/newsfirstlive-kannada/media/post_attachments/wp-content/uploads/2024/01/ROHIT_RINKU.jpg)
ಅಪ್ಘಾನಿಸ್ತಾನ ಎದುರಿನ ಟಿ20 ಸರಣಿ ಮುಗಿದ ಬೆನ್ನಲ್ಲೇ, ವಿಶ್ವಕಪ್​​ ತಂಡದ ಆಯ್ಕೆಯ ಕಸರತ್ತು ಜೋರಾಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ನೀಡಿರುವ ಒಂದೇ ಒಂದು ಖಡಕ್​ ಹೇಳಿಕೆ ಸರಣಿಯನ್ನ ಕ್ಲೀನ್​ಸ್ವೀಪ್​ ಮಾಡಿದ ಖುಷಿಯಲ್ಲಿದ್ದ ಆಟಗಾರರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ರೋಹಿತ್​ ಶರ್ಮಾ ಹೇಳಿರೋದೇನು.?
ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಮುಂದಿದ್ದ ಏಕೈಕ ಟಿ20 ಸರಣಿ ಅಂತ್ಯ ಕಂಡಿದೆ. ಅತ್ಯದ್ಭುತ ಪರ್ಫಾಮೆನ್ಸ್​ ನೀಡಿದ ರೋಹಿತ್​ ಶರ್ಮಾ ಪಡೆ ಸರಣಿಯನ್ನ ಕ್ಲೀನ್​​ಸ್ವೀಪ್​ ಮಾಡಿ ಬೀಗಿದೆ. ಇದ್ರ ಬೆನ್ನಲ್ಲೇ, ಟಿ20 ವಿಶ್ವಕಪ್​ ತಂಡದ ಆಯ್ಕೆಯ ಚರ್ಚೆಗಳು ಗರಿಗೆದರಿವೆ. ಈ ಬಗ್ಗೆ ತುಟಿ ಬಿಚ್ಚಿರುವ ಕ್ಯಾಪ್ಟನ್​ ರೋಹಿತ್​, ಆಟಗಾರರ ಎದೆಯಲ್ಲಿ ನಡುಕ ಹುಟ್ಟುವಂತಾ ಹೇಳಿಕೆ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2023/11/Kohli_Rahul_Rohit.jpg)
ಕಮ್​ಬ್ಯಾಕ್​ ಬಳಿಕ ಬದಲಾಯ್ತು ರೋಹಿತ್​ ವರಸೆ.!
14 ತಿಂಗಳ ಬಳಿಕ ಟಿ20 ಸೆಟಪ್​ಗೆ ಕಮ್​ಬ್ಯಾಕ್​ ಮಾಡಿರೋ ರೋಹಿತ್​ ಶರ್ಮಾ, ಕಂಪ್ಲೀಟ್​ ಬದಲಾಗಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲೂ ತಂಡದ ಸಾರಥ್ಯ ಕನ್​ಫರ್ಮ್​​ ಆಗ್ತಿದ್ದಂತೆ ಖಡಕ್​ ನಿರ್ಧಾರಗಳನ್ನ ತಳೆಯುತ್ತಿದ್ದಾರೆ. ಅಫ್ಘಾನ್​ ವಿರುದ್ಧದ ಸರಣಿಯ ತಂಡದಿಂದ ಏಕಾಏಕಿ ಶ್ರೇಯಸ್​ ಅಯ್ಯರ್​​, ಇಶಾನ್​ ಕಿಶನ್​ಗೆ ಕೊಕ್​ ಕೊಟ್ಟಿದ್ದು ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.
ಅಫ್ಘಾನ್​ ಸರಣಿಯಲ್ಲಿ ಮುಂಬೈಕರ್​​ ನಯಾ ಅವತಾರ.!
ತಂಡದ ಆಯ್ಕೆಯ ವಿಚಾರದಲ್ಲೇ ಶಾಕ್​ ಕೊಟ್ಟಿದ್ದ ರೋಹಿತ್​ ಶರ್ಮಾ, ಸರಣಿಯಲ್ಲೂ ಅಗ್ರೆಸ್ಸಿವ್​ ಅವತಾರದಲ್ಲೇ ಕಾಣಿಸಿಕೊಂಡ್ರು. ಆನ್​​ಫೀಲ್ಡ್​ನಲ್ಲಿ ರೋಹಿತ್​ ಶರ್ಮಾ ಅಪ್ರೋಚ್​ ಬೇರೆನೇ ಇತ್ತು. 3 ಪಂದ್ಯಗಳಲ್ಲಿ ಕಾಂಬಿನೇಷನ್​ಗಳನ್ನ ಚೆಕ್​ ಮಾಡಿದ ಕ್ಯಾಪ್ಟನ್​, ಆನ್​ಫೀಲ್ಡ್​ನಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ರು. ಮೊದಲ 2 ಪಂದ್ಯದಲ್ಲಿ ಡಕೌಟ್​ ಆದ್ರೂ, 3ನೇ ಪಂದ್ಯದಲ್ಲಿ ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟಿಂಗ್​ ನಡೆಸಿ ಉಳಿದ ಆಟಗಾರರಿಗೆ ತನ್ನ ಬ್ಯಾಟಿಂಗ್​ ಮಾಡೋದ್ಹೆಗೆ ಅನ್ನೋ ಪಾಠ ಮಾಡಿದ್ರು.
ಯಾರದ್ದೋ ಖುಷಿಗೆ ತಂಡದ ಆಯ್ಕೆ ಮಾಡಲ್ಲ..!
ಅಫ್ಘಾನ್ ವಿರುದ್ಧದ ರಣರೋಚಕ 3ನೇ ಟಿ20 ಕದನ ಮುಗಿದ ಬೆನ್ನಲ್ಲೇ, ರೋಹಿತ್​ ಶರ್ಮಾ, ತಂಡದ ಬಗ್ಗೆ ಮಾತನಾಡಿದ್ದಾರೆ. ಆಟಗಾರರ ಆಟವನ್ನ ಪ್ರಶಂಸಿಸಿರುವ ಕ್ಯಾಪ್ಟನ್​ ರೋಹಿತ್​, ಇದೇ ಸಮಯದಲ್ಲಿ ವಿಶ್ವಕಪ್​ ತಂಡದ ಬಗ್ಗೆ ತುಟಿ ಬಿಚ್ಚಿದ್ದಾರೆ. ವರ್ಲ್ಡ್​​​ಕಪ್​ ತಂಡದ ಆಯ್ಕೆ ಬಗ್ಗೆ ಮಾತನಾಡಿರೋ ರೋಹಿತ್, ಯಾರದೂ ಖುಷಿಗೆ ತಂಡದ ಆಯ್ಕೆ ಮಾಡಲು ಆಗಲ್ಲ. ಯಾರ ಸ್ಥಾನವೂ ಪರ್ಮನೆಂಟ್​ ಅಲ್ಲ ಎಂದು ನೇರ ಮಾತಲ್ಲಿ ಹೇಳಿದ್ದಾರೆ.
ನಾನು ಮತ್ತೆ ಹೇಳ್ತಾ ಇದ್ದೀನಿ. ನಾನು ಮತ್ತೆ ರಾಹುಲ್ ಭಾಯ್, ತಂಡದಲ್ಲಿ ಸ್ಪಷ್ಟತೆಯನ್ನ ಕಾಯ್ದುಕೊಳ್ಳುತ್ತೇವೆ. ತಂಡದಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗಬೇಕು. ಪರ್ಫಾಮ್ ಮಾಡಿದ್ರೂ ಆಟಗಾರರನ್ನ ಡ್ರಾಪ್ ಮಾಡಿದ್ರೆ ಬೇಸರ ಆಗುತ್ತೆ. ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಿಲ್ಲ. ನಾನು ನಾಯಕನಾಗಿ ಕಲಿತಿರೋದು ಏನಂದ್ರೆ, 15 ಜನರನ್ನ ಸಂತೋಷ ಪಡಿಸಲು ಸಾಧ್ಯವಿಲ್ಲ. 15ರಲ್ಲಿ 11 ಜನ ಆಡಿ 4 ಜನ ಹೊರಗೆ ಕುಳಿತಿರ್ತಾರೆ. ಅವರೂ ಕೇಳ್ತಾರೆ ನಾವು ಯಾವಾಗ ಆಡ್ತೀವಿ ಅಂತಾ. ಎಲ್ಲರನ್ನ ಖುಷಿಪಡಿಸಲು ಸಾಧ್ಯವಿಲ್ಲ ಅನ್ನೋದು. ಹೀಗಾಗಿ ತಂಡಕ್ಕೆ ಏನು ಅಗತ್ಯವೋ ಅದನ್ನ ಫೋಕಸ್ ಮಾಡಬೇಕು’
ರೋಹಿತ್ ಶರ್ಮಾ, ನಾಯಕ
8-10 ಆಟಗಾರರ ಹೆಸರು ಮಾತ್ರ ತಲೆಯಲ್ಲಿದೆ.!
ವೆಸ್ಟ್ ಇಂಡೀಸ್​​ ಹಾಗೂ ಅಮೆರಿಕದಲ್ಲಿ ನಡೆಯೋ ಟಿ20 ವಿಶ್ವಕಪ್​ ಟೂರ್ನಿಗೆ ಇನ್ನೂ ತಂಡದ ಫೈನಲ್​ ಆಗಿಲ್ಲ ಅನ್ನೋದನ್ನೂ ರೋಹಿತ್​ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಕೇವಲ 8ರಿಂದ 10 ಆಟಗಾರರ ಹೆಸರು ಮಾತ್ರ ತಲೆಯಲ್ಲಿದೆ ಎಂದಿರೋ ಹಿಟ್​ಮ್ಯಾನ್​​, ಪ್ಲೇಯಿಂಗ್​​ ಕಂಡೀಷನ್ಸ್​ ಆಧಾರದಲ್ಲಿ ಉಳಿದವರ ಆಯ್ಕೆ ಎಂಬ ಸ್ಪಷ್ಟನೆ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/01/ROHIT-18.jpg)
ನಾವು ಇನ್ನೂ 15 ಆಟಗಾರರ ವಿಶ್ವಕಪ್ ತಂಡವನ್ನ ಫೈನಲ್ ಮಾಡಿಲ್ಲ. ಆದ್ರೆ, ನಾವು ಆಡಿಸೋ 8-10 ಆಟಗಾರರ ಹೆಸರು ತಲೆಯಲ್ಲಿದೆ. ಯಾರು ಆಡ್ತಾರೆ, ಯಾರು ಅಡಲ್ಲ ಅಂತಾ ಗೊತ್ತಿದೆ. ನಾವು ಪ್ರಯಾಣಿಸುವ ಮಾಡುವ ಕಂಡಿಷನ್ಸ್ಗೆ ತಕ್ಕಂತೆ ಕಾಂಬಿನೇಷನ್ ಸೆಟ್ ಮಾಡಬೇಕಾಗುತ್ತದೆ. ವೆಸ್ಟ್ ಇಂಡೀಸ್ನಲ್ಲಿ ಸ್ಲೋ ಕಂಡಿಷನ್ಸ್ ಇರುತ್ತೆ. ಅದಕ್ಕೆ ತಕ್ಕಂತೆ ತಂಡದ ಆಯ್ಕೆ ಮಾಡ್ತಿವಿ.
ರೋಹಿತ್ ಶರ್ಮಾ, ನಾಯಕ
ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಜ್ಜಾಗ್ತಿದ್ದಾರೆ ಅನ್ನೋದು ಅವರ ಮಾತುಗಳಲ್ಲೇ ಸ್ಪಷ್ಟವಾಗಿ ಗೊತ್ತಾಗ್ತಿದೆ. ಜೊತೆಗೆ ಇದೇ ಮಾತುಗಳು ಸ್ಥಾನದ ನಿರೀಕ್ಷೆಯಲ್ಲಿದ್ದ ಆಟಗಾರರಲ್ಲಿ ಢವ ಢವ ಹೆಚ್ಚಿಸಿದೆ. ಟ್ರೋಫಿ ಗೆಲ್ಲಲು ಬ್ಲ್ಯೂಪ್ರಿಂಟ್​ ರೂಪಿಸ್ತಿರೋ ಕ್ಯಾಪ್ಟನ್​, ಯಾವೆಲ್ಲ ಆಟಗಾರರಿಗೆ ಮಣೆಹಾಕ್ತಾರೆ​ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us