ಹಿಟ್​ಮ್ಯಾನ್​ ಸ್ಫೋಟಕ ಬ್ಯಾಟಿಂಗ್​.. ರೋಹಿತ್, ಸೂರ್ಯ ಹೊಡೆತಕ್ಕೆ SRHಗೆ ಸೋಲು

author-image
Bheemappa
Updated On
ಹಿಟ್​ಮ್ಯಾನ್​ ಸ್ಫೋಟಕ ಬ್ಯಾಟಿಂಗ್​.. ರೋಹಿತ್, ಸೂರ್ಯ ಹೊಡೆತಕ್ಕೆ SRHಗೆ ಸೋಲು
Advertisment
  • ಪಂದ್ಯದಲ್ಲಿ ಹೈದ್ರಾಬಾದ್​ ತಂಡದ ಮಾನ ಕಾಪಾಡಿದ ಹೆನ್ರಿಚ್​ ಕ್ಲಾಸಿನ್​
  • ಸ್ಫೋಟಕ ಬ್ಯಾಟರ್​​ ಹೆಡ್​ ಡಕೌಟ್ ಆಗಿ ಪೆವಿಲಿಯನ್​ಗೆ ನಡೆದರು
  • ಮತ್ತೊಂದು ಅರ್ಧಶತಕ ಬಾರಿಸಿದ ಹಿಟ್​ಮ್ಯಾನ್​ ರೋಹಿತ್ ಶರ್ಮಾ

ಹೋಮ್ ಗ್ರೌಂಡ್​ನಲ್ಲೇ ಸನ್​ರೈಸರ್ಸ್​ ಹೈದ್ರಾಬಾದ್​ ತಂಡ ಹೀನಾಯವಾಗಿ ಸೋಲೋಪ್ಪಿಕೊಂಡಿದೆ. ರೋಹಿತ್, ಸೂರ್ಯ ಬ್ಯಾಟಿಂಗ್​ ಅಬ್ಬರದಿಂದ ಮುಂಬೈ ಇಂಡಿಯನ್ಸ್ ಸುಲಭವಾಗಿ ಜಯ ಸಾಧಿಸಿದೆ.

ಹೈದರಾಬಾದ್​​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದುಕೊಂಡರು. ಇದರಿಂದ ಎಸ್​ಆರ್​ಹೆಚ್​ ಮೊದಲ ಬ್ಯಾಟಿಂಗ್​​ ಮಾಡುವ ಅವಕಾಶ ಪಡೆದುಕೊಂಡಿತು. ಆರಂಭಿಕರಾಗಿ ಬ್ಯಾಟಿಂಗ್​​​ಗೆ ಆಗಮಿಸಿದ ಟ್ರಾವಿಸ್​ ಹೆಡ್​ ಡಕೌಟ್​ ಆದ್ರೆ, ಅಭಿಷೇಕ್ ಶರ್ಮಾ 8 ರನ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ನಡೆದರು.

publive-image

ಇಶನ್ ಕಿಶನ್ 1, ನಿತೀಶ್ ಕುಮಾರ್ 2, ಅನಿಕೇತ್ ವರ್ಮಾ 12 ರನ್​ಗೆ ಔಟ್​ ಆಗಿದ್ದಾರೆ. ಈ ಪಂದ್ಯದಲ್ಲಿ ಹೆನ್ರಿಚ್‌ ಕ್ಲಾಸೆನ್‌ 34 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ನಿಂದ ಅರ್ಧಶತಕ ಸಿಡಿಸಿದರು. ಒಟ್ಟು 44 ಎಸೆತಗಳಲ್ಲಿ 9 ಫೋರ್ ಹಾಗೂ 2 ಸಿಕ್ಸರ್​ ಸಮೇತ ಕ್ಲಾಸೆನ್‌ 71 ರನ್​ ಚಚ್ಚಿ, ಔಟ್ ಆದರು. ಇವರನ್ನು ಬಿಟ್ಟರೇ ಮನೋಹರ್ 43 ರನ್​ ಗಳಿಸಿ ತಂಡಕ್ಕೆ ನೆರವಾದರು. ಹೀಗಾಗಿ ಹೈದ್ರಾಬಾದ್ 20 ಓವರ್​ಗಳಲ್ಲಿ 8 ವಿಕೆಟ್​ಗೆ 144 ರನ್​ಗಳ ಟಾರ್ಗೆಟ್ ನೀಡಿತ್ತು.

ಆದ್ರೆ ಈ ಟಾರ್ಗೆಟ್​ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್​ ಆರಂಭದಲ್ಲೇ ರಯಾನ್ ಔಟ್​ ಆಗಿ ಶಾಕ್​ಗೆ ಒಳಗಾದರೂ ರೋಹಿತ್ ಶರ್ಮಾ ಮತ್ತೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ, ಈ ಪಂದ್ಯದಲ್ಲೂ ಅರ್ಧಶತಕ ಬಾರಿಸಿ, ಹೈದ್ರಾಬಾದ್​ಗೆ ಚಳಿ ಬಿಡಿಸಿದರು.

ಒಟ್ಟು 46 ಬಾಲ್​ಗಳನ್ನು ಆಡಿದ ರೋಹಿತ್ 8 ಫೋರ್, 3 ಸಿಕ್ಸ್​ಗಳಿಂದ 70 ರನ್​ ಗಳಿಸಿ ಔಟ್ ಆದರು. ವಿಲ್​ ಜಾಕ್ಸ್​ 22 ರನ್​ಗೆ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ತಿಲಕ್​ ಜೊತೆ ಸುರ್ಯಕುಮಾರ್ (40) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. 15.4 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡ ಮುಂಬೈ 146 ರನ್​ ಗಳಿಸಿ ಗೆಲುವಿನ ನಗೆ ಬೀರಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment