Advertisment

Champions Trophy; ಪ್ಲೇಯರ್ಸ್ ಆಯ್ಕೆಯಲ್ಲಿ ಕೋಚ್​ಗೆ ಡಿಚ್ಚಿ ಕೊಟ್ಟ ರೋಹಿತ್, ಏನೇನು ಆಯಿತು?​

author-image
Bheemappa
Updated On
ಯಾರು ಯಾವಾಗ ಬೇಕಾದರೂ ಕೈ ಎತ್ತಬಹುದು.. ರೋಹಿತ್, ಕೊಹ್ಲಿ ನಿವೃತ್ತಿ ಬಗ್ಗೆ ಕೋಚ್ ಗಂಭೀರ್​​ ಮಾತು
Advertisment
  • ವಿಕೆಟ್​ ಕೀಪರ್ ಆಯ್ಕೆ ಮಾಡುವಾಗ ಕೋಚ್-ರೋಹಿತ್ ವಾಕ್ಸಮರ
  • ಶುಭಮನ್​ ಗಿಲ್​ಗೆ​ ಉಪ ನಾಯಕನ ಪಟ್ಟದ ಹಿಂದೆ ಇರೋದ್ಯಾರು?
  • ಪ್ಲೇಯರ್ಸ್​ ಆಯ್ಕೆ ವೇಳೆ ಕೋಚ್-ರೋಹಿತ್​ ನಡುವೆ ಜಟಾಪಟಿ

ಗೌತಮ್ ಗಂಭೀರ್ ಕೋಚ್ ಆದ ಮೇಲೆ ಅವರು ಹೇಳಿದ್ದೆ ವೇದವಾಕ್ಯ ಎಂಬಂತಾಗಿತ್ತು. ಟೀಮ್ ಸೆಲೆಕ್ಷನ್​ನಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಗಂಭೀರ್ ಮಾರ್ಕ್​ ಎದ್ದು ಕಾಣಿಸುತ್ತಿತ್ತು. ಆದ್ರೆ, ಈಗ ಗಂಭೀರ್​ ಪವರ್​ ಕಟ್ ಆದಂತಿದೆ. ಚಾಂಪಿಯನ್ಸ್ ಟ್ರೋಫಿ ತಂಡದ ಆಯ್ಕೆ ವಿಚಾರದಲ್ಲಿ ರೋಹಿತ್ ಶರ್ಮಾನೇ ಬಾಸ್​​​​​​ ಆಗಿದ್ದಾರೆ. ನಾನ್​ ಆಡಿದ್ದೇ ಆಟ ಎಂಬಂತಿದ್ದ ಗಂಭೀರ್​ಗೆ ಈಗ ಹಿನ್ನೆಡೆ ಆಗಿದೆ.

Advertisment

ಮಿನಿ ವಿಶ್ವಕಪ್​​ಗೆ ಟೀಮ್ ಇಂಡಿಯಾ ಪ್ರಕಟವಾಗಿದ್ದಾಗಿದೆ. ನಾನಾ.. ಲೆಕ್ಕಚಾರಗಳನ್ನ ಹಾಕಿ ಬಲಿಷ್ಠ ತಂಡವನ್ನ ಅನೌನ್ಸ್​ ಮಾಡಲಾಗಿದೆ. ಈ ಬಾರಿ ತಂಡದ ಆಯ್ಕೆಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮೇಲುಗೈ ಸಾಧಿಸಿದ್ದಾರೆ. ಹೆಡ್ ಕೋಚ್ ಗೌತಮ್​ ಗಂಭೀರ್, ಮಾತಿಗೆ ಕಿಮ್ಮತ್ತು ನೀಡದೆ ಸಲಹೆಗಳನ್ನ ಸೆಲೆಕ್ಷನ್ ಕಮಿಟಿ ಸಾರಾಸಗಟಾಗಿ ತಿರಸ್ಕರಿಸಿದೆ. ಆ ಮೂಲಕ ಟೀಮ್ ಇಂಡಿಯಾಗೆ ಬಾಸ್ ರೋಹಿತ್ ಶರ್ಮಾ ಅನ್ನೋದನ್ನು ಸಾರಿ ಸಾರಿ ಹೇಳಿದೆ. ಚಾಂಪಿಯನ್ಸ್​ ಟ್ರೋಫಿಯ ಟೀಮ್​ ಸೆಲೆಕ್ಷನ್ ರೋಹಿತ್ ಹಾಗೂ ಗೌತಮ್ ಗಂಭೀರ್ ನಡುವಿನ ಭಿನ್ನಾಭಿಪ್ರಾಯಗಳನ್ನ ಮತ್ತೊಮ್ಮೆ ಬಟಾಬಯಲಾಗುವಂತೆ ಮಾಡಿದೆ.

publive-image

2 ಗಂಟೆ, 50 ನಿಮಿಷ ತಡವಾಗಿ ಟೀಮ್ ಇಂಡಿಯಾ ಅನೌನ್ಸ್..!

ಮಧ್ಯಾಹ್ನ 12.30ಕ್ಕೆ ಸರಿಯಾಗಿ ಚಾಂಪಿಯನ್ಸ್​ ಟ್ರೋಫಿಯ ಟೀಮ್ ಸೆಲೆಕ್ಷನ್ ಪ್ರೆಸ್ ಮೀಟ್​ ನಡೆಯಬೇಕಿತ್ತು. ಆದರೆ, ಪ್ರೆಸ್​ಮೀಟ್​ ಆರಂಭವಾಗಿದ್ದು 2 ಗಂಟೆ 40 ನಿಮಿಷಕ್ಕೆ. ಬರೋಬ್ಬರಿ 2ಗಂಟೆ 50ನಿಮಿಷ ತಡವಾಗಿ ಟೀಮ್​ ಅನೌನ್ಸ್​ ಆಗಿದ್ದಕ್ಕೆ ಕಾರಣ ಸೆಲೆಕ್ಟರ್​ ಅಜಿತ್ ಅಗರ್ಕರ್, ಕ್ಯಾಪ್ಟನ್ ರೋಹಿತ್ ಶರ್ಮಾ. ಈ ಬಾರಿಯ ಟೀಮ್​ ಇಂಡಿಯಾ ಸೆಲೆಕ್ಷನ್​ ಮೀಟಿಂಗ್​ನಲ್ಲಿ ರೋಹಿತ್ ತಾಳವೇ ಒಂದಾದ್ರೆ. ಗೌತಮ್ ಗಂಭೀರ್​ ಮೇಳವೇ ಒಂದಾಗಿತ್ತು. ಹೈವೋಲ್ಟೆಜ್​ ಸಭೆಯಲ್ಲಿ ಇಬ್ಬರ ನಡುವೆ ತೀವ್ರ ಜಟಾಪಟಿ ನಡೆದಿದೆ. ಅಂತಿಮವಾಗಿ ಈ ಫೈಟ್​ನಲ್ಲಿ ಗೆದ್ದಿದ್ದು ಮಾತ್ರ ಕ್ಯಾಪ್ಟನ್ ರೋಹಿತ್.

ಹಾರ್ದಿಕ್​ಗೆ ವೈಸ್ ಕ್ಯಾಪ್ಟನ್ಸಿ ನೀಡಲು ಪಟ್ಟು ಹಿಡಿದಿದ್ದ ಗಂಭೀರ್..!

ಚಾಂಪಿಯನ್ಸ್​ ಟ್ರೋಫಿಗೆ ಟೀಮ್ ಅನೌನ್ಸ್​ಮೆಂಟ್​ಗೂ ಮುನ್ನ ನಡೆದ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಹೆಡ್ ಕೋಚ್ ಗಂಭೀರ್​, ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯಗೆ ಉಪ ನಾಯಕತ್ವದ ಸ್ಥಾನ ನೀಡುವಂತೆ ಒತ್ತಾಯಿಸಿದ್ರಂತೆ. ಆದ್ರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ, ಶುಭ್​ಮನ್ ಗಿಲ್​ ಪರ ಬ್ಯಾಟ್​ ಬೀಸಿದ್ದಾರೆ. ರೋಹಿತ್​ ನಿರ್ಧಾರವನ್ನ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಬೆಂಬಲಿಸಿದ್ದಾರೆ. ಅಂತಿಮವಾಗಿ ಹಿಟ್​ಮ್ಯಾನ್​​ ಮಾತೇ ಫೈನಲ್​ ಆಗಿದೆ.

Advertisment

ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಹೆಸರು ಪ್ರಸ್ತಾಪಿಸಿದ್ದ ಗೌತಿ.!

ಫಸ್ಟ್​ ಚಾಯ್ಸ್ ವಿಕೆಟ್ ಕೀಪರ್ ಆಗಿ ಕೆ.ಎಲ್.ರಾಹುಲ್ ಮಣೆಹಾಕಲು ಸೆಲೆಕ್ಷನ್ ಕಮಿಟಿ ನಿರ್ಣಯಿಸಿತ್ತು. ಆದ್ರೆ, ಬ್ಯಾಕ್ ಆಪ್ ವಿಕೆಟ್ ಕೀಪರ್ ಕೋಟಾದಲ್ಲಿ ರಿಷಭ್ ಪಂತ್ ಬದಲಿಗೆ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲು ಗಂಭೀರ್, ಓತ್ತಾಯಿಸಿದ್ದರು ಎನ್ನಲಾಗಿದೆ. ಮೂರು ಟಿ20 ಶತಕ ಸಿಡಿಸಿ ರೆಡ್ ಹಾಟ್ ಫಾರ್ಮ್​ನಲ್ಲಿರುವ ಸಂಜುಗೆ. ಯಾವುದೇ ಸ್ಲಾಟ್​ನಲ್ಲಾದರು ಆಡೋ ಕೆಪಾಸಿಟಿ ಇದೆ. ಯುಎಇ ಕಂಡೀಷನ್ಸ್​ ಬೆಸ್ಟ್​ ಚಾಯ್ಸ್ ಎಂಬ ನಿಲುವು ಗಂಭೀರ್ ವ್ಯಕ್ತಪಡಿಸಿದ್ರಂತೆ. ಹೀಗಾಗಿ ಪಂತ್​​​​​​​​​​​​​​​, ಡ್ರಾಪ್ ಮಾಡೋ ಸಲಹೆ ನೀಡಿದ್ರಂತೆ. ಆದ್ರೆ, ರೋಹಿತ್​, ರಿಷಭ್ ಪಂತ್ ಪರ ಬ್ಯಾಟ್​ ಬೀಸಿದ್ದಾರೆ. ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ ಪಟ್ಟು ಸಡಿಲಿಸದ ರೋಹಿತ್, ಕೊನೆಗೂ ಪಂತ್​ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ದೋಸ್ತ ಮನೆಯಿಂದ ಹೋಗ್ತಿದ್ದಂತೆ ಹನುಮಂತು ಭಾವುಕ.. ಭವ್ಯ ಸಮಾಧಾನಪಡಿಸಿದ ಕ್ಷಣ ಹೇಗಿತ್ತು..?

publive-image

ಜಯ್​ ಶಾ ಅಲಭ್ಯ.. ಗಂಭೀರ್ ಪವರ್​ ಕಟ್..?

ಗೌತಮ್ ಗಂಭೀರ್, ಹೆಡ್​ ಕೋಚ್ ಆದ್ಮೇಲೆ, ನಾನೇ ಸರ್ವಾಧಿಕಾರಿ ಎಂಬಂತೆ ನಡೆದುಕೊಳ್ಳುತ್ತಿದ್ದರು. ಪ್ರತಿ ಟೀಮ್ ಸೆಲೆಕ್ಷನ್​​ನಲ್ಲಿ ಗೌತಮ್​ ಗಂಭೀರ್, ಮಾರ್ಕ್​ ಇರ್ತಿತ್ತು. ಆದ್ರೆ, ಚಾಂಪಿಯನ್ಸ್​ ಟ್ರೋಫಿ ತಂಡದ ಆಯ್ಕೆಯಲ್ಲಿ ಕಂಪ್ಲೀಟ್​ ರೋಹಿತ್, ಮಾತಿಗೆ ಸೆಲೆಕ್ಷನ್ ಕಮಿಟಿ ಅಸ್ತು ಎಂದಿದೆ. ಇದು ಸಹಜವಾಗೇ ಗಂಭೀರ್ ಪ್ರಭಾವ ಕಡಿಮೆ ಆಗಿದ್ಯಾ ಎಂಬ ಪ್ರಶ್ನೆ ಹುಟ್ಟಿಸಿದೆ. ಜಯ ಶಾ ಬಿಸಿಸಿಐನಿಂದ ಐಸಿಸಿಗೆ ಶಿಫ್ಟ್ ಅದ್ಮೇಲೆ, ಗಂಭೀರ್​ ಮಾತಿಗೆ ಕಿಮ್ಮತ್ತು ನೀಡ್ತಿಲ್ವಾ ಎಂಬ ಅನುಮಾನ ಹುಟ್ಟಿದೆ.

Advertisment

ಸದ್ಯ ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ಗಂಭೀರ್​ ಅಲ್ಲ, ಕ್ಯಾಪ್ಟನ್ ರೋಹಿತ್​ ನಿರ್ಧಾರ ಅಂತಿಮವಾಗಿದೆ. ಇದ್ರ ಬೆನ್ನಲ್ಲೇ, ಈ ನಿರ್ಧಾರ ತಂಡದಲ್ಲಿ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಈ ಇಬ್ಬರ ನಡುವೆ ಮೊದಲೇ ಭಿನ್ನಾಬಿಪ್ರಾಯ ಇತ್ತು ಎಂಬ ಸುದ್ದಿಯಿದೆ. ಇದರ ನಡುವೆ ಆದ ಈ ಟೀಮ್ ಸೆಲೆಕ್ಷನ್​ ಉರಿಯೋ ಬೆಂಕಿಗೆ ತುಪ್ಪ ಸುರಿದಂತಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಇವರಿಬ್ಬರ ನಡುವೆ ಸಮನ್ವಯತೆ ಮೂಡಿಸುವ ಕೆಲಸ ಆಗಬೇಕಿದೆ. ಇಲ್ಲ ಚಾಂಪಿಯನ್ಸ್​ ಟ್ರೋಫಿ ಉದ್ದಕ್ಕೂ ಡ್ರೆಸ್ಸಿಂಗ್​ ರೂಮ್​ ವಿವಾದಗಳಿಂದಲೇ ಸದ್ದಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment