newsfirstkannada.com

‘ಹಸಿದವರಿಗೆ ಮಾತ್ರ ಅವಕಾಶ’- ಅಯ್ಯರ್​​, ಇಶಾನ್​​, ಪಾಂಡ್ಯ ಬ್ರದರ್ಸ್​ ವಿರುದ್ಧ ರೋಹಿತ್ ಭಾರೀ​ ಆಕ್ರೋಶ

Share :

Published February 27, 2024 at 5:25pm

Update February 27, 2024 at 5:27pm

  ಇಂಗ್ಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಭರ್ಜರಿ ಗೆಲುವು

  ಇಶಾನ್​​, ಅಯ್ಯರ್​​, ಪಾಂಡ್ಯ ಬ್ರದರ್ಸ್​ ವಿರುದ್ಧ ಆಕ್ರೋಶ

  ಕ್ಯಾಪ್ಟನ್​​ ರೋಹಿತ್​ ಶರ್ಮಾ ಆಕ್ರೋಶ ಹೊರಹಾಕಿದ್ದೇಕೆ?

ಕ್ರಿಕೆಟ್​ ಆಡೋ ಹಸಿವಿದ್ದವರಿಗೆ ಮಾತ್ರ ಭಾರತ ತಂಡದಲ್ಲಿ ಅವಕಾಶ ಎಂದು ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಹೇಳಿದ್ದಾರೆ. ಈ ಮೂಲಕ ಬಿಸಿಸಿಐ ಮಾತಿಗೆ ಕ್ಯಾರೇ ಎನ್ನದೇ ರಣಜಿ ಕ್ರಿಕೆಟ್​​ ಆಡದ ಟೀಮ್​ ಇಂಡಿಯಾದ ಸ್ಟಾರ್​ ಪ್ಲೇಯರ್ಸ್​​ ಆದ ಇಶಾನ್​ ಕಿಶನ್​​, ಶ್ರೇಯಸ್​​ ಅಯ್ಯರ್, ದೀಪಕ್​​ ಚಹರ್​​​​ ಹಾಗೂ ಪಾಂಡ್ಯ ಬ್ರದರ್ಸ್​​ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ರೋಹಿತ್ ಶರ್ಮಾ ಹೇಳಿದ್ದೇನು..?

ಇಂಗ್ಲೆಂಡ್​ ವಿರುದ್ಧ ಗೆದ್ದ ಬಳಿಕ ಮಾತಾಡಿದ ರೋಹಿತ್​ ಶರ್ಮಾ, ಟೆಸ್ಟ್ ಕ್ರಿಕೆಟ್​​ನ ಟಫೆಸ್ಟ್ ಫಾರ್ಮೆಟ್​​. ಜೀವನದಲ್ಲಿ ಸಕ್ಸಸ್​ ಆಗಬೇಕು ಅನ್ನೋರಿಗೆ ಟೆಸ್ಟ್​ನಲ್ಲಿ ಮಿಂಚಲು ಹಸಿವಿರಬೇಕು. ಕ್ರಿಕೆಟ್​ ಆಡಲು ಹಸಿವು ತುಂಬಾ ಮುಖ್ಯ. ಯಾರಿಗೆ ಹಸಿವು ಇದೆಯೋ ಅವರಿಗೆ ಮಾತ್ರ ಭಾರತ ತಂಡದಲ್ಲಿ ಅವಕಾಶ ಎಂದರು.

ಹಸಿವು ಇದ್ದವರು ಮಾತ್ರ ದೀರ್ಘ ಕಾಲ ಉಳಿಯಲಿದ್ದಾರೆ. ಸಕ್ಸಸ್​ ಬೇಡ ಅನ್ನೋರು ಚೆನ್ನಾಗಿ ಆಡದವರು ಮನೆಗೆ ಹೋಗುತ್ತಾರೆ. ಕ್ರಿಕೆಟ್​​ ಮೇಲೆ ಹಸಿವು ಇದ್ದವರು ಯಾವಾಗಲೂ ತಂಡಕ್ಕಾಗಿ ಆಡುತ್ತಾರೆ. ಭಾರತ ತಂಡವನ್ನು ಗೆಲ್ಲಿಸುತ್ತಾರೆ. ಹಾಗಾಗಿ ಆಡುವ ಹಸಿವು ಇದ್ದವರಿಗೆ ಮಾತ್ರ ನಾವು ಅವಕಾಶ ನೀಡುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿದ್ರು.

ಜೀವನದಲ್ಲಿ ಕೆಲವು ಬಾರಿ ಮಾತ್ರ ಅವಕಾಶಗಳು ಸಿಗುತ್ತವೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳದಿದ್ರೆ ಮನೆಗೆ ಹೋಗುತ್ತೀರಿ. ಹಾಗಾಗಿ ಅವಕಾಶ ಬಳಸಿಕೊಳ್ಳುವ, ತಂಡಕ್ಕಾಗಿ ಆಡುವ, ಉತ್ತಮ ಪ್ರದರ್ಶನ ನೀಡುವವರಿಗೆ ಯಾವಾಗಲೂ ನಮ್ಮ ಬೆಂಬಲ ಇರುತ್ತದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹಸಿದವರಿಗೆ ಮಾತ್ರ ಅವಕಾಶ’- ಅಯ್ಯರ್​​, ಇಶಾನ್​​, ಪಾಂಡ್ಯ ಬ್ರದರ್ಸ್​ ವಿರುದ್ಧ ರೋಹಿತ್ ಭಾರೀ​ ಆಕ್ರೋಶ

https://newsfirstlive.com/wp-content/uploads/2024/02/Rohit-Sharma_PC.jpg

Load More