/newsfirstlive-kannada/media/post_attachments/wp-content/uploads/2025/05/SURYA_ROHIT_RAYAN.jpg)
ತವರಿನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಹೀನಾಯವಾಗಿ ಸೋಲು ಕಂಡಿದೆ. 218 ರನ್ಗಳ ದೊಡ್ಡ ಸ್ಕೋರ್ ಚೇಸ್ ಮಾಡಲಾಗದೇ ರಾಜಸ್ಥಾನ್ 100 ರನ್ಗಳ ಅಂತರದಿಂದ ತಲೆ ಬಾಗಿದೆ. ಇದರಿಂದ ಪ್ಲೇ ಆಫ್ನಿಂದಲೂ ರಾಯಲ್ಸ್ ಹೊರ ಬಿದ್ದಂತೆ ಆಯಿತು.
ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಟಾಸ್ ಗೆದ್ದು ಎದುರಾಳಿ ಮುಂಬೈ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಮುಂಬೈ ಪರ ಓಪನರ್ಗಳಾಗಿ ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್ ಮೈದಾನಕ್ಕೆ ಆಗಮಿಸಿದರು. ಈ ಇಬ್ಬರು ರಾಯಲ್ಸ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ರಯಾನ್ ರಿಕೆಲ್ಟನ್ ಕೇವಲ 28 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ಗಳಿಂದ ಅಮೋಘವಾದ ಅರ್ಧಶತಕ ಬಾರಿಸಿದರು.
ಇದನ್ನೂ ಓದಿ:ವೈಭವ್ ಸೂರ್ಯವಂಶಿ ನೋಡಿ MS ಧೋನಿ ಏನು ಹೇಳಿದರು..? ಹಿಂಗಾ ಕಮೆಂಟ್ ಮಾಡೋದು
ರೋಹಿತ್ ಶರ್ಮಾ ಕೂಡ ಪಂದ್ಯದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ 31 ಬಾಲ್ಗಳಲ್ಲಿ 9 ಬೌಂಡರಿಗಳಿಂದ 50 ರನ್ ಪೂರೈಸಿದರು. ಕಳೆದ ಪಂದ್ಯದಲ್ಲಿ ವಿಫರಾಗಿದ್ದ ರೋಹಿತ್ ಮತ್ತೆ ಬ್ಯಾಟಿಂಗ್ ಹಳಿಗೆ ಮರಳಿದರು. ಸೂರ್ಯಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 48 ರನ್ಗಳ ಕಾಣಿಕೆ ನೀಡಿದರು. ಕೇವಲ 23 ಎಸೆತ ಎದುರಿಸಿದ ಸೂರ್ಯ, 4 ಬೌಂಡರಿ, 3 ಬಿಗ್ ಸಿಕ್ಸರ್ನಿಂದ 48 ರನ್ಗಳಿಂದ ಅಜೇಯರಾಗಿ ಉಳಿದರು. ಇನ್ನು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೂಡ 23 ಬಾಲ್ಗಳಲ್ಲಿ 6 ಬೌಂಡರಿ, 1 ಸಿಕ್ಸರ್ನಿಂದ 48 ರನ್ ಗಳಿಸಿ ಅಜೇಯರಾದರು. ಹೀಗಾಗಿ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 218 ರನ್ಗಳ ಬಿಗ್ ಟಾರ್ಗೆಟ್ ನೀಡಿತ್ತು.
ಈ ಗುರಿಯ ಬೆನ್ನು ಬಿದ್ದ ರಾಜಸ್ಥಾನ್ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ವೈಭವ್ ಸೂರ್ಯವಂಶಿ ಡಕೌಟ್ ಆದ್ರೆ ಯಶಸ್ವಿ ಜೈಸ್ವಾಲ್ 13 ರನ್ಗೆ ಪೆವಿಲಿಯನ್ ಸೇರಿದರು. ನಿತೀಶ್ ರಾಣ 9, ನಾಯಕ ಪರಾಗ್ 16, ಧೃವ್ ಜುರೆಲ್ 11, ಹೆಟ್ಮರ್ ಡಕೌಟ್, ಶುಭಂ ದುಬೆ 15, ಹೀಗೆ ರಾಜಸ್ಥಾನ್ನ ಯಾವ ಆಟಗಾರನೂ ಉತ್ತಮ ಬ್ಯಾಟಿಂಗ್ ಮಾಡಲೇ ಇಲ್ಲ.
ಕೊನೆಯಲ್ಲಿ ರಾಜಸ್ಥಾನ್ ಪರ ಬೌಲರ್ ಜೋಫ್ರಾ ಆರ್ಚರ್ 27 ಬಾಲ್ನಲ್ಲಿ 2 ಸಿಕ್ಸರ್, 2 ಫೋರ್ನಿಂದ 30 ರನ್ ಗಳಿಸಿದರು. ಆದರೆ ಆಗಾಲೇ ಸೋಲುವ ಹಂತಕ್ಕೆ ಬಂದಿದ್ದರಿಂದ ತಂಡವನ್ನು ಮೇಲೆತ್ತಲು ಆಗಲಿಲ್ಲ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಕೊನೆದಾಗಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 16.1 ಓವರ್ನಲ್ಲಿ 117 ರನ್ ಮಾತ್ರ ಗಳಿಸಿ ಸೋಲೋಪ್ಪಿಕೊಂಡಿತು. ಅಲ್ಲದೇ ಈ ಪಂದ್ಯ ಸೋಲುವ ಮೂಲಕ ಚೆನ್ನೈ ನಂತರದಲ್ಲಿ ಆರ್ಆರ್ ಪ್ಲೇಆಫ್ನಿಂದ ಹೊರ ಬಿದ್ದಂತೆ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ