newsfirstkannada.com

ಮುಂಬೈ ಇಂಡಿಯನ್ಸ್‌ ಮೊದಲ ಗೆಲುವಿಗೆ ಕಾರಣ ಯಾರು.. ರೋಹಿತ್ ಶರ್ಮಾನಾ? ಹಾರ್ದಿಕ್ ಪಾಂಡ್ಯನಾ?

Share :

Published April 7, 2024 at 9:34pm

    49 ರನ್‌ಗಳಿಸಿದ್ದ ಮುಂಬೈಕರ್‌ ರೋಹಿತ್ ಶರ್ಮಾಗೆ ಹಾಫ್ ಸೆಂಚುರಿ ಮಿಸ್‌

    ಸತತ 3 ಸೋಲು ಕಂಡಿದ್ದ ಮುಂಬೈಗೆ ಮೊದಲ ಗೆಲುವಿನ ಖುಷಿ

    ಕೇವಲ 10 ಎಸೆತಗಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳಿಂದ 39 ರನ್

ವಾಖೆಂಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ಕೊನೆಗೂ ಮೊದಲ ಗೆಲುವು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಕೊನೇ ಓವರ್‌ನಲ್ಲಿ ಪಂದ್ಯ ಬದಲಾಗಿದ್ದು, ಮುಂಬೈ ಅಭಿಮಾನಿಗಳಿಗೆ ಇವತ್ತು ನಿಜಕ್ಕೂ ಸೂಪರ್ ಸಂಡೇಯಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ 29 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಬಾರಿಯ ಐಪಿಎಲ್‌ನಲ್ಲಿ ಸತತ 3 ಸೋಲು ಕಂಡಿದ್ದ ಮುಂಬೈಗೆ ಮೊದಲ ಗೆಲುವು ಬಹಳ ಪ್ರಮುಖವಾಗಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾರೊಬ್ಬರೋ ಅರ್ಧ ಶತಕ ಬಾರಿಸದೇ ಐಪಿಎಲ್‌ನಲ್ಲಿ ಅತಿ ಹೆಚ್ಚು ಟಾರ್ಗೆಟ್‌ ರನ್‌ ಕಲೆ ಹಾಕಿದ್ದು ದಾಖಲೆಯಾಗಿದೆ. ಅಂದ್ರೆ 20 ಓವರ್‌ಗಳಲ್ಲಿ 234 ರನ್ ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾರೊಬ್ಬರು ಹಾಫ್ ಸೆಂಚುರಿ ದಾಟಿರಲಿಲ್ಲ. ಇದು ಕೂಡ ವಿಶೇಷವಾಗಿದೆ.

ಇನ್ನು ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮುಂಬೈ ಇಂಡಿಯನ್ಸ್‌ ಇಂದಿನ ಪಂದ್ಯ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲು ತಂಡದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದು, ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ನೀಡಲಾಗಿತ್ತು. ಇದಕ್ಕಿಂತಲೂ ಮುಖ್ಯವಾಗಿ ಓಪನರ್ ಆಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅವರ ಮೇಲೆ ಬಹಳಷ್ಟು ಒತ್ತಡ ಇತ್ತು. ಒತ್ತಡಕ್ಕೆ ಬೆಲೆ ಕೊಟ್ಟ ರೋಹಿತ್ ಶರ್ಮಾ ಸರಿಯಾಗಿ 49 ರನ್ ಸಿಡಿಸಿ ಔಟ್ ಆದರು. ರೋಹಿತ್ ಶರ್ಮಾ ಅವರಂತೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ಅವರು 39 ರನ್‌ ಕಲೆ ಹಾಕಿ ತಂಡಕ್ಕೆ ಉತ್ತಮ ಕೊಡುಗೆಯನ್ನು ಕೊಟ್ಟರು.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು.. ಕೊನೆಗೂ ನಿಟ್ಟುಸಿರು ಬಿಟ್ಟ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಸಾಧಿಸಿದ ಮೊದಲ ಜಯ ಇಡೀ ತಂಡಕ್ಕೆ ಸಂತೋಷವನ್ನು ಉಂಟು ಮಾಡಿದೆ. ಅದರಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರಂತೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಸಲಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ತಂಡ ಗೆಲ್ಲಲು ಇಡೀ ತಂಡದ ಸಂಘಟನಾತ್ಮಕ ಆಟವೇ ಕಾರಣವಾಗಿದೆ. ಅದರಲ್ಲೂ ರೊಮಾರಿಯೋ ಶೆಫರ್ಡ್ ಆಟ ವಿಶೇಷವಾಗಿ ಗಮನ ಸೆಳೆದಿದೆ.

ರೊಮಾರಿಯೋ ಶೆಫರ್ಡ್ ರಿಯಲ್ ಹೀರೋ!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಮುಂಬೈ ಇಂಡಿಯನ್ಸ್‌ಗೆ ನೆರವಾಗಿದ್ದು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೊಮಾರಿಯೋ ಶೆಫರ್ಡ್. ನಾಯಕ ಹಾರ್ದಿಕ್ ಪಾಂಡ್ಯ ಔಟಾದ ಮೇಲೆ ಶೆಫರ್ಡ್‌ ಅಖಾಡಕ್ಕಿಳಿದರು. ರೊಮಾರಿಯೋ ಶೆಫರ್ಡ್‌ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೇವಲ 10 ಎಸೆತಗಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳಿಂದ 39 ರನ್ ಗಳಿಸಿದರು. ಇದರ ಜೊತೆಗೆ ಟಿಮ್ ಡೇವಿಡ್ ಅವರೊಂದಿಗೆ ಕೊನೆಯ 13 ಎಸೆತಗಳಲ್ಲಿ ಅಜೇಯ 53 ರನ್ ಜೊತೆಯಾಟವನ್ನು ನೀಡಿದರು. ರೊಮಾರಿಯೋ ಶೆಫರ್ಡ್ ಅವರು ಪ್ಲೇಯರ್ ಆಫ್ ದಿ ಮ್ಯಾಚ್‌ ಪ್ರಶಸ್ತಿ ಸ್ವೀಕರಿಸಿದ್ದು, ಮುಂಬೈ ಇಂಡಿಯನ್ಸ್ ಗೆಲುವನ ಸೂತ್ರಧಾರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಇಂಡಿಯನ್ಸ್‌ ಮೊದಲ ಗೆಲುವಿಗೆ ಕಾರಣ ಯಾರು.. ರೋಹಿತ್ ಶರ್ಮಾನಾ? ಹಾರ್ದಿಕ್ ಪಾಂಡ್ಯನಾ?

https://newsfirstlive.com/wp-content/uploads/2024/03/Hardik_Rohit-IPL.jpg

Load More