/newsfirstlive-kannada/media/post_attachments/wp-content/uploads/2025/01/ROHIT-SHARMA-6.jpg)
ಕ್ಯಾಪ್ಟನ್ ರೋಹಿತ್ ಶರ್ಮಾ, ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್. ಮೊನ್ನೆಯಷ್ಟೇ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ರು. ಆದ್ರೀಗ ಅದೇ ಸುನಿಲ್ ಗವಾಸ್ಕರ್ ಮೇಲೆಯೇ ರೋಹಿತ್ ಶರ್ಮಾ ಬಿಸಿಸಿಐ ದೂರು ನೀಡಿದ್ದಾರೆ. ಬ್ಯಾಟಿಂಗ್ ವೈಫಲ್ಯಕ್ಕೂ ಸುನಿಲ್ ಗವಾಸ್ಕರ್ ಕಾರಣ ಎಂದಿದ್ದಾರೆ.
ಗವಾಸ್ಕರ್ ಮೇಲೆ ರೋಹಿತ್ ಕೆಂಡ
ಲೆಜೆಂಡರಿ ಸುನಿಲ್ ಗವಾಸ್ಕರ್, ಆಟಗಾರರನ್ನೇ ಆಗಲಿ, ನಾಯಕರನ್ನಾಗಲೇ ಆಗಲಿ, ನೇರಾ ನೇರ ಟೀಕಿಸುವುದಕ್ಕೆ ಹಿಂದೆ ಮುಂದೆ ನೋಡಲ್ಲ. ಇಂಥ ನೇರ ನಿಷ್ಟುರವಾದಿ ಸುನಿಲ್ ಗವಾಸ್ಕರ್, ಆಸ್ಟ್ರೇಲಿಯಾ ಟೂರ್ನಲ್ಲಿ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ರು. ಈ ಪ್ರವಾಸದಲ್ಲಿ ಆಟಗಾರರ ಪ್ರದರ್ಶನದ ಬಗ್ಗೆ ಕಟುವಾಗಿ ಟೀಕಿಸಿದ್ದ ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ ಆಟದ ವೈಖರಿ, ನಾಯಕತ್ವವನ್ನ ಪ್ರಶ್ನಿಸಿದ್ದರು. ಈ ವಿಚಾರವಾಗಿ ಕ್ಯಾಪ್ಟನ್ ರೋಹಿತ್, ಬಿಸಿಸಿಐಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Smart phone, ಸ್ಮಾರ್ಟ್ TV ಖರೀದಿ ಪ್ಲಾನ್ನಲ್ಲಿ ಇದ್ದೀರಾ..? ಸ್ವಲ್ಪ ಕಾಯಿರಿ..!
ಆಸ್ಟ್ರೇಲಿಯಾ ಎದುರಿನ ಹೀನಾಯ ಸೋಲಿನ ಬಳಿಕ ಬಿಸಿಸಿಐ, ರಿವ್ಯೂವ್ ಮೀಟಿಂಗ್ ನಡೆಸಿತ್ತು. ಈ ಮೀಟಿಂಗ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕಾಮೆಂಟೇಟರ್ ದಿಗ್ಗಜ ಸುನಿಲ್ ಗವಾಸ್ಕರ್ ವಿಚಾರ ಪ್ರಸ್ತಾಪಿಸಿದ್ದಾರೆ. ಬೇಕಾಬಿಟ್ಟಿ ಟೀಕಿಸಿದ್ರ ಬಗ್ಗೆ ಕೆಂಡಕಾರಿರುವ ರೋಹಿತ್, ಗವಾಸ್ಕರ್ ಮಾತುಗಳು ಆಟಗಾರರ ಮೇಲೆ ಇಂಪ್ಯಾಕ್ಟ್ ಆಗಿದೆ ಎಂದಿದ್ದಾರೆ. ಇಂಥ ಟೀಕೆಗಳನ್ನ ಬಿಸಿಸಿಐ ಗಂಭೀರವಾಗಿ ಪರಿಣಿಸಬೇಕೆಂದು ಆಗ್ರಹಿಸಿ ದೂರನ್ನು ನೀಡಿದ್ದಾರೆ. ರೋಹಿತ್ ಆಕ್ರೋಶದ ಹಿಂದೆ ಮಹತ್ವದ ಕಾರಣವೂ ಇದೆ.
ಪರ್ಸನಲ್ ಅಟ್ಯಾಕ್ ಮಾಡಿದ್ದ ಗವಾಸ್ಕರ್
ಮಾಜಿ ಆಟಗಾರರು ಆಟದ ವೈಖರಿ, ಸೋಲಿನ ಬಗ್ಗೆ ಟೀಕೆ ಮಾಡ್ತಾರೆ. ಇದು ಸಹಜ. ಟೀಕೆಗಳಿಗೆ ಬೌಂಡರಿ ಇರಬೇಕು. ಸುನಿಲ್ ಗವಾಸ್ಕರ್ ಟೀಕೆಗೆ ಬೌಂಡರಿಯೇ ಇರಲ್ಲ. ಆಟದ ಜೊತೆ ಜೊತೆಗೆ ಪರ್ಸನಲ್ ಅಟ್ಯಾಕ್ ಕೂಡ ಮಾಡ್ತಾರೆ. ಇಂಥಹ ಟೀಕೆಗಳು ಸರಣಿಯುದ್ದಕ್ಕೂ ಸುದ್ದಿಯಾಗಿತ್ತು. ರೋಹಿತ್ ಬಗೆಗಿನ ಟೀಕೆಗಳಂತೂ ಚರ್ಚೆಗೂ ಗ್ರಾಸವಾಗಿತ್ತು.
ಇದನ್ನೂ ಓದಿ: ಈ ಸಲ ಕಪ್ ನಮ್ದೇ ದೋಸ್ತಾ.. ಹನುಮಂತು, ಧನರಾಜ್ ದೋಸ್ತಿಗೆ ಅಭಿಮಾನಿಗಳು ಫಿದಾ! VIDEO
ಆಸ್ಟ್ರೇಲಿಯಾ ಸರಣಿಯಲ್ಲಿ ಕೇವಲ 31 ರನ್ ಗಳಿಸಿದ್ದ ರೋಹಿತ್, ಬ್ಯಾಟಿಂಗ್ ಬಗ್ಗೆ ಟೀಕಿಸಿದ ಗವಾಸ್ಕರ್, ನಂತರ ನಾಯಕತ್ವದ ವಿಚಾರದಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಪ್ರಶ್ನಿಸಿದ್ದರು. ರೋಹಿತ್ ಪದತ್ಯಾಗ ಮಾಡೋದು ಸೂಕ್ತ ಎಂದು ಜರಿದಿದ್ದ ಗವಾಸ್ಕರ್, ಕೊನೆ 2 ಪಂದ್ಯಗಳಲ್ಲಿ ಅವಕಾಶ ನೀಡೋ ಅವಶ್ಯಕತೆಯೂ ಇಲ್ಲ ಎಂದು ಕಿಡಿಕಾರಿದ್ದರು. ಇಷ್ಟಕ್ಕೆ ಸುಮ್ಮನಾಗದ ಗವಾಸ್ಕರ್, ರೋಹಿತ್ ಶರ್ಮಾಗೆ ಮಗುವಾಗಿದೆ. ಪತ್ನಿಯೊಂದಿಗೆ ವಿರಾಮ ತೆಗೆದುಕೊಳ್ಳುವುದು ಬೆಸ್ಟ್ ಎಂದು ನಾಲಿಗೆ ಹರಿ ಬಿಟ್ಟಿದ್ರು.
ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್.. ಅಲ್ಲಿ ಇಬ್ಬರು ಫೀಲ್ಡರ್ ಇದ್ದರೂ ನೀನು ಇಂತಹ ಶಾಟ್ ಆಡಲು ಮುಂದಾಗಿದ್ದೀಯ. ಈ ಹಿಂದೆ ಅದೇ ರೀತಿ ಹೊಡೆಯಲೆತ್ನಿಸಿ ವಿಫಲವಾಗಿದ್ದೆ. ಈಗ ನೀನು ಎಲ್ಲಿ ಔಟಾಗಿದ್ದೀಯ ಎಂಬುದನ್ನ ನೋಡು. ನೀನು ಡೀಪ್ ಥರ್ಡ್ಮ್ಯಾನ್ನಲ್ಲಿ ಕ್ಯಾಚ್ಗೆ ಔಟಾಗಿದ್ದೀಯ. ಅದರರ್ಥ ನಿನ್ನ ವಿಕೆಟ್ ಕೈಚೆಲ್ಲಿದ್ದೀಯ. ಇಂಥ ಪರಿಸ್ಥಿತಿಯಲ್ಲಿ ನೀನು ಹೀಗೆ ಮಾಡಬಾರದಿತ್ತು. ಇದು ನಿಮ್ಮ ತಂಡವನ್ನ ದುರ್ಬಲಗೊಳಿಸುತ್ತಿದೆ. ನೀವು ಪರಿಸ್ಥಿತಿಯನ್ನ ಸಹ ಅರ್ಥಮಾಡಿಕೊಳ್ಳಬೇಕು. ಇದು ನಿಮ್ಮ ಸಹಜ ಆಟ ಎಂದು ಹೇಳಲು ಸಾಧ್ಯವಿಲ್ಲ. ಕ್ಷಮಿಸಿ. ಇದು ನಿಮ್ಮ ಸಹಜ ಆಟವಲ್ಲ. ಇದು ಸ್ಪಪಿಡ್ ಶಾಟ್ ಎಂದು ಗವಾಸ್ಕರ್ ಜರಿದಿದ್ದರು.
ಇದನ್ನೂ ಓದಿ: ತಂಡಕ್ಕೆ ಬಿಗ್ ಶಾಕ್.. ಕೈಕೊಟ್ಟ ರೋಹಿತ್, ಅಯ್ಯರ್, ಯಶಸ್ವಿ ಜೈಸ್ವಾಲ್..!
ಗವಾಸ್ಕರ್ರ ಇಂತಹ ಟೀಕೆಗಳು ಆಟಗಾರರ ಒತ್ತಡ ಹೆಚ್ಚಿಸಿವೆ. ಈ ಮಾತುಗಳು ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವಂತೆ ಮಾಡಿದೆ ಅಂತಾ ರೋಹಿತ್, ಬಿಸಿಸಿಐಗೆ ದೂರು ನೀಡಿದ್ದಾರಂತೆ. ಈಗ ಮಾತ್ರವಲ್ಲ.. ಈ ಹಿಂದಿನ ಆಸಿಸ್ ಪ್ರವಾಸದ ವೇಳೆ ನಾಯಕನಾಗಿದ್ದ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿಚಾರದಲ್ಲಿ ಗವಾಸ್ಕರ್ ಅಸಭ್ಯ ಕಮೆಂಟ್ ಮಾಡಿದ್ರು. ಆ ಬಗ್ಗೆಯೂ ಚರ್ಚೆಯಾಗಿದೆ. ಅಂತಿಮವಾಗಿ ಈ ಬಗ್ಗೆ ಬಿಸಿಸಿಐ ಬಾಸ್ಗಳು ಚಿಂತಿಸುವುದಾಗಿ ತಿಳಿಸಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ