newsfirstkannada.com

ಒಲ್ಲದ ಮನಸ್ಸಿನಂದಲೇ ಹಾರ್ದಿಕ್ ಪಾಂಡ್ಯನ ತಬ್ಬಿಕೊಂಡ ರೋಹಿತ್ ಶರ್ಮಾ -ವಿಡಿಯೋ

Share :

Published March 21, 2024 at 8:07am

Update March 21, 2024 at 8:26am

  ರೋಹಿತ್ ಶರ್ಮಾ, ಹಾರ್ದಿಕ್ ನಡುವೆ ಮುನಿಸು ದೂರಾದೂರ?

  ಭಾನುವಾರ ಮೊದಲ ಪಂದ್ಯ ಆಡಲಿರುವ ಮುಂಬೈ ಇಂಡಿಯನ್ಸ್

  ನಾಳೆ ಚೆನ್ನೈ ಮತ್ತು ಆರ್​​ಸಿಬಿ ನಡುವೆ ಮೊದಲ ಐಪಿಎಲ್ ಪಂದ್ಯ ​

ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನೆಟ್ಸ್​​ನಲ್ಲಿ ಅಭ್ಯಾಸ ಮಾಡ್ತಿರುವ ವೇಳೆ ಇಬ್ಬರು ಆಟಗಾರರು ಜೊತೆಯಾಗಿರುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್​ ಶೇರ್ ಮಾಡಿದೆ. ಆದರೆ ರೋಹಿತ್​ ಅವರು ಪಾಂಡ್ಯರನ್ನು ಒಲ್ಲದ ಮನಸ್ಸಿನಿಂದಲೇ ತಬ್ಬಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.

ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ಬಂದು ರೋಹಿತ್ ಶರ್ಮಾ ಅವರನ್ನು ತಬ್ಬಿಕೊಳ್ತಾರೆ. ಆಗ ರೋಹಿತ್ ಶರ್ಮಾ, ಪಾಂಡ್ಯಗೆ ಹ್ಯಾಂಡ್​ಶೇಕ್ ಮಾಡಲು ಮುಂದಾಗಿ, ಕೊನೆಗೆ ತಬ್ಬಿಕೊಳ್ತಾರೆ. ಮುಂಬೈ ಇಂಡಿಯನ್ಸ್​ ಅಭಿಮಾನಿಗಳಿಗೆ ಈ ವಿಡಿಯೋ ತುಂಬಾ ಖುಷಿ ಕೊಡುವಂತಿದೆ.

ಯಾಕೆಂದರೆ ಮುಂಬೈ ಇಂಡಿಯನ್ಸ್ ಪಾಂಡ್ಯ ಕ್ಯಾಪ್ಟನ್ ಮಾಡಿದ ಬೆನ್ನಲ್ಲೇ ರೋಹಿತ್ ಶರ್ಮಾ, ಬೇಸರಗೊಂಡಿದ್ದಾರೆ ಎನ್ನಲಾಗಿತ್ತು. ಇಲ್ಲಿ ಕ್ಯಾಪ್ಟನ್ ಪಾಂಡ್ಯ, ರೋಹಿತ್​ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸೂಚನೆಯನ್ನು ನೀಡಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಂಪ್​ಗೆ ಇನ್ನೂ ಬಂದೇ ಇಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ.

ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಪಂದ್ಯ ನಡೆಯಲಿದೆ. ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ಭಾನುವಾರ ಗುಜರಾತ್ ಟೈಟನ್ಸ್​ ವಿರುದ್ಧ ಆಡಲಿದೆ.

View this post on Instagram

A post shared by Mumbai Indians (@mumbaiindians)

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಲ್ಲದ ಮನಸ್ಸಿನಂದಲೇ ಹಾರ್ದಿಕ್ ಪಾಂಡ್ಯನ ತಬ್ಬಿಕೊಂಡ ರೋಹಿತ್ ಶರ್ಮಾ -ವಿಡಿಯೋ

https://newsfirstlive.com/wp-content/uploads/2024/03/ROHIT-1.jpg

Load More