newsfirstkannada.com

ರೋಹಿತ್​ ಕ್ಯಾಪ್ಟನ್​ ಆಗಿದ್ದೇ ಯಂಗ್​ ಪ್ಲೇಯರ್ಸ್​ ಅದೃಷ್ಟವೇ.. ಯುವಕರಿಗೆ ಹಿಟ್​ಮ್ಯಾನ್​ ಪ್ರೋತ್ಸಾಹ​ ಹೇಗಿದೆ?

Share :

Published February 19, 2024 at 3:44pm

Update February 19, 2024 at 4:10pm

    ನಿಸ್ವಾರ್ಥಿ ರೋಹಿತ್ ಶರ್ಮಾ​ ಟೀಮ್ ಇಂಡಿಯಾಗೆ ಸಿಕ್ಕಿದ್ದೇ ಪುಣ್ಯನಾ?

    ಪ್ಲೇಯರ್ಸ್​ಗೆ ಸದಾ ಬೆಂಬಲ, ಬೇರೆಯವರ ಸಕ್ಸಸ್​ಗೆ ಸಖತ್​ ಸಂಭ್ರಮ

    ದಾಖಲೆಗಳಿಗಾಗಿ ಆಡುವ ಜಾಯಮಾನ ರೋಹಿತ್​​ದು​ ಅಲ್ಲವೇ ಅಲ್ಲ

ಟೀಮ್ ಇಂಡಿಯಾದಲ್ಲಿ ಯಂಗ್​ಸ್ಟರ್ಸ್​ ದರ್ಬಾರ್ ಜೋರಾಗಿದೆ. ಸೀನಿಯರ್​​ಗಳೇ ನಾಚುವಂತಹ ಪ್ರದರ್ಶನ ನೀಡ್ತಿದ್ದಾರೆ. ಇದಕ್ಕೆಲ್ಲ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮಾ. ಹಿಟ್​ಮ್ಯಾನ್​​​ರಂತ ನಾಯಕನನ್ನ ಪಡೆದ ಯಂಗ್​ಸ್ಟರ್ಸ್​ ನಿಜಕ್ಕೂ ಅದೃಷ್ಟವಂತರು. ಯಾಕೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಎಂ.ಎಸ್ ಧೋನಿ.. ಟೀಮ್ ಇಂಡಿಯಾದ ಹಿರಿಯಣ್ಣನಾಗಿ, ನಾಯಕನಾಗಿ, ಮೆಂಟರ್ ಆಗಿ ತಂಡವನ್ನ ಯಶಸ್ಸಿನ ಉತ್ತುಂಗಕ್ಕೇರಿಸಿದ್ರು. ಸದ್ಯ ಧೋನಿ ನಿರ್ಗಮಿಸಿದ್ದಾರೆ. ಮಾಹಿಯಂತೆ ಎಲ್ಲ ಗುಣಗಳುಳ್ಳ ಮತ್ತೋರ್ವ ಕ್ಯಾಪ್ಟನ್ ಟೀಮ್ ಇಂಡಿಯಾಗೆ ಸಿಕ್ಕಿದ್ದಾರೆ. ಆತ ಮತ್ಯಾರು ಅಲ್ಲ, ರೋಹಿತ್​​ ಶರ್ಮಾ.

ರೋಹಿತ್​​​​ ನಾಯಕತ್ವದಲ್ಲಿ ಯಂಗ್​ಸ್ಟರ್ಸ್​ ಧಮ್​ದಾರ್​ ಪ್ರದರ್ಶನ ನೀಡ್ತಿದ್ದಾರೆ. ಯಾಕಂದ್ರೆ, ರೋಹಿತ್​ ಎಲ್ಲರಂತೆ ಸಾಮಾನ್ಯ ನಾಯಕನಲ್ಲ. ದಾಖಲೆಗಳಿಗಾಗಿ ಆಡುವ ಜಾಯಮಾನ ರೋಹಿತ್​​ದ್​ ಅಲ್ಲವೇ ಅಲ್ಲ. ನಿಸ್ವಾರ್ಥತೆ ರೋಹಿತ್​ರ ಮಹಾಗುಣ. ಬೇರೆಯವರ ಯಶಸ್ಸನ್ನ ಸಂಭ್ರಮಿಸೋದ್ರಲ್ಲಿ ಸದಾ ಮುಂದು. ಹೀಗಾಗಿಯೇ ಹೇಳಿದ್ದು ಯಂಗ್​ಸ್ಟರ್ಸ್​ ನಿಜಕ್ಕೂ ಅದೃಷ್ಟವಂತರು ಅಂತಾ.

ಜೈಸ್ವಾಲ್​ ಸಾಧನೆಗೆ ತಾನೇ ಸಾಧಿಸಿದಷ್ಟು ಸಂಭ್ರಮ..!

ಇಂತಹ ಗುಣ ಎಷ್ಟು ಜನರಲ್ಲಿ ಇದ್ದಿರಬಹುದು ಹೇಳಿ? ರಾಜ್​ಕೋಟ್​​ ಟೆಸ್ಟ್​​ನ 3ನೇ ದಿನ ಡೇರ್ ಡೆವಿಲ್​ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ರು. ಅತ್ತ ಜೈಸ್ವಾಲ್​ ಆನ್​​ ಫೀಲ್ಡ್​​ನಲ್ಲಿ ಐಕಾನಿಕ್​​​​​​​​​​​​​​​​​​​ ಜಂಪಿಂಗ್ ಸ್ಟ್ರೈಲ್​​​ನಲ್ಲಿ ಶತಕದ ಸಂಭ್ರಮದಲ್ಲಿ ಮುಳುಗಿದ್ರೆ, ಇತ್ತ ಡ್ರೆಸ್ಸಿಂಗ್ ರೂಮ್​​​​​​​​ನಲ್ಲಿ ರೋಹಿತ್​ ತಾವೇ ಶತಕ ಸಿಡಿಸಿದಂತೆ ಸಂಭ್ರಮಿಸಿದ್ರು. ದ್ವಿತಕ ಕಂಪ್ಲೀಟ್​​ ಮಾಡಿದಾಗಲೂ ಹೀಗೆ ಖುಷಿಪಟ್ರು.

ಸರ್ಫರಾಜ್ ರನೌಟಾಗಿದ್ದಕ್ಕೆ ಕ್ಯಾಪ್​ ಬಿಸಾಡಿ ಆಕ್ರೋಶ

ಡೆಬ್ಯುಟಂಟ್​​​ ಸರ್ಫರಾಜ್ ಜಡೇಜಾ ಮಾಡಿದ ಎಡವಟ್ಟಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಗಳಿಸಿ ರನೌಟಾಗಿದ್ರು. ಸರ್ಫರಾಜ್​ ಔಟಾಗ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಕೂತಿದ್ದ ಕ್ಯಾಪ್ಟನ್ ರೋಹಿತ್​​ ಕೆರಳಿ ಕೆಂಡವಾದ್ರು. ಧರಿಸಿದ್ದ ಕ್ಯಾಪ್​ ಅನ್ನ ಬಿಸಾಡಿ ಆಕ್ರೋಶ ವ್ಯಕ್ರಪಡಿಸಿದ್ರು. ಅಷ್ಟಕ್ಕೂ ಇಲ್ಲಿ ಹಿಟ್​ಮ್ಯಾನ್ ಬೇಸರಗೊಳ್ಳುವ ಅವಶ್ಯವಿರಲಿಲ್ಲ. ಆದ್ರೆ, ಸರ್ಫರಾಜ್​ಗಾದ ನೋವು ರೋಹಿತ್​ಗೆ ಅರ್ಥವಾಗಿತ್ತು.

ತಾನು ಶತಕ ಸಿಡಿಸಿದಾಗ ಸಿಂಪಲ್ ಸೆಲಬ್ರೇಶನ್

ರಾಜ್​ಕೋಟ್ ಟೆಸ್ಟ್​​ನ ಮೊದಲ ಇನ್ನಿಂಗ್ಸ್​​ನಲ್ಲಿ ರೋಹಿತ್​ ಭರ್ಜರಿ ಶತಕ ಸಿಡಿಸಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರು. ಇಂಗ್ಲೆಂಡ್​ ವಿರುದ್ಧ 2 ವರ್ಷಗಳ ನಂತ್ರ ಶತಕ ಹೊಡೆದ್ರೂ, ಸ್ವಲ್ಪವೂ ಅತಿಯಾಗಿ ಸಂಭ್ರಮಿಸಲಿಲ್ಲ. ಸಿಂಪಲ್ ಆಗಿ ಬ್ಯಾಟ್ ಮೇಲೆಕ್ಕೆತ್ತಿ ಖುಷಿಪಟ್ಟರು.

ಸರ್ಫರಾಜ್ ಅರ್ಧಶತಕಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮ

ಡೆಬ್ಯುಟಂಟ್​​ ಸರ್ಫರಾಜ್​​​​​​​​ಗೆ ಕ್ಯಾಪ್ಟನ್ ರೋಹಿತ್​ ಪ್ರತಿ ಹಂತದಲ್ಲ ಬೆಂಬಲವಾಗಿ ನಿಂತರು. ರನೌಟಾದಾಗ ಬೇಸರ ವ್ಯಕ್ತಪಡಿಸಿದ್ದ ರೋಹಿತ್ ಅದೇ ಸರ್ಫರಾಜ್​​ ಚೊಚ್ಚಲ ಅರ್ಧಶತಕ ಸಿಡಿಸಿದಾಗ ಚಪ್ಪಾಳೆ ಹೊಡೆದು ಹುರಿದುಂಬಿಸಿದ್ರು.

ಯಂಗ್​ಸ್ಟರ್ಸ್​ ಪಾಲಿನ ಮಾರ್ಗದರ್ಶಕ ರೋಹಿತ್​​​..!

ತನ್ನದ ಚುಕ್ಕಾಣಿ ಹಿಡಿದಿರೋ ರೋಹಿತ್​​​​​​ ಯುವ ಆಟಗಾರರಿಗೆ ಉತ್ತಮ ಗೈಡ್ ನೀಡ್ತಿದ್ದಾರೆ. ಸ್ವಲ್ವವು ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದಲೇ ಅವರನ್ನ ಹುರಿದುಂಬಿಸ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಟಿಪ್ಸ್ ನೀಡೋದ್ರ ಜೊತೆ ಮಾಡುವ ತಪ್ಪುಗಳನ್ನ ತಿದ್ದುವ ಕೆಲಸ ಮಾಡ್ತಿದ್ದಾರೆ. ಯಂಗ್​ಸ್ಟರ್ಸ್​ ನಿರ್ಭಯವಾಗಿ ಆಡುವ ಸ್ವಾತಂತ್ರ್ಯ ನೀಡ್ತಾ, ಕ್ರಿಕೆಟ್ ಪ್ರೇಮಿಗಳ ದಿಲ್ ಗೆಲ್ತಿದ್ದಾರೆ. ಇಂತಹ ನಾಯಕರನ್ನ ಪಡೆದ ಯಂಗ್​ಸ್ಟರ್ಸ್​ ಅದೃಷ್ಟವಂತರೇ ಸರಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ ಕ್ಯಾಪ್ಟನ್​ ಆಗಿದ್ದೇ ಯಂಗ್​ ಪ್ಲೇಯರ್ಸ್​ ಅದೃಷ್ಟವೇ.. ಯುವಕರಿಗೆ ಹಿಟ್​ಮ್ಯಾನ್​ ಪ್ರೋತ್ಸಾಹ​ ಹೇಗಿದೆ?

https://newsfirstlive.com/wp-content/uploads/2024/02/Yashasvi_Jaiswal-2.jpg

Load More