/newsfirstlive-kannada/media/post_attachments/wp-content/uploads/2024/04/Virat-kohli-5.jpg)
ಈ ಐಪಿಎಲ್​ನ ಫಸ್ಟ್​​​ಹಾಫ್​ನಲ್ಲಿ​ ಕಿಂಗ್ ಕೊಹ್ಲಿಗೆ ಕಾಂಪಿಟೇಟರ್​ ಅನ್ನೋರೆ ಇರ್ಲಿಲ್ಲ. ಕೊಹ್ಲಿ ನಡೆದಿದ್ದೇ ದಾರಿಯಾಗಿತ್ತು. ಆದ್ರೀಗ ರನ್ ಮಷೀನ್​ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಕಿಂಗ್ ಕೊಹ್ಲಿಯ ನಂ.1 ಪಟ್ಟದ ಮೇಲೆ ಮೂವರು ಕಣ್ಣಿಟ್ಟಿದ್ದಾರೆ. ಸ್ವಲ್ಪ ಯಾಮಾರಿದ್ರೂ ಆರೆಂಜ್ ಬೇರೆಯವರ ಪಾಲಾಗಲಿದೆ.
ಸೀಸನ್​​ 17ನೇ ಐಪಿಎಲ್​​​​ ದಿನ ಕಳೆದಂತೆ ರೋಚಕ ಹಣಾಹಣಿಗೆ ಸಾಕ್ಷಿಯಾಗ್ತಿದೆ. ಟ್ವಿಸ್ಟ್​​​​​ ಆ್ಯಂಡ್ ಟರ್ನ್​, ನಾ ಕೊಡೆ ನೀ ಬಿಡೆ ಅನ್ನುವ ಕಿಚ್ಚಿನ ಹೋರಾಟ ನೋಡುಗರ ಕಣ್ಣಿಗೆ ಹಬ್ಬದೂಡ ಬಡಿಸ್ತಿದೆ. ಇಂತಹ ರೋಚಕ ಕೂಟದಲ್ಲಿ ಆರೆಂಜ್​​​ ಕ್ಯಾಪ್​​ ಯುದ್ಧವು ಜೋರಾಗಿದೆ. ಟಾಪ್ ಸ್ಕೋರರ್​ ಪಟ್ಟ ಒಲಿಸಿಕೊಳ್ಳಲು ಹಿಂದೆಂದೂ ಕಾಣದ ರೀತಿಯಲ್ಲಿ ಫೈಟ್ ಏರ್ಪಟ್ಟಿದೆ.
ಇದನ್ನೂ ಓದಿ:ಐಪಿಎಲ್ ಪ್ರಿಯರಿಗೆ ಬಿಗ್ ಶಾಕ್ ನೀಡಲು ಮುಂದಾದ Jio Cinema..!
/newsfirstlive-kannada/media/post_attachments/wp-content/uploads/2024/04/Kohli-6-1.jpg)
ಕಿಂಗ್ ಕೊಹ್ಲಿ V/S ಮೂವರು ಇಂಡಿಯನ್ಸ್..!
ಕಹಾನಿ ಮೇ ಟ್ವಿಸ್ಟ್ ಎನ್ನುವಂತೆ ಐಪಿಎಲ್​​​​​​ ಮೊದಲಾರ್ಧ ಮುಗಿದಿದ್ದೆ ಬಂತು. ಆರೆಂಜ್​​​ ಕ್ಯಾಪ್​ ಹೋಲ್ಡರ್​ ಬದಲಾಗುವ ಸುಳಿವು ಸಿಗ್ತಿದೆ. ಟೂರ್ನಿ ಆರಂಭದಿಂದ ಕಿಂಗ್ ಕೊಹ್ಲಿ ಟಾಪ್ ಸ್ಕೋರರ್​​​. ರಿಯಾನ್​ ಪರಾಗ್​ ಬಿಟ್ರೆ ಯಾರೊಬ್ಬರು ಅವರ ಬಳಿ ಸುಳಿದಿರರ್ಲಿಲ್ಲ. ಆದ್ರೀಗ ಎಲ್ಲವೂ ಬದಲಾಗಿದೆ. ರನ್ ಮಷೀನ್​​ಗೆ ಮೂವರು ಪ್ರಬಲ ಕಾಂಪಿಟೇರರ್​ ಹುಟ್ಟಿಕೊಂಡಿದ್ದಾರೆ. ಅವರು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರೇ ಆಗಿದ್ದು, ಆರೆಂಜ್ ಕ್ಯಾಪ್​ ದಂಗಲ್ ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಮಾಡಿದೆ.
IPL 2024, ಟಾಪ್​​​-5 ಸ್ಕೋರರ್​
ಇಲ್ಲಿಯತನಕ 8 ಪಂದ್ಯಗಳನ್ನ ಆಡಿರೋ ವಿರಾಟ್ ಕೊಹ್ಲಿ 379 ರನ್ ಗಳಿಸಿ ಆರೆಂಜ್ ಕ್ಯಾಪ್​ ಲಿಸ್ಟ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಡೇಂಜರಸ್​​​ ಟ್ರಾವಿಸ್​​​ 6 ಪಂದ್ಯವಾಡಿ 324 ರನ್​ ಕೊಳ್ಳೆ ಹೊಡೆದು, 2ನೇ ಸ್ಥಾನದಲ್ಲಿದ್ದಾರೆ. ಇನ್ನು ರಿಯಾನ್​ ಪರಾಗ್​ 8 ಪಂದ್ಯದಿಂದ 318 ರನ್ ಗಳಿಸಿ ನಂತರದ 3ನೇ ಸ್ಥಾನದಲ್ಲಿದ್ದಾರೆ. ಸಂಜು ಸ್ಯಾಮ್ಸನ್ 314 ಹಾಗೂ ರೋಹಿತ್​​​ ಶರ್ಮಾ 303 ರನ್ ಹೊಡೆದು ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2024/03/Sanju_KL-Rahul.jpg)
ಸ್ವಲ್ಪ ಯಾಮಾರಿದ್ರೂ ಕೊಹ್ಲಿ ನಂ.1 ಪಟ್ಟಕ್ಕೆ ಕುತ್ತು
ಕಿಂಗ್ ಕೊಹ್ಲಿ ನಾನೇ ನಂಬರ್​​​​​-1 ಅಂತ ಮೈಮರೆತು ಕೂರುವ ಹಾಗಿಲ್ಲ. ಸ್ವಲ್ಪ ಯಾಮಾರಿದ್ರೂ ಕುತ್ತು ಗ್ಯಾರಂಟಿ. ಯಾಕಂದ್ರೆ ಆರೆಂಜ್​​​​ ಕ್ಯಾಪ್ ತಮ್ಮದಾಗಿಸಿಕೊಳ್ಳಲು ತೀವ್ರ ಜಿದ್ದು ಏರ್ಪಟ್ಟಿದೆ. ರೋಹಿತ್​ ಶರ್ಮಾ, ರಿಯಾನ್​​ ಪರಾಗ್ ಹಾಗೂ ಸಂಜು ಸ್ಯಾಮ್ಸನ್ ನಂಬರ್​​ 1 ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಕೊಹ್ಲಿ ಹಾಗೂ ತ್ರಿಮೂರ್ತಿ ಇಂಡಿಯನ್ ಸ್ಟಾರ್ಸ್​ ರನ್ ಮಧ್ಯೆ ಹೆಚ್ಚೇನೂ ಅಂತರವಿಲ್ಲ.
324 ರನ್ ಗಳಿಸಿರೋ ರಿಯಾನ್​ ಪರಾಗ್​ ಕಿಂಗ್ ಕೊಹ್ಲಿಗಿಂತ ಬರೀ 55 ರನ್ ಹಿಂದಿದ್ದಾರೆ. ಸಂಜು ಸ್ಯಾಮ್ಸನ್​​​ 314 ರನ್ ಚಚ್ಚಿದ್ದಾರೆ. ಅಂದ್ರೆ ವಿರಾಟ್​​​ಗಿಂತ ಬರೀ 65 ರನ್​ಗಳ ಹಿಂದಿದ್ದಾರೆ. ಹಿಟ್​ಮ್ಯಾನ್​​​​ ಖ್ಯಾತಿಯ ರೋಹಿತ್​​​​​ ಕೂಡ 303 ರನ್ ಹೊಡೆದಿದ್ದಾರೆ. ಇನ್ನು 76 ರನ್ ಗಳಿಸಿ ಬಿಟ್ರೆ, ಕೊಹ್ಲಿ ನಂ.1 ಪಟ್ಟ ಛಿದ್ರವಾಗಲಿದೆ.
ಇದನ್ನೂ ಓದಿ: ಮದುವೆಗೂ ಮೊದಲೇ ಅಪ್ಪ.. ಹೈದರಾಬಾದ್ ತಂಡದ ನಾಯಕ ಕಮ್ಮಿನ್ಸ್ ಲವ್ ಸ್ಟೋರಿ ಮಜವಾಗಿದೆ..!
/newsfirstlive-kannada/media/post_attachments/wp-content/uploads/2024/04/Rohit-Sharma-MI-2.jpg)
ಒಟ್ಟಿನಲ್ಲಿ, ಈ ಬಾರಿಯ ಆರೆಂಜ್​​ ಕ್ಯಾಪ್​​ಗಾಗಿ ಮೆಗಾ ಫೈಟ್ ಏರ್ಪಟ್ಟಿರೋದಂತೂ ನಿಜ. ಕಿಂಗ್ ಕೊಹ್ಲಿ ಸೆಕೆಂಡ್​ ಹಾಫ್​ನಲ್ಲಿ ಆರ್ಭಟ ಮುಂದುವರಿಸಿ ನಂ.1 ಪಟ್ಟ ಉಳಿಸಿಕೊಳ್ತಾರಾ ? ಇಲ್ಲ ರೋಹಿತ್​​ ಶರ್ಮಾ, ಸಂಜು ಸ್ಯಾಮ್ಸನ್​ ಹಾಗೂ ರಿಯಾನ್ ಪರಾಗ್​​​ ಸಿಡಿಗುಂಡಿನಂತೆ ಸಿಡಿದು ಆರೆಂಜ್​​ ಕ್ಯಾಪ್ ಕಸಿದುಕೊಳ್ತಾರಾ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us