿಗ್ ಟ್ವಿಸ್ಟ್; ಶ್ವೇತಾ ಗೌಡಗೂ ವರ್ತೂರು ಪ್ರಕಾಶ್ಗೂ ಏನು ಸಂಬಂಧ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ