ಸಹೋದರನನ್ನ ಕೋಪದಲ್ಲಿ ನಿಂದಿಸಿದ ರೋಹಿತ್ ಶರ್ಮಾ.. ಅಸಲಿಗೆ ಆಗಿದ್ದೇನು?

author-image
Bheemappa
Updated On
ಶುಭ್​ಮನ್ ಗಿಲ್​​​ಗೆ ಶುಕ್ರದೆಸೆ ಶುರು.. BCCI ಕಡೆಯಿಂದ ಮಹತ್ವದ ನಿರ್ಧಾರ..!
Advertisment
  • ಕಾರ್ಯಕ್ರಮ ಮುಗಿಸಿ ಹೊರಗೆ ಬಂದ ಮೇಲೆ ರೋಹಿತ್ ಗರಂ
  • ಸಹೋದರನ ವಿರುದ್ಧವೇ ಕೋಪಿಸಿಕೊಂಡ ರೋಹಿತ್ ಶರ್ಮಾ
  • ತಂದೆ ಮುಂದೆಯೇ ಸಹೋದರನಿಗೆ ಬೈದ ಕ್ಯಾಪ್ಟನ್​ ರೋಹಿತ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಅನ್ನು ಭಾರತದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರೇ ಉದ್ಘಾಟನೆ ಮಾಡಿದರು. ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಬೆಳೆವಣಿಗೆ ನಡೆದಿದೆ. ಸದ್ಯ ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಅದೊಂದು ವಿಚಾರಕ್ಕೆ ಸ್ವಂತ ತನ್ನ ಸಹೋದರ ವಿರುದ್ಧವೇ ಕೋಪಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾ ತನ್ನ ಕುಟುಂಬದ ಜೊತೆ ತನ್ನ ಹೆಸರಿನ ಸ್ಟ್ಯಾಂಡ್ ಉದ್ಘಾಟನೆ ಮಾಡಲು ತೆರಳಿದ್ದರು. ಸಮಾರಂಭ ಮುಗಿದ ಮೇಲೆ ವಾಪಸ್ ಸ್ಟೇಡಿಯಂನಿಂದ ಹೊರ ಬಂದರು. ಆಗ ಕಾರಿನಲ್ಲಿ ಕುಳಿತುಕೊಳ್ಳಲು ಹೋಗುತ್ತಿರುತ್ತಾರೆ ಈ ವೇಳೆ ಅವರ ಐಷಾರಾಮಿ ಕಾರು ಡ್ಯಾಮೇಜ್ ಆಗಿರೋದು ಕಂಡು ಬರುತ್ತದೆ. ಇದರಿಂದ ರೋಹಿತ್ ಶರ್ಮಾ ಸ್ಥಳದಲ್ಲೇ ಕೋಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Mr. IPL​ ಪಟ್ಟವೇರಿದ ಕಿಂಗ್​ ಕೊಹ್ಲಿ.. ಆರ್​​ಸಿಬಿ ಸ್ಟಾರ್ ಪ್ಲೇಯರ್​ಗೆ ಮತ್ತೊಂದು ಗರಿ!

publive-image

ಐಷಾರಾಮಿ ಕಾರಿನ ಹಿಂಬದಿ ನೆಗ್ಗಿ (Dent) ಹೋಗಿರುತ್ತದೆ. ಅಲ್ಲದೇ ಗೀಚಿದಂತೆ ಆಗಿರುತ್ತದೆ. ಇದನ್ನು ನೋಡಿದ ರೋಹಿತ್ ಶರ್ಮಾ ತನ್ನ ಸಹೋದರ ವಿಶಾಲ್ ಮೇಲೆ ಕೋಪಿಸಿಕೊಳ್ಳುತ್ತಾರೆ. ತಂದೆ ಮುಂದೆಯೇ ಹಿಂದಿಯಲ್ಲಿ ಮಾತನಾಡುತ್ತ, ಕಾರಿನ ಕಡೆಗೆ ಕೈ ತೋರಿಸುತ್ತ ಯೇ.. ಕ್ಯಾ ಹೈ? ಎಂದು ಪ್ರಶ್ನೆ ಮಾಡುತ್ತಾರೆ. ಸಹೋದರನ ಕಡೆ ಕೈ ತೋರಿಸುತ್ತ ಏನೋ ಹೇಳುತ್ತಾರೆ. ಅದೇ ಕೋಪದಲ್ಲೇ ಹಾಗೇ ಕಾರು ಹತ್ತುತ್ತಾರೆ.

ಕಾರ್ಯಕ್ರಮ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರು ತಂದೆ, ತಾಯಿ, ಹೆಂಡತಿ ಹಾಗೂ ಸಹೋದರನ ಜೊತೆ ವಾಂಖೆಡೆ ಮೈದಾನಕ್ಕೆ ಆಗಮಿಸಿದ್ದರು. ಇನ್ನು ರೋಹಿತ್ ಶರ್ಮಾ ಅವರು ಭಾರತ ತಂಡದ ಟಿ20 ಹಾಗೂ ಟೆಸ್ಟ್​ ಕ್ರಿಕೆಟ್​ಗೆ ಈಗಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸದ್ಯ ಈಗ ಏಕದಿನ ತಂಡದ ನಾಯಕ ಮಾತ್ರ ಆಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment