/newsfirstlive-kannada/media/post_attachments/wp-content/uploads/2024/12/ROHIT-SHARMA-3.jpg)
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮೆಲ್ಬರ್ನ್​ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ನಲ್ಲಿ ಅಗ್ರಕ್ರಮಾಂಕದ ಆಟಗಾರನಾಗಿ ಮತ್ತೆ ಅಖಾಡಕ್ಕೆ ಇಳಿದಿದ್ದರು. ಆದ್ರೆ ಮತ್ತೆ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದೆ. ಹೀಗಾಗಿ ಹಲವು ಟೀಕೆಗಳನ್ನ ರೋಹಿತ್ ಶರ್ಮಾ ಎದುರಿಸುತ್ತಿದ್ದಾರೆ. ಓಪನರ್ ಆಗಿ ಬ್ಯಾಟಿಂಗ್ ಅಂಗಳಕ್ಕೆ ಇಳಿದ ರೋಹಿತ್ ಶರ್ಮಾ ಕೇವಲ ಆರು ಬಾಲ್ ಎದುರಿಸಿ ಪೆವಲಿನ್​ ಕಡೆಗೆ ಹೊರಟು ಹೋದರು. ಈ ಟೆಸ್ಟ್​​ನಲ್ಲಿ ಸತತ ವೈಫಲ್ಯಗಳು ಈಗ ಕ್ರಿಕೆಟ್​ ಪ್ರೇಮಿಗಳ ಸಹನೆ ಕೆಣಕಿದೆ.
ಸದ್ಯ ಅಭಿಮಾನಿಗಳು ರೋಹಿತ್ ಶರ್ಮಾ ಪ್ಲಾಫ್​ ಶೋನಿಂದ ಸಹನೆ ಕಳೆದುಕೊಂಡಿದ್ದಾರೆ. ನಿಮ್ಮ ಆಟ ಮುಗಿಯಿತು, ನಿವೃತ್ತಿ ಘೋಷಿಸಿ ಆಟದ ಅಂಗಳದಿಂದ ಹೊರೆಗೆ ಬನ್ನಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಅದರಲ್ಲೂ ಜಸ್ಪ್ರಿತ್ ಬುಮ್ರಾ ಅಭಿಮಾನಿಗಳಂತೂ ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಜವಾಬ್ದಾರಿಯನ್ನು ಬುಮ್ರಾಗೆ ನೀಡಿ ನೀವು ಆಟದಿಂದ ಹೊರಬನ್ನಿ ಎಂದು ಹೇಳುತ್ತಿದ್ದಾರೆ.
ರೋಹಿತ್ ಶರ್ಮಾ ಕಳೆದ 14 ಇನ್ನಿಂಗ್ಸ್​ನಲ್ಲಿ ಗಳಿಸಿದ್ದು ಕೇವಲ 152ರನ್​ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಆರಂಭಿಕರಾಗಿ ಮೈದಾನಕ್ಕಿಳಿದ ರೋಹಿತ್ ಪರ್ತ್​​ನಲ್ಲಿ ಗಳಿಸಿದ್ದು 3,6,10 ಮತ್ತು 3 ರನ್ ಮಾತ್ರ.ಜಸ್ಪಿತ್ ಬುಮ್ರಾ ನಾಯಕತ್ವದಲ್ಲಿ ಆಟವಾಡಿದ್ದ ಟೀಂ ಇಂಡಿಯಾ ಮೊದಲ ಟೆಸ್ಟ್​ನ್ನು 295 ರನ್​ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಇವೆಲ್ಲ ಸಂಗತಿಗಳು ಈಗ ಬುಮ್ರಾ ಅಭಿಮಾನಿಗಳನ್ನು ಕೆಣಕುವಂತೆ ಮಾಡಿವೆ. ನಾಯಕತ್ವವನ್ನ ಬುಮ್ರಾಗೆ ಬಿಟ್ಟುಕೊಟ್ಟು ನೀವು ನಿವೃತ್ತಿ ಘೋಷಿಸಿ ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:20 ವರ್ಷಗಳ ಬಳಿಕ ಇದೇ ಮೊದಲ ಬಾರಿ; ಮೆಲ್ಬರ್ನ್​ ಅಂಗಳದಲ್ಲಿ ಇತಿಹಾಸ ಬರೆದ ಭಾರತ-ಆಸ್ಟ್ರೇಲಿಯಾ
ಎಕ್ಸ್ ಖಾತೆಯಲ್ಲಿ ರೋಹಿತ್ ನಾಯಕತ್ವವನ್ನು ಪ್ರಶ್ನಿಸಿರುವ ಕ್ರಿಕಟ್ ಅಭಿಮಾನಿಯೊಬ್ಬರು, ರೋಹಿತ್ ಫಾರ್ಮ್​​ನಲ್ಲಿ ಇಲ್ಲದ್ದು ಒಂದು ಸಮಸ್ಯೆಯಾದ್ರೆ, ಅವರು ಟೀಂ ಮೇಲೆ ನೆಗೆಟಿವ್ ಎನರ್ಜಿ ಮೂಡಿಸುತ್ತಿದ್ದಾರೆ. ಅದು ಇಡೀ ಟೀಮ್​ನ ಬ್ಯಾಟ್ಸಮನ್​ಗಳ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ, ಇಂತಹ ಒಬ್ಬ ಆಟಗಾರ ತನ್ನ ವೃತ್ತಿಯ ಸಂಧ್ಯಾಕಾಲದಲ್ಲಿ ಹೀಗೆ ಕೊಚ್ಚಿಕೊಂಡು ಹೋಗುತ್ತಾರೆ ಅಂತ ನಿರೀಕ್ಷೆಯಿರಲಿಲ್ಲ. ಸದ್ಯ ಅವರ ನಿವೃತ್ತಿ ಘೋಷಿಸಿ ಆಟವನ್ನು ಬಿಟ್ಟು ಆಚೆ ಹೋಗುವುದು ಒಳ್ಳೆಯದು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us