newsfirstkannada.com

Golden duck: ಮತ್ತೆ ನಿರಾಸೆ ಮೂಡಿಸಿದ ರೋಹಿತ್ ಶರ್ಮಾ; ಸತತ 2ನೇ ಪಂದ್ಯದಲ್ಲೂ ಡಕ್‌ ಔಟ್‌!

Share :

Published January 14, 2024 at 9:34pm

Update January 14, 2024 at 9:35pm

    ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ನಿರಾಸೆ

    ಸತತ 2 ಪಂದ್ಯದಲ್ಲೂ ಗೋಲ್ಡನ್ ಡಕ್ ಔಟ್‌ ಆದ ಕ್ಯಾಪ್ಟನ್

    ವಿಶ್ವಕಪ್‌ ಸನಿಹದಲ್ಲಿ ಭಾರತ ತಂಡಕ್ಕೆ ಮತ್ತೊಂದು ತಲೆನೋವು

ಇಂದೋರ್‌ನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ದಾರೆ. ಅಘ್ಘಾನ್ ಗುರಿ ಬೆನ್ನತ್ತಿದ್ದ ರೋಹಿತ್ ಶರ್ಮಾ ಡಕ್ ಔಟ್ ಆಗೋ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ, ಅಘ್ಘಾನ್ ಆಟಗಾರರನ್ನು ಕಟ್ಟಿ ಹಾಕಿ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ಚೇತರಿಸಿಕೊಂಡ ಅಫ್ಘಾನಿಸ್ತಾನ 173 ರನ್‌ಗಳ ಬಿಗ್‌ ಟಾರ್ಗೆಟ್‌ ಅನ್ನೇ ನೀಡಿದೆ. ಈ ಗುರಿ ಬೆನ್ನತ್ತಿದ ರೋಹಿತ್ ಶರ್ಮಾ ಸತತ 2 ಪಂದ್ಯದಲ್ಲೂ ಗೋಲ್ಡನ್ ಡಕ್ ಔಟ್‌ ಆಗಿರೋದು ಬಹಳ ನಿರಾಸೆ ಮೂಡಿಸಿದೆ.

ಇದನ್ನೂ ಓದಿ: IND VS AFG: ಇಂದೋರ್‌ನಲ್ಲೂ ರೋಹಿತ್ ಪಡೆ ಬಿಗಿ ಹಿಡಿತ; ಬೌಲರ್‌ಗಳ ದಾಳಿಗೆ ಅಫ್ಘಾನ್‌ ಸುಸ್ತು!

ನಾಯಕ ರೋಹಿತ್ ಶರ್ಮಾ ಅವರಂತೆ ವಿರಾಟ್ ಕೊಹ್ಲಿ ಕೂಡ ಇವತ್ತಿನ ಪಂದ್ಯದಲ್ಲಿ ಕೇವಲ 29 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಆರಂಭಿಕ ಆಘಾತ ಎದುರಿಸಿದ ಟೀಂ ಇಂಡಿಯಾಗೆ ಸದ್ಯ ಯಶಸ್ವಿ ಜೈಸ್ವಾಲ್ ಅವರು ಆಸರೆಯಾಗಿದ್ದಾರೆ. ಅರ್ಧ ಶತಕದ ನೆರವಿನಿಂದ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಇಂದೋರ್‌ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವಿಫಲವಾಗಿರೋದು ವಿಶ್ವಕಪ್‌ ಸನಿಹದಲ್ಲಿ ಭಾರತ ತಂಡಕ್ಕೆ ಮತ್ತೊಂದು ತಲೆನೋವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Golden duck: ಮತ್ತೆ ನಿರಾಸೆ ಮೂಡಿಸಿದ ರೋಹಿತ್ ಶರ್ಮಾ; ಸತತ 2ನೇ ಪಂದ್ಯದಲ್ಲೂ ಡಕ್‌ ಔಟ್‌!

https://newsfirstlive.com/wp-content/uploads/2024/01/Rohit-Sharma-1.jpg

Load More