ರಣಜಿಯಲ್ಲೂ ಕಳಪೆ ಪ್ರದರ್ಶನ: ಈ ಬೆನ್ನಲ್ಲೇ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಹತ್ವದ ನಿರ್ಧಾರ

author-image
Ganesh Nachikethu
Updated On
ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ರೋಹಿತ್​ ಶರ್ಮಾ; ಜವಾಬ್ದಾರಿ ಮರೆತ ಕ್ಯಾಪ್ಟನ್
Advertisment
  • ರಣಜಿ ಟ್ರೋಫಿಯಲ್ಲೂ ಕ್ಯಾಪ್ಟನ್​ ರೋಹಿತ್​ ಶರ್ಮಾ ವೈಫಲ್ಯ
  • ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ರೋಹಿತ್​​ ಮಹತ್ವದ ನಿರ್ಧಾರ
  • ಟೀಮ್​​ ಇಂಡಿಯಾ ಕ್ಯಾಪ್ಟನ್​​ ರೋಹಿತ್​​ ಕೈಗೊಂಡ ನಿರ್ಧಾರವೇನು?

ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ. ಇವರು ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​​ ಟ್ರೋಫಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದರು. ಹೀಗಾಗಿ ಮತ್ತೆ ಫಾರ್ಮ್​​ಗೆ ಬರಲು ಕ್ಯಾಪ್ಟನ್​ ರೋಹಿತ್​ ಶರ್ಮಾ ರಣಜಿ ಟ್ರೋಫಿ ಆಡಲು ಮುಂದಾದರು.

ಇನ್ನು, ರಣಜಿ ಟ್ರೋಫಿಯಲ್ಲೂ ಕ್ಯಾಪ್ಟನ್​ ರೋಹಿತ್​ ಶರ್ಮಾ ಫಾರ್ಮ್​​ಗೆ ಮರಳಲು ಆಗಲಿಲ್ಲ. ಬದಲಿಗೆ ಹಿಟ್​ಮ್ಯಾನ್​​ ಇಲ್ಲೂ ರನ್​​ಗಳ ಬರ ಎದುರಿಸಿದ್ರು. ಈಗ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರಣಜಿ ಟ್ರೋಫಿಯಿಂದ ಹಿಂದೆ ಸರಿದಿದ್ದು, ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದ್ದಾರೆ.

ರಣಜಿಯಲ್ಲೂ ಕಳಪೆ ಪ್ರದರ್ಶನ

ರೋಹಿತ್​ ಶರ್ಮಾ ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವ ರೋಹಿತ್​​ ದೇಶೀ ಟೂರ್ನಿ ರಣಜಿಯಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ಇವರು ಇಲ್ಲೂ ಕಳಪೆ ಪ್ರದರ್ಶನ ನೀಡಿದ್ದು, ಸೆಲೆಕ್ಟರ್ಸ್​ಗೆ ಆಘಾತ ತಂದಿದೆ.

10 ವರ್ಷಗಳ ನಂತರ ದೇಶೀ ಅಂಗಳಕ್ಕೆ ಕಾಲಿಟ್ಟಿದ್ದ ರೋಹಿತ್ ಶರ್ಮಾ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಓಪನಿಂಗ್​ ಮಾಡಿದ ರೋಹಿತ್​ ಶರ್ಮಾ ಮೊದ ಇನ್ನಿಂಗ್ಸ್​ನಲ್ಲಿ ಕೇವಲ 3 ರನ್​ ಮತ್ತು 2ನೇ ಇನ್ನಿಂಗ್ಸ್​ನಲ್ಲಿ 28 ರನ್ ಬಾರಿಸಿ ವಿಕೆಟ್​ ಒಪ್ಪಿಸಿದರು.

ರಣಜಿಯಿಂದ ಹಿಂದೆ ಸರಿದ ರೋಹಿತ್​​

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ರಣಜಿ ಟೂರ್ನಿಯಿಂದ ಹಿಂದೆ ಸರಿಯಲು ರೋಹಿತ್ ನಿರ್ಧರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಟೀಮ್​ ಇಂಡಿಯಾಗೆ ಜೂನಿಯರ್​ ಕೊಹ್ಲಿ ಎಂಟ್ರಿ; ಭಾರತ ತಂಡಕ್ಕೆ ಬಂತು ಆನೆಬಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment