/newsfirstlive-kannada/media/post_attachments/wp-content/uploads/2024/07/Rohit-sharma-5.jpg)
ರೋಹಿತ್ ಶರ್ಮಾ ವಿಶ್ವ ಗೆದ್ದ ನಾಯಕ. ದಿ ಗ್ರೇಟ್ ಲೀಡರ್. ಬ್ಯಾಟಿಂಗ್ನಲ್ಲಿ ಅಬ್ಬರಿಸಿದಿದ್ರೂ, ಮೈದಾನದಲ್ಲಿದ್ದಷ್ಟು ಹೊತ್ತು ಪಕ್ಕಾ ಎಂಟರ್ಟೈನ್ಮೆಂಟ್ ನೀಡ್ತಾರೆ. ನೀವು ನೋಡಿರದ ರೋಹಿತ್ರ ಮತ್ತೊಂದು ಅವತಾರವನ್ನ ನೋಡ್ಬೇಕಾ? ಹಾಕಿದ್ರೆ ಈ ಸ್ಟೋರಿ ಪೂರ್ತಿ ಓದಿ.
ಮೋಸ್ಟ್ ಎಮೋಷನಲ್ ಪರ್ಸನ್ ರೋಹಿತ್ ಶರ್ಮಾ..!
ಆನ್ಫೀಲ್ಡ್ನಲ್ಲಿ ರೋಹಿತ್, ಪ್ರತಿ ವಿಚಾರಕ್ಕೂ ರಿಯಾಕ್ಟ್ ಆಗ್ತಾರೆ. ಸೋತಾಗ ಬೇಸರ ವ್ಯಕ್ತಪಡಿಸ್ತಾರೆ. ಗೆದ್ದಾಗ ಖುಷಿಯಲ್ಲಿ ಸಂಭ್ರಮಿಸುತ್ತಾರೆ. ಆ ಗೆಲುವಿಗೆ ಕಾರಣರಾದ ಆಟಗಾರನಿಗಂತೂ ಬಿಗಿದಪ್ಪುಗೆ ನೀಡಿ ಎಮೋಷನಲ್ ಆಗ್ತಾರೆ. ಇದಕ್ಕೆ ಲೆಟೆಸ್ಟ್ ಎಕ್ಸಾಂಪಲ್ ಟಿ20 ವಿಶ್ವಕಪ್ ಫೈನಲ್ನಲ್ಲಿ ಹಾರ್ದಿಕ್ ಜೊತೆಗಿನ ಈ ಸನ್ನಿವೇಶ.
ಇದನ್ನೂ ಓದಿ:ಟೀಂ ಇಂಡಿಯಾದ ಹಿಂದೆ ದೈವ ಶಕ್ತಿಯ ಆಟ! ಗೆಲುವಿನ ಕ್ರೆಡಿಟ್ ದೇವರಿಗೆ ಅರ್ಪಿಸಿದ ಆಟಗಾರರು
ಇದಿಷ್ಟೇ ಅಲ್ಲ.! ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಬಿಗಿದಪ್ಪಿ ಭಾವುಕರಾಗಿದ್ರು. ಇದು ಟಿ20 ವಿಶ್ವಕಪ್ನಲ್ಲಿ ಮಾತ್ರವೇ ನಡೆದಿಲ್ಲ. ಈ ಹಿಂದೆ 2022ರ ಟಿ20 ವಿಶ್ವಕಪ್ನ ಪಾಕ್ ವಿರುದ್ಧದ ಪಂದ್ಯದ ಗೆಲುವಿನ ವೇಳೆಯ ಎತ್ತಿ ಮುದ್ದಾಡಿದ್ದು ಮರೆಯುವಂತಿಲ್ಲ.
ಕೋಪಿಷ್ಟ ಹಿಟ್ಮ್ಯಾನ್ ರೋಹಿತ್..!
ಹೌದು! ರೋಹಿತ್ ಶರ್ಮಾ ಎಮೋಷನಲ್ ವ್ತಕ್ತಿ ಮಾತ್ರವೇ ಅಲ್ಲ. ಕೋಪಿಷ್ಟ ಗುಣವೂ ಇದೆ. ಅದರಲ್ಲೂ ಪಂದ್ಯ ಕೈಜಾರುತ್ತಿದ್ದಾಗ ಕ್ರೂಶಿಯಲ್ ಕ್ಯಾಚ್ಗಳು ಕೈಚೆಲ್ಲಿದ ವೇಳೆ ಕೂಗಾಡಿದ್ದಿದೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್. ಆಸಿಸ್ ಎದುರಿನ ಪಂದ್ಯದಲ್ಲಿ ಪಂತ್ ಮಾಡಿದ ಯಡವಟ್ಟು. ಇದಿಷ್ಟೇ ಅಲ್ಲ. ಇನ್ನು ಹಲವು ಬಾರಿ ಇದು ಸ್ಟೇಡಿಯಂನಲ್ಲಿ ನಡೆದದ್ದಿದೆ.
ಫನ್ನಿಯಾಗಿರ್ತಾರೆ ರೋಹಿತ್ ಶರ್ಮಾ..!
ರೋಹಿತ್ ಶರ್ಮಾ ಎಷ್ಟು ಫನ್ನಿ ಅನ್ನೋಕೆ ಬೆಸ್ಟ್ ಎಕ್ಸಾಂಪಲ್. ಟಿ20 ವಿಶ್ವಕಪ್ ಟ್ರೋಫಿ ಸ್ವೀರಿಸುವ ವೇಳೆ ರೋಬೋಟ್ ವಾಕಿಂಗ್ ಸ್ಟ್ರೈಲ್ನಲ್ಲಿ ಎಂಟ್ರಿ ನೀಡಿದ್ದಾಗಿದೆ.
ಇದನ್ನೂ ಓದಿ: ಅರುಣ್ ಕಟಾರೆಯಿಂದ ಸ್ಯಾಂಡಲ್ವುಡ್ನ ಈ ಟೆಕ್ನಿಷನ್ಗೆ ಸಂಕಷ್ಟ! ಡಮ್ಮಿ ವೆಪನ್ ಕೊಟ್ಟಿದ್ದೇ ಈತನಂತೆ!
ಅಷ್ಟೇ ಅಲ್ಲ.! ಕೆಲವೊಮ್ಮೆ ಆನ್ಫೀಲ್ಡ್ನಲ್ಲಿ ಅಂಪೈರ್ಗಳ ಕಾಲೆಳೆದ ಘಟನೆಗಳ ಜೊತೆ ಸ್ಪೈಡರ್ ಕ್ಯಾಮೆರಾವನ್ನ ಎಳೆಯುವ ಪ್ರಯತ್ನ, ಆ ಕಡೆ ನೋಡು ಎಂಬಂತೆ ಸನ್ನೆ ಮಾಡಿದ್ದಿದೆ. ನಿಜಕ್ಕೂ ನಕ್ಕು ನಗಿಸುತ್ತೆ.
ಬ್ಯಾಟ್ನಿಂದಲೇ ಅಲ್ಲ.. ಸ್ಟೆಪ್ಸ್ ಹಾಕಿ ಕುಣಿಸುತ್ತಾರೆ ರೋಹಿತ್..!
ಬೌಂಡರಿ ಸಿಕ್ಸರ್ಗಳಿಂದ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸ್ತಾರೆ. ಒಂದೊಂದು ಶಾಟ್ ಮೂಲಕ ಸ್ಟೆಪ್ಸ್ ಹಾಕಿಸ್ತಾರೆ. ಇದು ಎಲ್ಲರಿಗೂ ಗೊತ್ತು. ಆದ್ರೆ, ಆಫ್ ದಿ ಫೀಲ್ಡ್ನಲ್ಲಿ ಮಸ್ತ್ ಡ್ಯಾನ್ಸ್ ಮಾಡಿ ಎಂಟರ್ಟೈನ್ಮೆಂಟ್ ಕೂಡ ನೀಡ್ತಾರೆ.
ಇದನ್ನೂ ಓದಿ: ಇಂದು ಯುವ ಡಿವೋರ್ಸ್ ಅರ್ಜಿ ವಿಚಾರಣೆ.. ಕೋರ್ಟ್ಗೆ ತೆರಳುವ ಮುನ್ನ ಹೀಗೊಂದು ಪೋಸ್ಟ್ ಹಂಚಿಕೊಂಡ ಶ್ರೀದೇವಿ!
ಇದಿಷ್ಟೇ ಅಲ್ಲ.! ಹಲವು ಬಾರಿ ಮೈಮರೆತಿದ್ದಿದೆ. ಕೆಲ ಡಿಸಿಷನ್ ವೇಳೆ ಕನ್ಫೂಷನ್ ಆಗಿ ಬ್ಯಾಟ್ಸ್ಮನ್ಗಳನ್ನ ವಾಪಸ್ ಕಳಿಸಿದ್ದಿದೆ. ಆದ್ರೆ, ಇದೆಲ್ಲದರ ಹೊರತಾಗಿ ರೋಹಿತ್, ನಿಜಕ್ಕೂ ಓರ್ವ ಅದ್ಭುತ ವ್ಯಕ್ತಿ ಅನ್ನೋದು ಅಷ್ಟೇ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ