newsfirstkannada.com

T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

Share :

Published May 5, 2024 at 3:42pm

    ಹಿಟ್​ಮ್ಯಾನ್​ಗೆ ವಿಶ್ರಾಂತಿ ನೀಡುತ್ತಾ ಭಾರತದ ಕ್ರಿಕೆಟ್ ಮಂಡಳಿ..?

    ಕೊಲ್ಕತ್ತಾ ನೈಟ್​​ ರೈಡರ್ಸ್ ವಿರುದ್ಧ ಬ್ಯಾಟಿಂಗ್ ಮಾಡಿದ್ದ ರೋಹಿತ್

    ಕ್ಯಾಪ್ಟನ್ ರೋಹಿತ್ ಶರ್ಮಾಗೆ ಆಗಿರುವ ಇಂಜುರಿ ಆದ್ರೂ ಏನು?

ವಿಶ್ವಕಪ್​​ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿ ಒಂದು ವಾರ ಕಳೆದಿಲ್ಲ. ಅದಾಗಲೇ ಭಾರತೀಯ ಕ್ರಿಕೆಟ್​ ವಲಯದಲ್ಲಿ ಹೊಸ ಟೆನ್ಶನ್​ ಶುರುವಾಗಿದೆ. ಇಷ್ಟು ದಿನ ಟೀಮ್​ ಇಂಡಿಯಾ ಸಾರಥಿ ರೋಹಿತ್​ ಶರ್ಮಾ ಫಾರ್ಮ್​​ನಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಇದೀಗ ಫಿಟ್​ನೆಸ್​ ಕೂಡ ಹೊಸ ಸಮಸ್ಯೆ ತಂದಿಟ್ಟಿದೆ. ಅಷ್ಟಕ್ಕೂ ರೋಹಿತ್​ ಶರ್ಮಾಗೆ ಏನಾಯ್ತು.?

ಟಿ20 ವಿಶ್ವಕಪ್​ ಆರಂಭಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ತಂಡಗಳ ತಯಾರಿ ಜೋರಾಗಿದೆ. ಟೀಮ್​ ಇಂಡಿಯಾ ಕೂಡ ಬಲಿಷ್ಠ ತಂಡವನ್ನ ಪ್ರಕಟಿಸಿದ್ದು, ಐಸಿಸಿ ಟ್ರೋಫಿ ಬರಕ್ಕೆ ಈ ಬಾರಿ ಬ್ರೇಕ್​ ಹಾಕಲೇಬೇಕು ಎಂದು ಪಣ ತೊಟ್ಟಿದೆ. ಆದ್ರೆ, ಸಿದ್ಧತೆ ಆರಂಭಿಸೋಕು ಮುನ್ನವೇ ದೊಡ್ಡ ವಿಘ್ನ ಎದುರಾಗಿದೆ.

ವಿಶ್ವ ಸಮರವನ್ನ ಗೆಲ್ಲಲು ಟೀಮ್​ ಇಂಡಿಯಾ ಬಲಿಷ್ಠ ತಂಡ ಪ್ರಕಟಿಸಿ ಇನ್ನೂ ಒಂದು ವಾರ ಕಳೆದಿಲ್ಲ. ಅದಾಗಲೇ ಟೀಮ್​ ಇಂಡಿಯಾ ಹಿನ್ನಡೆ ಎದುರಾಗಿದೆ. ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಇಂಜುರಿ ಕಾಟ ಶುರುವಾಗಿದೆ. ವಿಶ್ವಕಪ್​​ಗೂ ಮುನ್ನ ನಾಯಕನ ಇಂಜುರಿ, ಬಿಸಿಸಿಐ ವಲಯದಲ್ಲಿ ಹೊಸ ಆತಂಕವನ್ನ ಸೃಷ್ಟಿಸಿದೆ.

ಮೊನ್ನೆ ನಡೆದ ಕೊಲ್ಕತ್ತಾ ನೈಟ್​​ ರೈಡರ್ಸ್​ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪ್ಲೇಯಿಂಗ್​ ಇಲೆವೆನ್​ನಿಂದ ರೋಹಿತ್​ ಹೊರಬಿದ್ದಿದ್ರು. ಇಂಪ್ಯಾಕ್ಟ್​ ಪ್ಲೇಯರ್​​ ಲಿಸ್ಟ್​ನಲ್ಲಿ ಕಾಣಿಸಿಕೊಂಡ ಹಿಟ್​ಮ್ಯಾನ್​, ಬ್ಯಾಟಿಂಗ್​ ಮಾತ್ರ ಮಾಡಿದ್ರು. ಪಂದ್ಯದ ಬಳಿಕ ರೋಹಿತ್​​ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಬಿದ್ದಿದ್ಯಾಕೆ ಎಂಬ ಪ್ರಶ್ನೆಗೆ ಮುಂಬೈ ತಂಡದ ಪಿಯೂಶ್​ ಚಾವ್ಲಾ ಉತ್ತರ ನೀಡಿದ್ದಾರೆ.

ಬ್ಯಾಕ್ ​​ಸ್ಟಿಫ್​ನೆಸ್​ನಿಂದ ರೋಹಿತ್​ ಬಳಲುತ್ತಿದ್ದಾರೆ. ಇದೊಂದು ಮುನ್ನೆಚ್ಚೆರಿಕಾ ಕ್ರಮವಾಗಿತ್ತು.

ಪಿಯೂಶ್​ ಚಾವ್ಲಾ

ರೋಹಿತ್​ಗೆ ಬೆನ್ನುನೋವು.. ಬಿಸಿಸಿಐ ವಲಯದಲ್ಲಿ ಟೆನ್ಶನ್​.!

ರೋಹಿತ್​ ಶರ್ಮಾ ಬೆನ್ನುನೋವಿನ ಸಮಸ್ಯೆಗೆ ತುತ್ತಾದ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಟೆನ್ಶನ್​ ಶುರುವಾಗಿದೆ. ಸದ್ಯಕ್ಕೆ ಇದು ಮೈಲ್ಡ್​ ಇಂಜುರಿ ಎಂದು ಟೀಮ್​ ಮೆಂಬರ್​​ ಪಿಯೂಷ್ ಚಾವ್ಲಾ ಹೇಳಿದ್ದಾರೆ. ಹಾಗಿದ್ರೂ, ಮುಂದಿನ ದಿನಗಳಲ್ಲಿ ಉಲ್ಬಣವಾದ್ರೆ ಎನು ಗತಿ.? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ.

ಉಳಿದ ಐಪಿಎಲ್​​ ಪಂದ್ಯಗಳಿಂದ ರೋಹಿತ್​ಗೆ ರೆಸ್ಟ್​.?

ರೋಹಿತ್​ ಶರ್ಮಾ ಇಂಜುರಿ ವಿಶ್ವಕಪ್​ ಸಿದ್ಧತೆಗೂ ಹಿನ್ನಡೆಯನ್ನ ಉಂಟು ಮಾಡಲಿದೆ. ಹೀಗಾಗಿ, ಈಗಾಗಲೇ ಪ್ಲೇ ಆಫ್​ನಿಂದ ಹೊರ ಬಿದ್ದಿರೋದ್ರಿಂದ, ಉಳಿದ ಪಂದ್ಯಗಳಲ್ಲಿ ರೋಹಿತ್​ಗೆ ರೆಸ್ಟ್​ ನೀಡುವಂತೆ ಮುಂಬೈ ಫ್ರಾಂಚೈಸಿಗೆ ಬಿಸಿಸಿಐ ಮನವಿ ಮಾಡೋ ಸಾಧ್ಯತೆಯಿದೆ. ರೋಹಿತ್​ ಶರ್ಮಾಗೂ ನೇರವಾಗಿ ವಿಶ್ರಾಂತಿ ಪಡೆಯುವಂತೆ ಸೂಚಿಸೋ ಸಾಧ್ಯತೆ ಇದೆ.

ಸತತ ವೈಫಲ್ಯದ ಬೆನ್ನಲ್ಲೇ ಇಂಜುರಿ ಆಘಾತ.!

ಇಂಜುರಿಯ ಸಮಸ್ಯೆ ಮಾತ್ರವಲ್ಲ.. ವಿಶ್ವಕಪ್​​ಗೂ ಮುನ್ನ ರೋಹಿತ್​ ಶರ್ಮಾರ ಫಾರ್ಮ್​ ಕೂಡ ದೊಡ್ಡ ತಲೆನೋವು ತಂದಿಟ್ಟಿದೆ. ಈ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಎದುರು ಶತಕ ಸಿಡಿಸಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಕಳೆದ 5 ಪಂದ್ಯಗಳಲ್ಲಂತೂ ರನ್​ಗಳಿಕೆಗೆ ಹಿಟ್​ಮ್ಯಾನ್​​ ಪರದಾಡಿದ್ದಾರೆ.

ಕಳೆದ 5 ಪಂದ್ಯಗಳಲ್ಲಿ ರೋಹಿತ್​

ಕಳೆದ 5 ಪಂದ್ಯಗಳಲ್ಲಿ ರೋಹಿತ್​ ಬ್ಯಾಟಿಂಗ್​ನಲ್ಲಿ ಅಟ್ಟರ್​ಫ್ಲಾಪ್​ ಆಗಿದ್ದಾರೆ. ಪಂಜಾಬ್​ ಕಿಂಗ್ಸ್​ ಎದುರು 36 ರನ್​ಗಳಿಸಿದ್ದ ರೋಹಿತ್​, ರಾಜಸ್ತಾನ್​ ರಾಯಲ್ಸ್​ ಎದುರು 6 ರನ್​ಗಳಿಸಿ ನಿರ್ಗಮಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 8, ಲಕ್ನೋ ಎದುರು 04 ಹಾಗೂ ಕೆಕೆಆರ್​​ ಎದುರು 11 ರನ್​ಗಳಿಸಿ ಔಟಾಗಿದ್ದಾರೆ. ​​​

ಒಂದೆಡೆ ಫ್ಲಾಪ್​ ಪ್ರದರ್ಶನ, ಇನ್ನೊಂದೆಡೆ ಇಂಜುರಿ ಆಘಾತ.. ರೋಹಿತ್​ ಶರ್ಮಾ ಫಾರ್ಮ್​ ಹಾಗೂ ಫಿಟ್​ನೆಸ್​ ಸದ್ಯ ಟೀಮ್​ ಇಂಡಿಯಾ ವಲಯದಲ್ಲಿ ಆತಂಕವನ್ನ ಹುಟ್ಟಿಸಿದೆ. ರೋಹಿತ್​ ಶರ್ಮಾ ಆದಷ್ಟು ಬೇಗ ಫಿಟ್​ನೆಸ್​ ಸಾಧಿಸಲಿ, ಕಠಿಣ ಅಭ್ಯಾಸ ನಡೆಸಿ ಫಾರ್ಮ್​ ಕಂಡುಕೊಳ್ಳಲಿ ಅನ್ನೋದು ಅಭಿಮಾನಿಗಳ ಹಾರೈಕೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

https://newsfirstlive.com/wp-content/uploads/2024/05/ROHIT_SHARMA-1.jpg

Load More