newsfirstkannada.com

T20 ವಿಶ್ವಕಪ್​​: ಯಂಗ್​​ ಪ್ಲೇಯರ್​​ಗಾಗಿ ಈ ಸ್ಟಾರ್​ ಆಟಗಾರರಿಗೆ ಕೊಕ್​​ ಕೊಡ್ತಾರಾ ರೋಹಿತ್​​..?

Share :

Published January 12, 2024 at 4:19pm

Update January 12, 2024 at 4:39pm

    2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಬೆನ್ನಲ್ಲೇ ಟಿ20 ವಿಶ್ವಕಪ್!

    ಟಿ20 ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ಈಗಿನಿಂದಲೇ ತಯಾರಿ

    ಜಿತೇಶ್​​, ಪಂತ್​​ ಇಬ್ಬರಲ್ಲಿ ರೋಹಿತ್​​ ಆಯ್ಕೆ ಯಾರು ಗೊತ್ತಾ..?

2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಬೆನ್ನಲ್ಲೇ ಟಿ20 ವಿಶ್ವಕಪ್​​ ನಡೆಯಲಿದೆ. ಜೂನ್ 1ನೇ ತಾರೀಕಿನಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರೋ 2024ರ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ಹೀಗಾಗಿ ಈ ತಂಡಗಳ ವಿರುದ್ಧ ಗೆಲ್ಲಲು ಬಲಿಷ್ಠ ಭಾರತ ತಂಡ ಬೇಕಿದೆ. ಆದ್ದರಿಂದ ಟಿ20 ವಿಶ್ವಕಪ್‌ ಟೂರ್ನಿಗೆ ಯಾರನ್ನು ಆಯ್ಕೆ ಮಾಡಬೇಕು ಅನ್ನೋ ಸವಾಲ್​​ ಭಾರತ ತಂಡದ ಮುಂದಿದೆ.

ಇನ್ನು, ಟೀಂ ಇಂಡಿಯಾದ ಕ್ಯಾಪ್ಟನ್​​​ ರೋಹಿತ್​​ ಶರ್ಮಾ, ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಈ ಇಬ್ಬರು ಭಾರತ ಟಿ20 ತಂಡದ ಭಾಗವಾಗಿ ಇರಲಿದ್ದಾರೆ. ಸೂರ್ಯಕುಮಾರ್​ ಯಾದವ್​​, ಹಾರ್ದಿಕ್​ ಪಾಂಡ್ಯ ಸೇರಿದಂತೆ ಹಲವರು ತೀವ್ರ ಗಾಯಕ್ಕೆ ತುತ್ತಾಗಿದ್ದು, ಫಿಟ್ನೆಸ್​​ ಸಾಬೀತು ಮಾಡಿದ್ರೆ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಆದರೆ, ಟೀಂ ಇಂಡಿಯಾದ ವಿಕೆಟ್​ ಕೀಪರ್​ ಯಾರಾಗಲಿದ್ದಾರೆ? ಅನ್ನೋದೆ ಈಗ ಚರ್ಚೆ.

ಹೌದು, ಭಾರತ ತಂಡದ ವಿಕೆಟ್​ ಕೀಪರ್​ ಸ್ಥಾನಕ್ಕೆ ಭಾರೀ ಪೈಪೋಟಿ ಇದೆ. ರಿಷಭ್ ಪಂತ್, ಇಶಾನ್ ಕಿಶನ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ ವಿಕೆಟ್​ ಕೀಪರ್​ ರೇಸ್​ನಲ್ಲಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟರ್​​ ಸುರೇಶ್​ ರೈನಾ ಮಾತಾಡಿದ್ದಾರೆ.

ಜಿತೇಶ್ ಶರ್ಮಾ ಅದ್ಭುತ ವಿಕೆಟ್​ ಕೀಪರ್​ ಬ್ಯಾಟರ್​​. ಈತ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ. ಒಂದು ವೇಳೆ ಪಂತ್​ ಫಿಟ್​ ಆದ್ರೆ, ರೋಹಿತ್​​ ಮೊದಲ ಆಯ್ಕೆ ಅವರೇ ಆಗಿರುತ್ತಾರೆ ಎಂದಿದ್ದಾರೆ. ಈ ಮೂಲಕ ಜಿತೇಶ್​​ ಅಲ್ಲ, ರೋಹಿತ್​ ಮೊದಲ ಚಾಯ್ಸ್​​​ ಪಂತ್​ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್​​: ಯಂಗ್​​ ಪ್ಲೇಯರ್​​ಗಾಗಿ ಈ ಸ್ಟಾರ್​ ಆಟಗಾರರಿಗೆ ಕೊಕ್​​ ಕೊಡ್ತಾರಾ ರೋಹಿತ್​​..?

https://newsfirstlive.com/wp-content/uploads/2024/01/Rohit_Rahul_Kohli-1.jpg

Load More