newsfirstkannada.com

ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

Share :

Published June 24, 2024 at 9:53pm

Update June 24, 2024 at 9:54pm

    19 ಎಸೆತದಲ್ಲಿ ಹಾಫ್​ ಸೆಂಚುರಿ ಬಾರಿಸಿದ್ದ ಕ್ಯಾಪ್ಟನ್ ಹಿಟ್​​ಮ್ಯಾನ್

    ಸೆಂಚುರಿ ಹೊಸ್ತಿಲಲ್ಲಿದ್ದ ಹಿಟ್​ಮ್ಯಾನ್ ಎಡವಿ ಬಿದ್ದಿದ್ದು ಎಲ್ಲಿ ಗೊತ್ತಾ?

    ವಿರಾಟ್​ ಕೊಹ್ಲಿ ಔಟ್​ ಆದ್ರು ರೋಹಿತ್​​ರಿಂದ ಭರ್ಜರಿ ಬ್ಯಾಟಿಂಗ್

T20 ವರ್ಲ್ಡ್​​ಕಪ್​ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಸೆಂಚುರಿ ಹೊಸ್ತಿಲಲ್ಲಿ ಎಡವಿ ಬಿದ್ದಿದ್ದಾರೆ. ಇದರಿಂದ ಕ್ಯಾಪ್ಟನ್​ ಭಾರೀ ನಿರಾಸೆಯಿಂದ ಪೆವಿಲಿಯನ್ ಅತ್ತ ಹೆಜ್ಜೆ ಹಾಕಿದರು.

ಇದನ್ನೂ ಓದಿ: ಹೊಡಿಬಡಿ ಬ್ಯಾಟಿಂಗ್ ಮಾಡ್ತಿರೋ ಕ್ಯಾಪ್ಟನ್ ರೋಹಿತ್.. ಹಾಫ್​ಸೆಂಚುರಿ ಸಿಡಿಸಿದ ಹಿಟ್​ ಮ್ಯಾನ್

ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಓಪನರ್ ಆಗಿ ಕ್ರೀಸ್​ ಆಗಮಿಸಿದ್ದ ರೋಹಿತ್ ಶರ್ಮಾ ಅವರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಪ್ರತಿ ಬೌಲರ್​ಗೂ ಆಕಾಶದ ಬಣ್ಣ ತೋರಿಸೋ ರೀತಿಯಲ್ಲಿ ಸಿಕ್ಸರ್​, ಬೌಂಡರಿಗಳನ್ನು ಸಿಡಿಸಿದ್ದಾರೆ. ಕ್ರೀಸ್​ನಲ್ಲಿ ಕ್ಯಾಪ್ಟನ್​ ರೋಹಿತ್ ಇರುವರೆಗೆ ಆಸಿಸ್​ ಬೌಲರ್​ಗಳೆಲ್ಲ ಬೆಚ್ಚಿ ಬಿದ್ದಿದ್ದರು. ಏಕೆಂದರೆ ವಿರುಟ್ ಕೊಹ್ಲಿ ಡಕೌಟ್ ಆದ್ರೂ ಕಳೆಗುಂದದ ಹಿಟ್​ಮ್ಯಾನ್ ಆಸಿಸ್​ ಬೌಲರ್​ಗಳ ಮೇಲೆ ಸವಾರಿ ನಡೆಸಿದ್ದರು.

ಇದನ್ನೂ ಓದಿ: ಜಿಮ್‌ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್​; ಕಾರಣವೇನು?

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಶಾಕ್ ಕೊಟ್ಟ ಕಿಂಗ್ ಕೊಹ್ಲಿ.. ಮತ್ತೊಮ್ಮೆ ಗೋಲ್ಡನ್​ ಡಕೌಟ್

ಬ್ಯಾಟಿಂಗ್​ನಲ್ಲಿ ಆರ್ಭಟ ಮಾಡುತ್ತಿದ್ದ ರೋಹಿತ್ ಶರ್ಮಾ ಕೇವಲ 19 ಎಸೆತದಲ್ಲಿ 4 ಫೋರ್, 5 ಅಮೋಘ ಸಿಕ್ಸರ್ ಸಮೇತ ಅರ್ಧ ಶತಕ ಸಿಡಿಸಿದ್ದರು. ಇದಾದ ಬಳಿಕವೂ ಹೊಡಿಬಡಿ ಬ್ಯಾಟಿಂಗ್​​ ಅನ್ನು ಮುಂದುವರೆಸಿದ್ದ ಕ್ಯಾಪ್ಟನ್​ ಕೇವಲ 41 ಎಸೆತಗಳಲ್ಲಿ 7 ಬೌಂಡರಿ, 8 ಆಕಾಶದೆತ್ತರ ಸಿಕ್ಸರ್ ಸೇರಿ 92 ರನ್​ಗಳನ್ನ ಸಿಡಿಸಿದರು. ಇನ್ನೇನು ಸೆಂಚುರಿಗೆ ಕೇವಲ 8 ರನ್​ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಔಟ್ ಆದರು. ಇದರಿಂದ ಭಾರೀ ಬೇಸರ ಹೊರ ಹಾಕಿದ ರೋಹಿತ್ ಥೋ.. ಶತಕ ಮಿಸ್ ಆಯಿತಲ್ಲ ಎಂದು ಮನಸಲ್ಲಿ ಅಂದುಕೊಳ್ಳುತ್ತಾ ಪೆವಿಲಿಯನ್​ ಕಡೆಗೆ ಹೆಜ್ಜೆ ಹಾಕಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

https://newsfirstlive.com/wp-content/uploads/2024/06/ROHIT_SHARMA_BATTING.jpg

Load More