newsfirstkannada.com

‘ಕಿಂಗ್​​’ ಸಾಮ್ರಾಜ್ಯದಲ್ಲಿ ಹಿಟ್​ಮ್ಯಾನ್ ರೌದ್ರಾವತಾರ.. ಕೊಹ್ಲಿಯಲ್ಲ, ಚಿನ್ನಸ್ವಾಮಿಯ ರಣಬೇಟೆಗಾರ ರೋಹಿತ್..!​​

Share :

Published January 19, 2024 at 1:18pm

    ಬೆಂಗಳೂರಿನಲ್ಲಿ ಮುಂಬೈಕರ್​ ಬೊಂಬಾಟ್​ ಪ್ರದರ್ಶನ

    ಚಿನ್ನಸ್ವಾಮಿಯಲ್ಲಿ ಚೊಚ್ಚಲ ದ್ವಿಶತಕದ ಆರ್ಭಟ

    ಏಕದಿನ ಮಾದರಿ ಸರಾಸರಿ ಬರೋಬ್ಬರಿ 99.60 ರನ್

ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ವಿರಾಟ್​ ಕೊಹ್ಲಿ ಪಾಲಿನ 2ನೇ ಹೋಮ್​​ಗ್ರೌಂಡ್​​ ಅನ್ನೋ ಮಾತಿದೆ. ಇಲ್ಲಿರೋದು ಕಿಂಗ್​​ ಕೊಹ್ಲಿಯ ಕಿಂಗ್​ಡಂ​ ಅಲ್ಲ. ಇದು ರೋಹಿತ್​ ಶರ್ಮಾ ಸಾಮ್ರಾಜ್ಯ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಮುಂಬೈಕರ್​ ರೋಹಿತ್​ ಪಾಲಿನ ಫೇವರಿಟ್​​ ಗ್ರೌಂಡ್​.

ಇಂಡೋ-ಅಫ್ಘನ್​​ ಟಿ20 ಸರಣಿ ಅಂತ್ಯ ಕಂಡಿದೆ. 3ನೇ ಟಿ20 ಪಂದ್ಯ ಅಭಿಮಾನಿಗಳಿಗಂತೂ ಸಖತ್​ ಟ್ರೀಟ್​ ಕೊಟ್ಟಿದೆ. ಬೌಂಡರಿ-ಸಿಕ್ಸರ್​ಗಳ ಸುರಿಮಳೆ, ಮೈದಾನದಲ್ಲಿ ಹರಿದ ರನ್​ಹೊಳೆ, ಆಕ್ಷನ್​, ಹೈಡ್ರಾಮಾ, ಎರಡೆರಡು ಸೂಪರ್​​ ಓವರ್​ಗಳು.. ಕ್ಷಣಕ್ಷಣಕ್ಕೂ ಟ್ವಿಸ್ಟ್​ ಅಂಡ್ ಟರ್ನ್​​.. ಅಬ್ಬಾ.. ಚಿನ್ನಸ್ವಾಮಿ ಅಂಗಳದಲ್ಲಿ ಫ್ಯಾನ್ಸ್​ಗೆ ಸಿಕ್ಕಿದ್ದು, ಪಕ್ಕಾ ಟಿ20 ಗೇಮ್​ನ ಜಬರ್ದಸ್ತ್​​ ಎಂಟರ್​ಟೈನ್​ಮೆಂಟ್​.

ಫೇವರಿಟ್​ ಗ್ರೌಂಡ್​ನಲ್ಲಿ ರೋಹಿತ್​ ಶರ್ಮಾ ರೌದ್ರಾವತಾರ

ಪಂದ್ಯದಲ್ಲಿ ಅಂತ್ಯ ಸಖತ್​ ಥ್ರಿಲ್ಲಿಂಗ್​ ಆಗಿತ್ತು ನಿಜ. ಆದ್ರೆ ಪಂದ್ಯದ ಆರಂಭದಲ್ಲಿ ಟೀಮ್​ ಇಂಡಿಯಾ ಫ್ಯಾನ್ಸ್​ ಆತಂಕಕ್ಕೆ ಸಿಲುಕಿದ್ರು. 22 ರನ್​ಗಳಿಗೆ 4 ವಿಕೆಟ್​​ ಕಳೆದುಕೊಂಡಾಗ ಅಪ್ಘನ್​ ಪಡೆ ಪಂದ್ಯವನ್ನೇ ಗೆದ್ದ ಅಹಂನಲ್ಲಿತ್ತು. ಆದ್ರೆ, ಹಿಟ್​ಮ್ಯಾನ್​ ರೋಹಿತ್​ ಶರ್ಮಾ, ಅಪ್ಘನ್ನರ್​ ಸೊಕ್ಕಡಗಿಸಿದ್ರು. ರೋಹಿತ್​ ರೌದ್ರಾವತಾರಕ್ಕೆ ಅಪ್ಘನ್ನರು ಬೆಚ್ಚಿ ಬಿದ್ರು.

ಕೊಹ್ಲಿಯಲ್ಲ.. ಚಿನ್ನಸ್ವಾಮಿಯ ರಣಬೇಟೆಗಾರ ರೋಹಿತ್​​

ಡೆಲ್ಲಿಯ ವಿರಾಟ್​ ಕೊಹ್ಲಿಯ ಪಾಲಿಗೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ 2ನೇ ಹೋಮ್​ಗ್ರೌಂಡ್​.! ಐಪಿಎಲ್​ ಆರಂಭದಿಂದಲೂ ಬೆಂಗಳೂರು ಫ್ರಾಂಚೈಸಿಗೆ ಆಡಿರೋ ಕೊಹ್ಲಿಗೂ, ಈ ಮೈದಾನಕ್ಕೂ ವಿಶೇಷ ನಂಟಿದೆ. ಮೊನ್ನೆ 3ನೇ ಟಿ20 ನೋಡಲು ಸ್ಟೇಡಿಯಂಗೆ ಬಂದಿದ್ದ ಬಹುತೇಕರು ಕಿಂಗ್​ ಕೊಹ್ಲಿ ಅಭಿಮಾನಿಗಳೇ.! ಹೀಗಾಗಿಯೇ ಇದನ್ನ ಕಿಂಗ್​ ಕೊಹ್ಲಿ ಕಿಂಗ್​ಡಮ್​ ಎಂದು ಕರೆಯೋದುಂಟು.. ಆದ್ರೆ, ಅಸಲಿಗೆ ಇಲ್ಲಿರೋದು ಹಿಟ್​ಮ್ಯಾನ್​ ರೋಹಿತ್​ರ ಸಾಮ್ರಾಜ್ಯ.

ಬೆಂಗಳೂರಿನ ಮನೆ ಮಗನೇ ಆಗಿರೋ ಕೊಹ್ಲಿ, ಅಪ್ಘನ್​ ವಿರುದ್ಧ ಡಕೌಟ್​ ಆಗಿ ನಿರಾಸೆ ಮೂಡಿಸಿದ್ರು. ಆದ್ರೆ, ಸೆಂಚುರಿ ಸಿಡಿಸಿದ ರೋಹಿತ್​ ಭರ್ಜರಿ ಟ್ರೀಟ್​ ನೀಡಿದ್ರು. ಇದೊಂದೆ ಪಂದ್ಯವಲ್ಲ.. ಬೆಂಗಳೂರಿನಲ್ಲಿ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ ಟ್ರ್ಯಾಕ್​ ರೆಕಾರ್ಡ್​ ರೋಹಿತ್​ಗಿದೆ. ರೋಹಿತ್​ ಶರ್ಮಾ ವಿಶ್ವ ಕ್ರಿಕೆಟನ ದ್ವಿಶತಕ ಸರದಾರ. 3 ಡಬಲ್​ ಸೆಂಚುರಿ ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಹಿಟ್​ಮ್ಯಾನ್​ರ ದ್ವಿಶತಕ ಆಟ ಆರಂಭವಾಗಿದ್ದೇ ಚಿನ್ನಸ್ವಾಮಿ ಮೈದಾನದಿಂದ. 2017ರಲ್ಲಿ ಕಾಂಗರೂಗಳ ಬೇಟೆಯಾಡಿದ್ದ ರೋಹಿತ್​ ಶರ್ಮಾ ಚೊಚ್ಚಲ ದ್ವಿಶತಕ ಸಿಡಿಸಿದ್ರು. 13 ಬೌಂಡರಿ, 12 ಸಿಕ್ಸರ್​ ಸಹಿತ 209 ರನ್​ ಸಿಡಿಸಿ ಮಿಂಚಿದ್ರು.

ಏಕದಿನ ಮಾದರಿ ಸರಾಸರಿ ಬರೋಬ್ಬರಿ 99.60

ರೋಹಿತ್​ ಶರ್ಮಾರ ಏಕದಿನ ಸರಾಸರಿ ನಿಜಕ್ಕೂ ಬೆಚ್ಚಿ ಬೀಳುವಂತಿದೆ. ಚಿನ್ನಸ್ವಾಮಿಯಲ್ಲಿ 5 ಪಂದ್ಯಗಳನ್ನಾಡಿರುವ ರೋಹಿತ್​, ಬರೋಬ್ಬರಿ 99.60ರ ಸರಾಸರಿ ಹೊಂದಿದ್ದಾರೆ. 2 ಶತಕ, 2 ಅರ್ಧಶತಕ ಸಹಿತ 498 ರನ್​ ಚಚ್ಚಿದ್ದಾರೆ.

50 ಸರಾಸರಿಯಲ್ಲಿ T20 ಫಾರ್ಮೆಟ್​ನಲ್ಲಿ ಅಬ್ಬರ

ಟಿ20 ಫಾರ್ಮೆಟ್​ನಲ್ಲೂ ರೋಹಿತ್​ ಶರ್ಮಾ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ್ದಾರೆ. 4 ಪಂದ್ಯಗಳನ್ನಾಡಿ, 50ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. 157.89ರ ಸ್ಟ್ರೈಕ್​ರೇಟ್​ನೊಂದಿಗೆ ಘರ್ಜಿಸಿರುವ ಹಿಟ್​ಮ್ಯಾನ್​​, 1 ಶತಕಗಳಿಸಿದ ದಾಖಲೆ ಹೊಂದಿದ್ದಾರೆ. ಐಪಿಎಲ್​ನಲ್ಲೂ ಚಿನ್ನಸ್ವಾಮಿ ಮೈದಾನದಲ್ಲಿ ರೋಹಿತ್​ ಶರ್ಮಾ ಉತ್ತಮ ಪರ್ಫಾಮೆನ್ಸ್ ನೀಡಿದ ದಾಖಲೆ ಹೊಂದಿದ್ದಾರೆ. ಐಪಿಎಲ್​ ಲೆಕ್ಕಾಚಾರದಲ್ಲಿ ರೋಹಿತ್​ಗಿಂತ, ವಿರಾಟ್​ ಕೊಹ್ಲಿ ಒಂದು ಕೈ ಮೇಲಿದ್ದಾರೆ. ಹೀಗಾಗಿ ಚಿನ್ನಸ್ವಾಮಿ ಯಾರ ಕಿಂಗ್​ಡಮ್​ ಅನ್ನೋದಕ್ಕಿಂತ, ಇವರಿಬ್ಬರು ಈ ಮೈದಾನದಲ್ಲಿ ಕಣಕ್ಕಿಳಿತಿದ್ದಾರೆ ಅಂದ್ರೆ ಅಭಿಮಾನಿಗಳಿಗೆ ಫುಲ್​ ಮಿಲ್ಸ್​​ ಪಕ್ಕಾ ಅನ್ನೋದೆ ಬೆಸ್ಟ್​.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಕಿಂಗ್​​’ ಸಾಮ್ರಾಜ್ಯದಲ್ಲಿ ಹಿಟ್​ಮ್ಯಾನ್ ರೌದ್ರಾವತಾರ.. ಕೊಹ್ಲಿಯಲ್ಲ, ಚಿನ್ನಸ್ವಾಮಿಯ ರಣಬೇಟೆಗಾರ ರೋಹಿತ್..!​​

https://newsfirstlive.com/wp-content/uploads/2023/09/Rohit_Kohli.jpg

Load More