ಬೌಲರ್ಸ್ನ ಮನಬಂದಂತೆ ಕಾಡ್ತಾರೆ ಕ್ಯಾಪ್ಟನ್ ರೋಹಿತ್
ಭಯವಿಲ್ಲದೇ ಬ್ಯಾಟ್ ಬೀಸುವ ರೋಹಿತ್ಗೂ ಕಾಡಿದೆ ಆತಂಕ
ವಿಶೇಷ ಸಂದರ್ಶನದಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು?
ರೋಹಿತ್ ಶರ್ಮಾ ಪಕ್ಕಾ ಮಾಸ್ ಎಂಟರ್ಟ್ರೈನರ್. ಅದೆಂಥಾ ಬೌಲರ್ ಆದ್ರೂ ಸೈ ಡಿಚ್ಚಿ ಕೊಟ್ಟೆ ಅಭ್ಯಾಸ. ಇಂತಹ ಫಿಯರ್ಲೆಸ್ ಬ್ಯಾಟ್ಸ್ಮನ್ಗೆ ಭಯ ಇದೆ. ಓರ್ವ ದಿಗ್ಗಜ ಬೌಲರ್ ಹಿಟ್ಮ್ಯಾನ್ಗೆ ದುಸ್ವಪ್ನರಾಗಿ ಕಾಡಿದ್ದಾರೆ.
ರೋಹಿತ್ ಶರ್ಮಾ! ವಿಶ್ವ ಕ್ರಿಕೆಟ್ನ ಡೇಂಜರಸ್ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ದಂಡಂ ದಶಗುಣಂ ಇವರ ಆಟದ ಪಾಲಿಸಿ. ಭಯ ಅನ್ನೋದೇ ಗೊತ್ತಿಲ್ಲ. ಏನಿದ್ರೂ ಬೌಲರ್ಗಳನ್ನ ದಂಡಿಸೋದಷ್ಟೇ ಗೊತ್ತು. ಇವರ ಬ್ಯಾಟಿಂಗ್ ಘರ್ಜನೆಗೆ ಘಟಾನುಘಟಿ ಬೌಲರ್ಗಳೇ ಥಂಡಾ ಹೊಡೆದಿದ್ದಾರೆ. ಆ ಮಟ್ಟಿಗೆ ಹಿಟ್ಮ್ಯಾನ್ ಬೌಲರ್ಸ್ಗೆ ಕಾಟ ಕೊಟ್ಟಿದ್ದಾರೆ. ಹೀಗೆ ನಿರ್ದಯವಾಗಿ ದಂಡಿಸಿದ ಮಾತ್ರಕ್ಕೆ ರೋಹಿತ್ ಶರ್ಮಾಗೆ ಭಯ ಇಲ್ಲವೆಂದಲ್ಲ. ಖಂಡಿತ ಇದೆ. ನಿರ್ಭಯವಾಗಿ ಬ್ಯಾಟ್ ಬೀಸುವ ಮುಂಬೈಕರ್ಗೆ ದಕ್ಷಿಣ ಆಫ್ರಿಕಾ ದಿಗ್ಗಜ ಬೌಲರ್ ಡೇಲ್ ಸ್ಟೇಯ್ನ್ ಅಂದ್ರೆ ಇನ್ನಿಲ್ಲದ ಭಯವಂತೆ.
ಇದನ್ನೂ ಓದಿ:ಕೆಟ್ಟ ಮೇಲೆ ಬುದ್ಧಿ ಕಲಿತ ಸ್ಟಾರ್; ಅಂದು ಬಿಸಿಸಿಐ ಮಾತಿಗೆ ಕಿಮ್ಮತ್ತು ಕೊಡದವ ಈಗ ಬದಲಾದ!
ತಮ್ಮ 17 ವರ್ಷಗಳ ಕ್ರಿಕೆಟ್ ಕರಿಯರ್ನಲ್ಲಿ ಯಾವ ಬೌಲರ್ಗೂ ಜಗ್ಗದ, ಯಾರಿಗೂ ಬೆದರದ ರೋಹಿತ್, ಡೇಲ್ ಸ್ಟೇಯ್ನ್ ಅಂದ್ರೆ ಭಯ ಬಿದ್ದಿದ್ದಾರೆ. ಆಫ್ರಿಕಾ ವೇಗಿ ಹಿಟ್ಮ್ಯಾನ್ರನ್ನ ಇನ್ನಿಲ್ಲದ ಕಾಡಿದ್ದಾರಂತೆ. ರೋಹಿತ್ ಪ್ರತಿ ಬಾರಿ ಡೇಲ್ ಸ್ಟೇಯ್ನ್ ವಿರುದ್ಧ ಬ್ಯಾಟ್ ಮಾಡುವಾಗ 100 ಸಲ ಅವರ ಬೌಲಿಂಗ್ ವಿಡಿಯೋಗಳನ್ನ ನೋಡ್ತಿದ್ರು.
ಯಾಕಂದ್ರೆ ಅವರ ಸ್ವಿಂಗ್ ಬಾಲ್ ಎದುರಿಸೋದು ತೀರ ಕಷ್ಟ ಅನಿಸ್ತಿತ್ತು. ಡೇಲ್ ಸ್ಟೇಯ್ನ್ ನಿಜಕ್ಕೂ ಆಟದ ಟ್ರೂ ಲೆಜೆಂಡ್. ಪ್ರತಿ ಪಂದ್ಯ ಪ್ರತಿ ಸೆಷನ್ ಅನ್ನ ಗೆಲ್ಲಬೇಕೆಂದು ಹೋರಾಡುತ್ತಾರೆ. ಹೀಗಾಗಿ ನಾನು ಅವರ ವಿರುದ್ಧ ದೊಡ್ಡ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ ಎಂದು ರೋಹಿತ್ ಶರ್ಮಾ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಬೆನ್ನಲ್ಲೇ ದುಲೀಪ್ ಟ್ರೋಫಿಗೆ ಕೈಕೊಟ್ಟ ಇನ್ನಿಬ್ಬರು ಸ್ಟಾರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್