Advertisment

ರೋಹಿತ್ ಶರ್ಮಾಗೆ ಕಾಡುತ್ತಿದೆ ಗಾಯದ ಸಮಸ್ಯೆ! 4ನೇ ಟೆಸ್ಟ್​ಗೆ ಮುಂಬೈಕರ್ ಗೈರು?

author-image
Gopal Kulkarni
Updated On
ರೋಹಿತ್ ಶರ್ಮಾಗೆ ಕಾಡುತ್ತಿದೆ ಗಾಯದ ಸಮಸ್ಯೆ! 4ನೇ ಟೆಸ್ಟ್​ಗೆ ಮುಂಬೈಕರ್ ಗೈರು?
Advertisment
  • ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ಗೆ ರೋಹಿತ್ ಶರ್ಮಾ ಗೈರು!
  • ನಾಳೆಯ ಟೆಸ್ಟ್​ನಲ್ಲಿ ರೋಹಿತ್​ರನ್ನು ಆಡಲು ಬಿಡಲ್ವಾ ಅವರ ಗಾಯ?
  • ಪ್ರಾಕ್ಟಿಸ್ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿರುವ ನಾಯಕ

ಮೆಲ್ಬರ್ನೊದಲ್ಲಿ ನಡೆಯಬೇಕಿರುವ ನಾಲ್ಕನೇ ಟೆಸ್ಟ್​ ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಗಾಯದ ಸಮಸ್ಯೆ ಕಾಡುತ್ತಿದೆ. ನಾಯಕ ರೋಹಿತ್ ಶರ್ಮಾ ನೆಟ್ ಪ್ರ್ಯಾಕ್ಟಿಸ್​ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು , ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುತ್ತಾರಾ ಅನ್ನೋ ಅನುಮಾನ ಕಾಡುತ್ತಿದೆ. ಸದ್ಯ ಈ ನೋವಿನಲ್ಲೂ ಆಡುವ ಹುಮ್ಮಸ್ಸು ತೋರಿಸುತ್ತಿರುವ ರೋಹಿತ್ ಶರ್ಮಾ ವೈದ್ಯರ ಸಲಹೆಯನ್ನು ಪಡೆಯುತ್ತಿದ್ದಾರೆ.

Advertisment

ಮೆಲ್ಬರ್ನೊದಲ್ಲಿ ಮೊಣಕಾಲಿಗೆ ಪಟ್ಟಿಕಟ್ಟಿಕೊಂಡು ಚೇರ್​ ಮೇಲೆ ಕುಳಿತಿರುವ ರೋಹಿತ್ ಶರ್ಮಾ ಫೋಟೋ ಸದ್ಯ ವೈರಲ್ ಆಗುತ್ತಿದೆ. ಮೇಲ್ನೋಟಕ್ಕೆ ಅಷ್ಟೊಂದು ದೊಡ್ಡ ಗಾಯವಿರಲಿಕ್ಕಿಲ್ಲ ಎಂದು ಕಂಡು ಬಂದರೂ ಕೂಡ ನಾಳೆಯಿಂದ ಶುರುವಾಗುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್​ಗೆ ರೋಹಿತ್ ಶರ್ಮಾ ಲಭ್ಯವಿರುತ್ತಾರಾ ಇಲ್ಲವಾ ಅನ್ನೋ ಅನುಮಾನವಂತೂ ಇನ್ನೂ ಇದೆ.

ಇದನ್ನೂ ಓದಿ:ಮಹತ್ವದ ಟ್ರೋಫಿಯಿಂದ ಯಂಗ್ ಬ್ಯಾಟ್ಸ್​ಮನ್ ಪೃಥ್ವಿ ಶಾ ಔಟ್.. ಈ ತಲೆದಂಡ ಯಾಕೆ ಗೊತ್ತಾ?

ಸದ್ಯ ಬಂದಿರುವ ವರದಿಯ ಪ್ರಕಾರ ಭಾರತ ತಂಡದ ಎಲ್ಲಾ ಆಟಗಾರರು ನೆಟ್​ ಸೆಷನ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಬೂಮ್ರಾ, ಸಿರಾಜ್​ ಅದ್ಬುತವಾಗಿ ಬೌಲಿಂಗ್​ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಸದ್ಯ ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಕೂಡ, ಸ್ಪಿನ್ ಬೌಲರ್​ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್​ಟನ್ ಸುಂದರ್ ಅವರ ಬೌಲಿಂಗ್​ನಲ್ಲಿ ಪ್ರ್ಯಾಕ್ಟಿಸ್ ನಡೆಸಿದ್ದಾರೆ.

Advertisment

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲೂ RCB ಫ್ಯಾನ್ಸ್​.. ವಿರಾಟ್​ ಕೊಹ್ಲಿ ಜೊತೆ ಜೆರ್ಸಿ ಧರಿಸಿ ಯುವತಿ ಕ್ಯೂಟ್ ಫೋಟೋ

ಇತ್ತ ರೋಹಿತ್ ಶರ್ಮಾ ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದು. ಈಗ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿದ್ದಾರೆ. ಸದ್ಯ ಪ್ರ್ಯಾಕ್ಟಿಸ್ ವೇಳೆ ರೋಹಿತ್ ಶರ್ಮಾ ತಮ್ಮ ಮೊಣಕಾಲಿಗೆ ಗಾಯಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಕಡೆ ಕೆಎಲ್ ರಾಹುಲ್​ಗೂ ಕೂಡ ಬಲಗೈಗೆ ಗಾಯವಾಗಿದೆ ಎಂದು ವರದಿಗಳು ಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment