/newsfirstlive-kannada/media/post_attachments/wp-content/uploads/2024/06/Rohit-sharma-1-1.jpg)
ಟೀಂ ಇಂಡಿಯಾ ಹಿಂಬಾಲಿಸುತ್ತಿದ್ದ 13 ವರ್ಷಗಳ ಕನಸು ಕೊನೆಗೂ ನನಸಾಗಿದೆ. ರೋಹಿತ್ ಪಡೆ ಟಿ20 ವಿಶ್ವಕಪ್ನಲ್ಲಿ ಟ್ರೋಫಿ ಗೆದ್ದು ಕೊಳ್ಳುವ ಮೂಲಕ ತನ್ನ ತಾಕತ್ತನ್ನು ಮತ್ತೆ ವಿಶ್ವಕ್ಕೆ ತೋರಿಸಿದೆ. ಸೌತ್ ಆಫ್ರಿಕಾದ ವಿರುದ್ಧ ಭಾರತ ಗೆದ್ದು ಬೀಗಿದಂತೆ ರೋಹಿತ್ ಮೈದಾನದಲ್ಲಿ ಉದ್ದಂಡ ನಮಸ್ಕಾರ ಹಾಕಿದ್ದಾರೆ. ಭೂಮಿಗೆ ತಲೆಯಿಟ್ಟು ವಿಜಯದ ಕಣ್ಣೀರು ಅರ್ಪಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.
ಭಾವನೆಗಳನ್ನು ನಿಯಂತ್ರಿಸಲಾಗದೆ ರೋಹಿತ್ ಶರ್ಮಾ ಮೈದಾನದಲ್ಲೇ ಬಿದ್ದು ಕಣ್ಣೀರು ಸುರಿಸಿದ್ದಾರೆ. ಉಳಿದವರು ನಾಯಕನ ಬಳಿ ಹೋಗಿ ಗೆಲುವನ್ನು ಸಂಭ್ರಮಿಸಿದ್ದಾರೆ. ಕ್ಯಾಮೆರಾ ಕಣ್ಣಿಗಂತೂ ರೋಹಿತ್ ಸಂತಸದ ಕ್ಷಣ ಅದ್ಭುತವಾಗಿ ಸೆರೆಯಾಗಿದೆ. ರೋಹಿತ್ ಕಂಬನಿ ಕಂಡು ಭಾರತೀಯ ಕ್ರಿಕೆಟ್ ಪ್ರಿಯರು ಕೂಡ ಆನಂದ ಭಾಷ್ಪ ಸುರಿಸಿದ್ದಾರೆ.
ಟೀಂ ಇಂಡಿಯಾ ಸೌತ್ ಆಫ್ರಿಕಾದ ವಿರುದ್ಧ 7 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯಕ್ಕಾಗಿ ಮತ್ತು ಫೈನಲ್ ಟ್ರೋಫಿಗೆ ಟೀಂ ಇಂಡಿಯಾ ಮುತ್ತಿಡಲು 13 ವರ್ಷಗಳು ಕಾದಿತ್ತು. ಕೊನೆಗೂ ನಿನ್ನೆ ಸೌತ್ ಆಫ್ರಿಕಾಗೆ ಶಾಕ್ ಕೊಡುವ ಮೂಲಕ ರೋಹಿತ್ ಪಡೆ ಗೆಲುವು ತಮ್ಮದಾಗಿಸಿಕೊಂಡಿದೆ.‘
Waited for this ?❤️??#INDvsSAFinal#RohitSharma?#T20WorldCupFinalpic.twitter.com/RZO1KSyTiu
— Tanay (@tanay_chawda1)
Waited for this 🥹❤️🇮🇳#INDvsSAFinal#RohitSharma𓃵#T20WorldCupFinalpic.twitter.com/RZO1KSyTiu
— Tanay (@tanay_chawda1) June 29, 2024
">June 29, 2024
ಟಿ20ಗೆ ರೋಹಿತ್ ವಿದಾಯ
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ಗೆ ವಿದಾಯ ಸೂಚಿಸಿದ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ ಇದು ನನ್ನ ಕೊನೆಯ ಟಿ20 ವಿಶ್ವಕಪ್ ಪಂದ್ಯ ಹೇಳಿದ್ದಾರೆ. ಆದರೆ ಈ ಸಂಗತಿ ಮಾತ್ರ ಅಭಿಮಾನಿಗಳನ್ನು ಮತ್ತಷ್ಟು ಬೇಸರಕ್ಕೆ ದೂಡುವಂತೆ ಮಾಡಿದೆ.
Moment of the day! ❤️
Rohit Sharma and Virat Kohli!
Winners! ???#T20WorldCup#India#INDvSA2024pic.twitter.com/N0NMXmvXuB— Urrmi (@Urrmi_)
Moment of the day! ❤️
Rohit Sharma and Virat Kohli!
Winners! 🏆🇮🇳#T20WorldCup#India#INDvSA2024pic.twitter.com/N0NMXmvXuB— Urrmi (@Urrmi_) June 29, 2024
">June 29, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ