newsfirstkannada.com

‘ಮುಂಬೈ ಇಂಡಿಯನ್ಸ್​ಗೆ ಮತ್ತೆ ರೋಹಿತ್​ ಶರ್ಮಾ ಕ್ಯಾಪ್ಟನ್​​’- ಮಾಜಿ ಕ್ರಿಕೆಟರ್​ ಮನೋಜ್​ ತಿವಾರಿ

Share :

Published April 2, 2024 at 4:04pm

  ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​​ಗೆ ಮೂರು ಸೋಲು

  ಸದ್ಯದಲ್ಲೇ ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ಹಾರ್ದಿಕ್​ ಪಾಂಡ್ಯ ಕೊಕ್

  ಮತ್ತೆ ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಆಗಲಿದ್ದಾರಂತೆ..!

ಐದು ಬಾರಿ ಕಪ್​ ಗೆದ್ದಿರೋ ಮುಂಬೈ ಇಂಡಿಯನ್ಸ್​​ಗೆ ಹೊಸ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ. ಒಂದು ಸೀಸನ್​​ನಲ್ಲಿ ಕಪ್​ ಗೆಲ್ಲಿಸಿ, ಮತ್ತೊಂದು ಸೀಸನ್​​ನಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಫೈನಲ್​ಗೆ ಕರೆದೊಯ್ದಿದ್ದಕ್ಕೆ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ಗೆ ಕರೆಸಿ ಕ್ಯಾಪ್ಟನ್ಸಿ ನೀಡಲಾಯ್ತು. ಈಗ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್​​ ಸತತ ಮೂರು ಪಂದ್ಯಗಳನ್ನು ಸೋತಿದೆ.

ಹೌದು, 2024ರ ಐಪಿಎಲ್​​ನಲ್ಲಿ ಇನ್ನೂ ಒಂದು ಪಂದ್ಯವೂ ಮುಂಬೈ ಇಂಡಿಯನ್ಸ್​​ ಗೆದ್ದಿಲ್ಲ. ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದೆ. ಈ ಮಧ್ಯೆ ಹಾರ್ದಿಕ್​ ಜಾಗಕ್ಕೆ ಮತ್ತೆ ರೋಹಿತ್​ ಶರ್ಮಾ ಅವರೇ ಕ್ಯಾಪ್ಟನ್​ ಆಗಿ ಬರಬಹುದು ಎಂದು ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಮನೋಜ್​ ತಿವಾರಿ, 2024ರ ಆವೃತ್ತಿಯಲ್ಲಿ ಮುಂಬೈ ಕಳಪೆ ಆರಂಭ ಪಡೆದುಕೊಂಡಿದೆ. ಹಾಗಾಗಿ ರೋಹಿತ್ ಶರ್ಮಾ ಅವರನ್ನು ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಬಹುದು ಎಂದರು.

ಮನೋಜ್​ ತಿವಾರಿ ಹೇಳಿದ್ದೇನು..?

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರು ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ರೋಹಿತ್ ಶರ್ಮಾ ಐದು ಐಪಿಎಲ್ ಕಪ್​ ಗೆದ್ದುಕೊಟ್ಟ ನಾಯಕ. ರೋಹಿತ್​ ನಾಯಕತ್ವ ಕಿತ್ತುಕೊಂಡು ಹಾರ್ದಿಕ್ ಪಾಂಡ್ಯಗೆ ನೀಡಿದರು. ನಾಯಕನನ್ನು ಬದಲಾಯಿಸುವುದು ದೊಡ್ಡ ನಿರ್ಧಾರ. ಈ ಸೀಸನ್​ನಲ್ಲಿ ಒಂದೇ ಒಂದು ಅಂಕ ಮುಂಬೈ ಪಡೆದಿಲ್ಲ ಎಂದರು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ ಹೀನಾಯ ಸೋಲಿನ ಬಗ್ಗೆ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮುಂಬೈ ಇಂಡಿಯನ್ಸ್​ಗೆ ಮತ್ತೆ ರೋಹಿತ್​ ಶರ್ಮಾ ಕ್ಯಾಪ್ಟನ್​​’- ಮಾಜಿ ಕ್ರಿಕೆಟರ್​ ಮನೋಜ್​ ತಿವಾರಿ

https://newsfirstlive.com/wp-content/uploads/2024/03/ROHIT-SHARMA.jpg

Load More