/newsfirstlive-kannada/media/post_attachments/wp-content/uploads/2025/07/TEAM-INDIA-10.jpg)
ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೂ ಶುಬ್ಮನ್ ಗಿಲ್ ಅವರೇ ನಾಯಕರಾಗಲಿದ್ದಾರೆ! ಮುಂಬರುವ ಟೂರ್ನಿಗಳಲ್ಲಿ ರೋಹಿತ್ ಬದಲಿಗೆ ಗಿಲ್ ಅವರು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ರೋಹಿತ್ ಅವರಿಂದ ಕ್ಯಾಪ್ಟನ್ಸಿ ಪಟ್ಟನ್ನು ಗಿಲ್ ಟೇಕ್ ಓವರ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ರೋಹಿತ್ ಶರ್ಮಾ, ಟಿ-20 ಹಾಗೂ ಟೆಸ್ಟ್ ಕ್ರಿಕೆಟ್ಗಳಿಗೆ ವಿದಾಯ ಹೇಳಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಇನ್ನೂ ನಿವೃತ್ತಿ ಘೋಷಣೆ ಮಾಡಿಲ್ಲ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಆಡಬೇಕು ಎಂಬ ಕನಸು ರೋಹಿತ್ ಶರ್ಮಾ ಅವರದ್ದು. ಆದರೆ, ಅಲ್ಲಿಯವರೆಗೆ ರೋಹಿತ್ ಫಿಟ್ನೆಸ್ ಕಾಪಾಡಿಕೊಳ್ಳಬೇಕಾಗಿದೆ.
ವಿಶ್ವಕಪ್ಗೂ ಮುನ್ನ ಭಾರತ ತಂಡ ಹಲವು ಏಕದಿನ ಪಂದ್ಯಗಳನ್ನ ಆಡಲಿದೆ. ಈ ಪಂದ್ಯಗಳನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಕೆಲವು ಮಾಹಿತಿಗಳ ಪ್ರಕಾರ, ಇನ್ಮುಂದೆ ಗಿಲ್ ಅವರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
🚨 Shubman Gill will captain India in their next ODI Series. 🚨 @rohitjuglan reports. pic.twitter.com/NzocUXgvPV
— Ahmed Says (@AhmedGT_) July 10, 2025
ಭಾರತ ತಂಡ ಸದ್ಯದಲ್ಲೇ ಏಕದಿನ ಪಂದ್ಯವನ್ನು ಆಡಲು ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಅಲ್ಲದೇ ಶ್ರೀಲಂಕಾ ವಿರುದ್ಧವೂ ದ್ವಿಪಕ್ಷೀಯ ಪಂದ್ಯಗಳು ಆಯೋಜನೆಗಳ್ಳಲಿವೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ತಂಡದಲ್ಲಿದ್ದರೂ, ಗಿಲ್ ಅವರೇ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತಿವೆ.
Whenever India's next odi series will be - Gill will lead
— Rohit Juglan (@rohitjuglan) July 10, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ