Advertisment

ರೋಹಿತ್ ಜೊತೆ ಬಿಸಿಸಿಐ ಹೈ-ವೋಲ್ಟೇಜ್ ಮೀಟಿಂಗ್; ಪಾಂಡ್ಯಗೆ ಶಾಕಿಂಗ್ ನ್ಯೂಸ್​ ಕೊಟ್ಟ ಆಯ್ಕೆ ಸಮಿತಿ..!

author-image
Ganesh
Updated On
ಮುಂಬೈ ಇಂಡಿಯನ್ಸ್​ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?
Advertisment
  • ಉಪನಾಯಕ ಹಾರ್ದಿಕ್ ಪಾಂಡ್ಯಗೆ ಆಯ್ಕೆ ಸಮಿತಿ ಎಚ್ಚರಿಕೆ
  • ದ್ರಾವಿಡ್, ರೋಹಿತ್ ಸಮ್ಮುಖದಲ್ಲಿ ನಡೆದ ಬಿಸಿಸಿಐ ಸಭೆ
  • ಟಿ-20 ವಿಶ್ವಕಪ್​ಗೆ ಹಾರ್ದಿಕ್ ಪಾಂಡ್ಯ ಆಯ್ಕೆ ಬಗ್ಗೆ ಚರ್ಚೆ

ಐಪಿಎಲ್ ಬೆನ್ನಲ್ಲೇ ಟಿ-20 ವಿಶ್ವಕಪ್ ಟೂರ್ನಿ ಎದುರಾಗಲಿದೆ. ಅದೇ ಕಾರಣಕ್ಕೆ ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಳ್ತಿದ್ದು, ಬಲಿಷ್ಠ ತಂಡ ಕಟ್ಟಲು ಸರ್ಕಸ್ ಮಾಡ್ತಿದೆ. ಅದರಂತೆ ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಕಳೆದ ವಾರದ ಸಭೆ ನಡೆದಿತ್ತು. ಕೋಚ್ ರಾಹುಲ್ ದ್ರಾವಿಡ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ಸಭೆ ನಡೆದಿದ್ದು, ಹಾರ್ದಿಕ್ ಆಯ್ಕೆಯ ಬಗ್ಗೆ ಪ್ರಸ್ತಾಪ ಆಗಿದೆ.

Advertisment

ಐಪಿಎಲ್​​ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪರ್ಫಾರ್ಮೆನ್ಸ್​ ಬಗ್ಗೆ ಚರ್ಚೆ ಮಾಡಲಾಗಿದೆ. ಒಂದು ವೇಳೆ ಪಾಂಡ್ಯ ಮತ್ತೆ ಪುಟಿದೇಳದಿದ್ದರೆ ಟಿ-20 ವಿಶ್ವಕಪ್​​ಗೆ ಆಯ್ಕೆ ಆಗೋದು ಬಹುತೇಕ ಡೌಟ್ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

ಇಲ್ಲಿವರೆಗೆ ಐಪಿಎಲ್​​ನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿರುವ ಪಾಂಡ್ಯ, ಕೇವಲ 131 ರನ್​ಗಳಿಸಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿ ಜವಾಬ್ದಾರಿಯನ್ನೂ ಸರಿಯಾಗಿ ಮಾಡ್ತಿಲ್ಲ. ಕೇವಲ 4 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, ಬ್ಯಾಟರ್​​ಗಳು ಸರಿಯಾಗಿ ಬೆಂಡೆತ್ತಿದ್ದಾರೆ. ನಿಯಮಿತವಾಗಿ ಬೌಲಿಂಗ್ ಮಾಡದಿರುವ ಬಗ್ಗೆಯೂ ಚರ್ಚೆ ಆಗಿದೆ. ವಿವಿಧ ಹಂತಗಳಲ್ಲಿ ಬೌಲಿಂಗ್ ಮಾಡಿರುವ ಅವರು, ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದಾರೆ. ಪವರ್‌ಪ್ಲೇ ಬೌಲರ್‌ ಆಗಿ, 4 ಓವರ್‌ಗಳಲ್ಲಿ 44 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಮಿಡಲ್ ಆರ್ಡರ್​ನಲ್ಲಿ 6 ಓವರ್‌ ಮಾಡಿ 62 ರನ್‌ ನೀಡಿದ್ದಾರೆ. ಡೆತ್ ಬೌಲರ್​ನಲ್ಲಿ 1 ಓವರ್‌ ಮಾಡಿ 26 ರನ್ ನೀಡಿದ್ದಾರೆ. ಹೀಗಾಗಿ ಮುಂದಿನ ಟಿ-20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಬಿಸಿಸಿಐನ ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Advertisment

ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

ಹಾರ್ದಿಕ್ ಜಾಗಕ್ಕೆ ಶಿವಂ ದುಬೆ ಹೆಸರು ಅಗ್ರಸ್ಥಾನದಲ್ಲಿದೆ. ದುಬೆ ಅವರನ್ನು ಸಿಎಸ್​ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ತಿದೆ. ಆಲ್​ರೌಂಡರ್ ಆಗಿರುವ ದುಬೆಯನ್ನು ಬೌಲಿಂಗ್​ಗೆ ಬಳಸಿಕೊಳ್ಳದೇ ಇರೋದು ದುಬೆಗೆ ಹೊಡೆತ ನೀಡಿದೆ. ಆದರೂ, ಸ್ಪಿನ್ನರ್‌ಗಳ ವಿರುದ್ಧ ದುಬೆ ಸ್ಫೋಟಕ ಬ್ಯಾಟಿಂಗ್ ಮಾಡ್ತಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್​​ಗೆ ಪಾಂಡ್ಯ ಬದಲಾಗಿ ದುಬೆ ಆಯ್ಕೆಯಾದರೂ ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment