ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ರೋಹಿತ್​ ಶರ್ಮಾ; ಜವಾಬ್ದಾರಿ ಮರೆತ ಕ್ಯಾಪ್ಟನ್

author-image
Bheemappa
Updated On
ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ರೋಹಿತ್​ ಶರ್ಮಾ; ಜವಾಬ್ದಾರಿ ಮರೆತ ಕ್ಯಾಪ್ಟನ್
Advertisment
  • ಕ್ಯಾಪ್ಟನ್ ವಿಕೆಟ್ ಪಡೆದು ಸಂಭ್ರಮಿಸಿದ ಆಸಿಸ್​ ಪ್ಲೇಯರ್ಸ್​
  • ರೋಹಿತ್ ಶರ್ಮಾ ಕೆಲವೇ ರನ್​ಗೆ ಔಟ್, ತಂಡಕ್ಕೆ ನಿರಾಸೆ
  • ಬೃಹತ್​​ ರನ್​ಗಳನ್ನು ಕಲೆ ಹಾಕಿರುವ ಆಸ್ಟ್ರೇಲಿಯಾ ತಂಡ

ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್​​ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತದ ರನ್​ಗಳನ್ನು ಗಳಿಸಿದೆ. ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ ಅನಿರ್ವಾಯತೆ ಇದೆ. ಆದರೆ ಟೀಮ್ ಇಂಡಿಯಾ ಪರ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಮತ್ತೆ ಜವಾಬ್ದಾರಿ ಮರೆತಿದ್ದು ಕೇವಲ 3 ರನ್​ಗೆ ಔಟ್ ಆಗಿದ್ದಾರೆ.

ಟಾಸ್ ಗೆದ್ದುಕೊಂಡ ಆಸ್ಟ್ರೇಲಿಯಾ ಮೊದಲ ದಿನ ಭರ್ಜರಿ ಬ್ಯಾಟಿಂಗ್ ಮಾಡಿತ್ತು. 6 ವಿಕೆಟ್​ಗೆ 311 ರನ್​ಗಳನ್ನು ಗಳಿಸಿ ಇಂದು ಬ್ಯಾಟಿಂಗ್ ಮುಂದುವರೆಸಿತ್ತು. ಇಂದು ಉತ್ತಮ ಬ್ಯಾಟಿಂಗ್ ಮಾಡಿದ ಆಸಿಸ್​ ಪ್ಲೇಯರ್ಸ್​ 474 ರನ್​ಗೆ ಆಲೌಟ್​ ಆಗಿದೆ. ಇದಾದ ಮೇಲೆ ಮೊದಲ ಇನ್ನಿಂಗ್ಸ್​ನ ಬ್ಯಾಟಿಂಗ್ ಮಾಡಲು ಟೀಮ್ ಇಂಡಿಯಾ ಓಪನರ್ಸ್​ ಯಶಸ್ವಿ ಜೈಸ್ವಾಲ್ ಹಾಗೂ ಕ್ಯಾಪ್ಟನ್​ ರೋಹಿತ್ ಶರ್ಮಾ ಕ್ರೀಸ್​ಗೆ ಬಂದಿದ್ದರು.

ಇದನ್ನೂ ಓದಿ:17 ಬೌಂಡರಿ, ಮಯಾಂಕ್ ಅಗರ್ವಾಲ್ ಭರ್ಜರಿ ಸೆಂಚುರಿ.. ಕರ್ನಾಟಕ ತಂಡವನ್ನ ಗೆಲ್ಲಿಸಿದ ಕ್ಯಾಪ್ಟನ್

publive-image

ಆದರೆ ರೋಹಿತ್ ಶರ್ಮಾ ಮತ್ತೆ ಭಾರತ ತಂಡಕ್ಕೆ ಕೈಕೊಟ್ಟಿದ್ದಾರೆ. ಕೇವಲ 3 ರನ್​ಗೆ ಔಟ್ ಆಗಿ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ರೋಹಿತ್ ಶರ್ಮಾ ಔಟ್ ಆಗಿರುವುದು ಭಾರತಕ್ಕೆ ದೊಡ್ಡ ಪೆಟ್ಟು ಕೊಡಲಿದೆ. ಇದು ತಂಡವನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಹಾದಿಗೆ ಕಂಟಕವಾಗಿ ಕಾಡಲಿದೆ. ಆಸ್ಟ್ರೇಲಿಯಾ ಸರಣಿ ಆರಂಭದಿಂದ ರೋಹಿತ್ ವಿಫಲ ಬ್ಯಾಟಿಂಗ್ ಮಾಡುತ್ತಿರುವುದರಿಂದ ಹಲವರು ಟೀಕೆಗಳನ್ನು ಮಾಡುತ್ತಿದ್ದಾರೆ.

ಆಸ್ಟ್ರೇಲಿಯಾದ ಕ್ಯಾಪ್ಟನ್​ ಪ್ಯಾಟ್ ಕಮಿನ್ಸ್​ ಬೌಲಿಂಗ್​​ನಲ್ಲಿ ಆಡುತ್ತಿದ್ದ ರೋಹಿತ್ ಶರ್ಮಾ ಬಿಗ್​ ಶಾಟ್​ ಮಾಡಲು ಹೋಗಿ ಎಡವಿದ್ದಾರೆ. ದೊಡ್ಡ ಹೊಡೆತ ಬೀಸಲು ಮುಂದಾದಾಗ ಬಾಲ್ ಸ್ಲೋ ಆಗಿದೆ. ಆದರೂ ರೋಹಿತ್ ಶರ್ಮಾ ಶಾಟ್ ಮಾಡಿದರು. ಆದರೆ ಬಾಲ್ ಸ್ಕಾಟ್ ಬೋಲ್ಯಾಂಡ್ ಕೈ ಸೇರಿತು. ಈ ಕ್ಯಾಚ್​ ಪಡೆಯುವ ಮೂಲಕ ಆಸಿಸ್​ ಪ್ಲೇಯರ್ಸ್​ ಸಂಭ್ರಮಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment