/newsfirstlive-kannada/media/post_attachments/wp-content/uploads/2024/12/Rohit-Sharma_News.jpg)
ಮೆಲ್ಬೋರ್ನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಇನ್ನು, ಮಹತ್ವದ ಸರಣಿಯನ್ನು ಉಳಿಸಿಕೊಳ್ಳಲು ಟೀಮ್ ಇಂಡಿಯಾ ಸಿಡ್ನಿ ಟೆಸ್ಟ್ ಗೆಲ್ಲಲೇಬೇಕು. ಮೂರು ದಿನಗಳ ಬಳಿಕ ಎಂದರೆ ಜನವರಿ 3ನೇ ತಾರೀಕಿನಿಂದ ಈ ಟೆಸ್ಟ್ ಶುರುವಾಗಲಿದೆ. ಇದರ ಮಧ್ಯೆ ಮೆಲ್ಬೋರ್ನ್ ಟೆಸ್ಟ್ನಲ್ಲಿ ಆದ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ಔಟ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಏನಂದ್ರು?
ಜೈಸ್ವಾಲ್ ಔಟಾಗಿದ್ದು ದುರದೃಷ್ಟಕರ. ತಂತ್ರಜ್ಞಾನ 100 ಪರ್ಸೆಟ್ ಪರಿಪೂರ್ಣವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಅಂಪೈರ್ ತೀರ್ಮಾನ ದುರದೃಷ್ಟಕರ. ಮೊದಲು ಚೆಂಡು ಬ್ಯಾಟ್‌ಗೆ ತಗುಲಿರಲಿಲ್ಲ ಎಂದು ತೋರಿತು. ಇನ್ನೂ ನಾವು ಈ ಬಗ್ಗೆ ಹೆಚ್ಚು ಗಮನ ಹರಿಸಲು ಬಯಸುವುದಿಲ್ಲ ಎಂದರು.
ಭಾರತ ತಂಡಕ್ಕೆ ಹೀನಾಯ ಸೋಲು
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 369 ರನ್‌ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 105 ರನ್‌ಗಳ ಮುನ್ನಡೆ ಸಾಧಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 234 ರನ್ ಗಳಿಸಿ 340 ರನ್‌ಗಳ ಗೆಲುವಿನ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ 155 ರನ್ ಗಳಿಸಿ 184 ರನ್‌ಗಳಿಂದ ಹೀನಾಯ ಸೋಲು ಕಂಡಿದೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಮಹತ್ವದ ಸೀರೀಸ್; ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ