/newsfirstlive-kannada/media/post_attachments/wp-content/uploads/2024/12/ROHIT-SHARMA-3.jpg)
ಸಿಡ್ನಿ ಟೆಸ್ಟ್ ಆರಂಭವಾಗಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಡ್ರಾಪ್ ಮಾಡಲಾಗಿದೆ. ಸತತ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ರೋಹಿತ್ಗೆ ವಿಶ್ರಾಂತಿ ನೀಡಿ ಬುಮ್ರಾ ನೇತೃತ್ವದಲ್ಲಿ ತಂಡವನ್ನು ಫೀಲ್ಡ್ಗೆ ಇಳಿಸಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪರ್ತ್ನಲ್ಲಿ ನಡೆದಿತ್ತು. ಈ ವೇಳೆ ಬುಮ್ರಾ ತಂಡವನ್ನು ಮುನ್ನಡೆಸಿ, ಗೆಲ್ಲಿಸಿಕೊಟ್ಟಿದ್ದರು. ಎರಡನೇ ಟೆಸ್ಟ್ನಿಂದ ರೋಹಿತ್ ಶರ್ಮಾ ತಂಡಕ್ಕೆ ಸೇರಿಕೊಂಡರು. ರೋಹಿತ್ ನೇತೃತ್ವದಲ್ಲಿ ಆಡಿದ ಮೂರು ಟೆಸ್ಟ್ಗಳಲ್ಲಿ ಎರಡರಲ್ಲಿ ಭಾರತ ಸೋತಿತು. ಒಂದು ಟೆಸ್ಟ್ ಡ್ರಾ ಮಾಡಿಕೊಂಡಿತು. ಇದರಿಂದಾಗಿ ರೋಹಿತ್ ಶರ್ಮಾ ತೀವ್ರ ಟೀಕೆಗೆ ಗುರಿಯಾದರು.
ಗಿಲ್
ರೋಹಿತ್ ಬದಲಿಗೆ ತಂಡಕ್ಕೆ ಶುಬ್ಮನ್ ಗಿಲ್ ಕಂಬ್ಯಾಕ್ ಮಾಡಿದ್ದಾರೆ. ನಾಲ್ಕನೇ ಟೆಸ್ಟ್ನಲ್ಲಿ ಗಿಲ್ ಅವರನ್ನು ಪ್ಲೇಯಿಂಗ್-11ನಿಂದ ಕೈಬಿಡಲಾಗಿತ್ತು. ಮೊದಲ ಟೆಸ್ಟ್ನಲ್ಲಿ ಗಾಯದ ಸಮಸ್ಯೆಯಿಂದ ಆಡಿರಲಿಲ್ಲ. ಮತ್ತೊಂದು ಕಡೆ ವೇಗದ ಬೌಲರ್ ಆಕಾಶ್ ದೀಪ್ ಕೂಡ ತಂಡದಿಂದ ಹೊರ ಬಿದ್ದಿದ್ದಾರೆ.
ಇದನ್ನೂ ಓದಿ:BBK11: ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬರೋದು ಯಾರು? ಎಲಿಮಿನೇಷನ್‌ನಲ್ಲಿ ಬಿಗ್ ಟ್ವಿಸ್ಟ್!
ಅವರ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸ್ಥಾನ ಸಿಕ್ಕಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಕೊನೆಯ ಟೆಸ್ಟ್ ಪಂದ್ಯ ಆಡುವ ಅವಕಾಶ ಸಿಕ್ಕಿದ್ದು, ಸರಿಯಾಗಿ ಉಪಯೋಗಿಸಿಕೊಳ್ಳಬೇಕಿದೆ.
ಸಿಡ್ನಿ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇದ್ರ ನಡುವೆ ಪಂದ್ಯದ 4 ಮತ್ತು 5ನೇ ದಿನ ಮಳೆಯ ಸಾಧ್ಯತೆ ಎದುರಾಗಿದೆ. ವರುಣನ ಅವಕೃಪೆ ತೋರಿ ಪಂದ್ಯವೇನಾದ್ರೂ ಡ್ರಾನಲ್ಲಿ ಅಂತ್ಯವಾದ್ರೆ, ಸರಣಿ ಆಸ್ಟ್ರೇಲಿಯಾ ಪಾಲಾಗಲಿದೆ. ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶದ ಕನಸೂ ನುಚ್ಚು ನೂರಾಗಲಿದೆ.
ಇದನ್ನೂ ಓದಿ:ಭಾರತೀಯರಿಗೆ ಬ್ಲಿಂಕಿಟ್‌ನಿಂದ ಗುಡ್ ನ್ಯೂಸ್.. 10 ನಿಮಿಷಕ್ಕೆ ಮನೆ ಮುಂದೆ ಬಂದು ನಿಲ್ಲುತ್ತೆ ಆ್ಯಂಬುಲೆನ್ಸ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್