newsfirstkannada.com

ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ​ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!

Share :

Published June 25, 2024 at 9:15am

  ಆಸ್ಟ್ರೇಲಿಯಾವನ್ನ ಬಗ್ಗುಬಡಿದ ರೋಹಿತ್ ಪಡೆ..!

  24 ರನ್​ಗಳಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ

  41 ಎಸೆತಗಳಲ್ಲಿ ಸ್ಪೋಟಕ 92 ರನ್ ಸಿಡಿಸಿ ಶೈನಿಂಗ್​​​..!

ಚಾಂಪಿಯನ್ ವರ್ಸಸ್ ಚಾಂಪಿಯನ್​​ ಬ್ಯಾಟಲ್​​​ನಲ್ಲಿ ಟೀಮ್ ಇಂಡಿಯಾ ಗೆಲುವಿನ ನಗಾರಿ ಬಾರಿಸಿದೆ. ಭಾರತದ ಸ್ಫೋಟಕ ಬ್ಯಾಟಿಂಗ್​​​, ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿಯಾಯ್ತು. ಆ ಮೂಲಕ ಸೆಮಿಫೈನಲ್​​ ರೇಸ್​​ಗೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ.

ಕಮ್​​ಬ್ಯಾಕ್ ಕನಸು ಭಗ್ನ..!
ಸೇಂಟ್​ ಲೂಸಿಯಾ ಮೈದಾನದಲ್ಲಿ ಟಾಸ್​ ಸೋತ ಭಾರತಕ್ಕೆ ಮತ್ತೊಂದು ನಿರಾಸೆ ಕಾದಿತ್ತು. ಟೂರ್ನಿಪೂರ್ತಿ ಫೇಲ್ಯೂರ್ ಕಂಡಿದ್ದ ಕಿಂಗ್​ ಕೊಹ್ಲಿ, ಫೇವರಿಟ್​ ತಂಡದೆದುರು ವಿರಾಟರೂಪ ತೋರಿಸ್ತಾರೆ ಎಂದು ಎಲ್ಲವೂ ಭಾವಿಸಿದ್ರು. ಆದರೆ ವಿರಾಟ್ ಡಕೌಟಾಗಿ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದ್ರು.

ಇದನ್ನೂ ಓದಿ:ಹೊಟ್ಟೆ ತುಂಬಾ ಕೊಟ್ಟಿದ್ದಾರೆ.. ನಟ ದರ್ಶನ್ ಸ್ಥಿತಿ ನೆನೆದು ಬೇಸರಗೊಂಡ ಧರ್ಮ ಕೀರ್ತಿ ರಾಜ್

ರೋಹಿತ್ ಶರ್ಮಾ​ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಆಸಿಸ್​​..!
ಕಿಂಗ್ ಕೊಹ್ಲಿ ಔಟಾಗಿದ್ದೆ ಬಂತು. ಕ್ಯಾಪ್ಟನ್ ರೋಹಿತ್​​​ ಶರ್ಮಾ ರನ್​ ಸುನಾಮಿಯನ್ನೇ ಎಬ್ಬಿಸಿದ್ರು. ವರ್ಲ್ಡ್ ಬೆಸ್ಟ್​ ಬೌಲಿಂಗ್ ಅಟ್ಯಾಕ್​​ಅನ್ನ ಪುಡಿಗಟ್ಟಿದ ಹಿಟ್​ಮ್ಯಾನ್ ಕೇವಲ 19 ಎಸೆತಗಳಲ್ಲೇ ಹಾಫ್​ಸೆಂಚುರಿ ಸಿಡಿಸಿದ್ರು. ಅರ್ಧಶತಕ ಬಳಿಕ ಮತ್ತಷ್ಟು ವೈಲೆಂಟ್​ ಆದ ರೋಹಿತ್​​​​​, 2ನೇ ವಿಕೆಟ್​​​ಗೆ ರಿಷಬ್​ ಪಂತ್​ ಜೊತೆಗೂಡಿ ಸ್ಫೋಟಕ 87 ರನ್​ಗಳ ಜೊತೆಯಾಟವಾಡಿದ್ರು. ಉತ್ತಮ ಸಾಥ್​ ನೀಡಿದ ಪಂತ್ 15 ರನ್​ಗೆ ಔಟಾದ್ರು. 7 ಬೌಂಡ್ರಿ ಹಾಗೂ 8 ಸಿಕ್ಸರ್​ ಚಚ್ಚಿದ ರೋಹಿತ್​ 92 ರನ್ ಗಳಿಸಿದ್ದಾಗ ಸೆಂಚುರಿ ಹೊಸ್ತಿಲಲ್ಲಿ ಎಡವಿದರು.

ಸ್ಲಾಗ್ ಓವರ್​​​ಗಳಲ್ಲಿ ರನ್​​​​ ವೇಗಕ್ಕೆ ಆಸಿಸ್​ ಬ್ರೇಕ್​​..!
15 ಓವರ್​​ಗಳಲ್ಲಿ 162 ರನ್ ಕಲೆಹಾಕಿದ್ದ ಭಾರತಕ್ಕೆ 230 ಪ್ಲಸ್​ ರನ್​ ಕಲೆಹಾಕುವ ಅವಕಾಶವಿತ್ತು. ಆದರೆ ಡಿಸ್ಟ್ರಕ್ಟಿವ್ ಸೂರ್ಯಕುಮಾರ್ ಔಟಾಗ್ತಿದ್ದಂತೆ ರನ್​ ವೇಗಕ್ಕೆ ಬ್ರೇಕ್ ಬಿತ್ತು. ಹಾರ್ದಿಕ್​​​​​​-ದುಬೆ ರನ್ ಗಳಿಸಲು ಪರದಾಡಿದ್ರು. ಕೊನೆ 5 ಓವರ್​ಗಳಲ್ಲಿ ಕೇವಲ 43 ರನ್ ಗಳಿಸಿದ ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 205 ರನ್ ಗಳಿಸ್ತು.

ಇದನ್ನೂ ಓದಿ:ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!

ಬಿಗ್ ಟಾರ್ಗೆಟ್​ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಡೇವಿಡ್ ವಾರ್ನರ್​ ವಿಕೆಟ್ ಕಳೆದುಕೊಳ್ತು. ಆದ್ರೆ ಎರಡನೇ ವಿಕೆಟ್​​​​ ಒಂದಾದ ಟ್ರಾವಿಸ್ ಹೆಡ್​​ ಹಾಗೂ ಕ್ಯಾಪ್ಟನ್​ ಮಿಚೆಲ್ ಮಾರ್ಷ್​ ಸ್ಫೋಟಕ 91 ರನ್​ಗಳ ಜೊತೆಯಾಟವಾಡಿದ್ರು.. ಕಂಟಕವಾಗಿದ್ದ ಮಿಚೆಲ್ ಮಾರ್ಷ್,​ ಅಕ್ಷರ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದ್ರು.

ಕಂಟಕವಾಗಿದ್ದ ಹೆಡ್​​ಗೆ ಬೂಮ್ರಾ ಗೇಟ್​ಪಾಸ್​​​​..!
ಆರಂಭದಿಂದಲೇ ಅಬ್ಬರ ಶುರುವಿಟ್ಟುಕೊಂಡಿದ್ದ ಟ್ರಾವಿಸ್​​ ಹೆಡ್​​​ ಮಗ್ಗುಲ ಮುಳ್ಳಾಗಿ ಕಾಡಿದ್ರು. 43 ಎಸೆತಗಳಲ್ಲಿ ಸಿಡಿಲಬ್ಬರದ 76 ರನ್ ಗಳಿಸಿದ್ದ ಹೆಡ್​​ಗೆ ಕಿಲಾಡಿ ಬೂಮ್ರಾ ಗೇಟ್​ಪಾಸ್​ ನೀಡಿ ಬಿಗ್​ ಬ್ರೇಕ್​ ಥ್ರೂ ತಂದುಕೊಟ್ರು. 18ನೇ ಓವರ್​​​​​ ದಾಳಿಗಿಳಿದ ಅರ್ಷ್​ದೀಪ್​ ಬಿಗ್​ ಟಿಮ್ ಡೇವಿಡ್ ಹಾಗೂ ಮ್ಯಾಥೂವ್​​​​​​​​ ವೇಡ್​ಗೆ ಖೆಡ್ಡಾ ತೋಡಿದ್ರು. ಆ ಮೂಲಕ ಆಸಿಸ್ ಗೆಲುವಿನ ಕನಸಿಗೆ ಕೊಳ್ಳಿ ಇಟ್ರು. ಫೈನಲಿ ಆಸಿಸ್​ ತಂಡವನ್ನ 181 ರನ್​ಗೆ ಕಟ್ಟಿಹಾಕಿದ ಭಾರತ 24 ರನ್​​ಗಳಿಂದ ಗೆದ್ದು ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ.

ಇದನ್ನೂ ಓದಿ:ಬೀದರ್​​ನಲ್ಲಿ ಮಧ್ಯರಾತ್ರಿ ಹರಿದ ನೆತ್ತರು.. ಬಾಲ್ಯದ ಗೆಳೆಯನ ಕತ್ತು ಸೀಳಿ ಬರ್ಬರ ಕೊಲೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಡೆಡ್ಲಿ ಸ್ಪೆಲ್​ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ​ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!

https://newsfirstlive.com/wp-content/uploads/2024/06/ROHIT-15.jpg

Load More