/newsfirstlive-kannada/media/post_attachments/wp-content/uploads/2024/05/ROHIT_SHARMA_PANDYA.jpg)
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ನ ಮೊದಲ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಮಾರ್ಚ್ 23 ರಂದು ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ ಆಡಲಿದೆ.
ಭಾನುವಾರ ಬಿಸಿಸಿಐ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿದೆ. ಈಡನ್ ಗಾರ್ಡನ್ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಆರ್ಸಿಬಿ, ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಾರ್ಚ್ 22 ರಂದು ಎದುರಿಸಲಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್, ನಾಯಕ ಹಾರ್ದಿಕ್ ಇಲ್ಲದೇ ಮೊದಲ ಪಂದ್ಯ ಆಡಲಿದೆ. 2024 ಐಪಿಎಲ್ ಟೂರ್ನಿಯಲ್ಲಿ ಎಲ್ಎಸ್ಜಿ ವಿರುದ್ಧ ಆಡುವಾಗ ರೂಲ್ಸ್ ಬ್ರೇಕ್ ಮಾಡಿದ ಹಿನ್ನೆಲೆಯಲ್ಲಿ ಪಾಂಡ್ಯ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಐಪಿಎಲ್ ನಿಯಮದ ಪ್ರಕಾರ ಅವರು ಒಂದು ಪಂದ್ಯದಿಂದ ಅಮಾನತುಗೊಂಡಿದ್ದಾರೆ. ನಿಧಾನಗತಿಯ ಬೌಲಿಂಗ್ ಮಾಡಿರೋದಕ್ಕೆ ಈ ಶಿಕ್ಷೆ ಅನುಭವಿಸುತ್ತಿದ್ದು, ಅದಕ್ಕಾಗಿ 30 ಲಕ್ಷ ರೂಪಾಯಿ ದಂಡ ಕೂಡ ಪಾವತಿ ಮಾಡಲಿದ್ದಾರೆ.
ಇದನ್ನೂ ಓದಿ: IPL 2025 ವೇಳಾಪಟ್ಟಿ ಬಿಡುಗಡೆ.. RCB ವಿರುದ್ಧವೇ ಮೊದಲ ಪಂದ್ಯ; ಯಾರ ಮೇಲೆ? ಎಲ್ಲಿ? ಯಾವಾಗ?
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡವನ್ನು ಯಾರು ಮುನ್ನಡೆಸ್ತಾರೆ ಎಂಬ ಪ್ರಶ್ನೆ ಇದೆ. ಹಾಗಂತ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕರ ದಂಡೇ ಇದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರಿತ್ ಬೂಮ್ರಾ ಇದ್ದಾರೆ.
ಪಾಂಡ್ಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕ್ಯಾಪ್ಟನ್ಸಿಯಿಂದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ಕಿಕೌಟ್ ಮಾಡಿತ್ತು. ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: IPL 2025: ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಪಂದ್ಯಗಳು ಯಾವಾಗ? ಎಲ್ಲಿ? ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್