/newsfirstlive-kannada/media/post_attachments/wp-content/uploads/2025/02/ROHIT-SHARMA-4.jpg)
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಬದ್ಧ ವೈರಿ ಪಾಕಿಸ್ತಾನವನ್ನು ಸೋಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ, 49.4 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 241 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ 42.3 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ವಿರಾಟ್ ಕೊಹ್ಲಿ 111 ಬಾಲ್ಗಳನ್ನು ಎದುರಿಸಿ 100 ರನ್ಗಳಿಸಿದರು.
ಇದನ್ನೂ ಓದಿ: ಪಾಕ್ ವಿರುದ್ಧ ಮತ್ತೆ ‘ವಿರಾಟ’ ಪರ್ವ.. ಕಿಂಗ್ ಕೊಹ್ಲಿ ಆಟಕ್ಕೆ ಬೆಚ್ಚಿ ಬಿದ್ದ ಬದ್ಧವೈರಿ .. ಲಿಂಗ್ ಹಂತದಲ್ಲಿಯೇ ಹೊರಕ್ಕೆ
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕ್ಯಾಪ್ಟನ್ ರೋಹಿತ್.. ಪಂದ್ಯದ ಆರಂಭದಲ್ಲೇ ನಮ್ಮ ಬೌಲಿಂಗ್ ವಿಭಾಗ ಒಳ್ಳೆಯ ಕೆಲಸ ಮಾಡಿತು. ಎದುರಾಳಿ ತಂಡದ ಸ್ಕೋರ್ ಕಟ್ಟಿಹಾಕುವಲ್ಲಿ ಬೌಲರ್ಸ್ ಯಶಸ್ವಿಯಾದರು. ಲೈಟಿಂಗ್ಸ್ನಲ್ಲಿ ಬ್ಯಾಟ್ ಮಾಡೋದು ಚೆನ್ನಾಗಿರುತ್ತದೆ, ಆದರೆ ರನ್ ಗಳಿಕೆಯು ನಿಧನವಾಗಿರುತ್ತದೆ ಅಂತಾ ತಿಳಿದಿತ್ತು. ಅನುಭವದ ಆಧಾರದ ಮೇಲೆ ಬ್ಯಾಟಿಂಗ್ ಲೈನ್ಅಪ್ ಆಗಿತ್ತು.
ಅಕ್ಸರ್, ಕುಲ್ದೀಪ್ ಮತ್ತು ಜಡೇಜಾಗೆ ಕ್ರೆಡಿಟ್ ಸಲ್ಲಬೇಕು. ಅವರು ತಮ್ಮ ಕೆಲಸವನ್ನು ಅದ್ಭುತವಾಗಿ ನಿಭಾಯಿಸಿದರು. ರಿಜ್ವಾನ್ ಮತ್ತು ಶಕೀಲ್ ಉತ್ತಮ ಪಾರ್ಟ್ನರ್ಶಿಪ್ನಲ್ಲಿ ಆಡುತ್ತಿದ್ದರು. ಈ ಪಾರ್ಟ್ನರ್ಶಿಪ್ಗೆ ಆದಷ್ಟು ಬೇಗ ಬ್ರೇಕ್ ಹಾಕೋದು ಗುರಿಯಾಗಿತ್ತು. ಅದರಲ್ಲಿ ಯಶಸ್ವಿಯಾದೇವು.
ಇದನ್ನೂ ಓದಿ: ಗುಮ್ಮಟ ನಗರಿಯಲ್ಲಿ ಶ್ವಾನಗಳ ಪರೇಡ್.. 21ಕ್ಕೂ ಹೆಚ್ಚು ತಳಿಗಳು ಭಾಗಿ
ಸ್ಪಿನ್ನರ್ಗಳು ತಮ್ಮ ಅನುಭವ ಪ್ರದರ್ಶಿಸಿದರು. ಇಲ್ಲಿ ನಾವು ಪಾಂಡ್ಯ ಅವರನ್ನೂ ಮರೆಯುವಂತಿಲ್ಲ. ಹರ್ಷಿತ್ ಮತ್ತು ಶಮಿ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದರು. ನಮ್ಮಲ್ಲಿ ಆರು ಬೌಲರ್ಗಳಿದ್ದಾರೆ. ಎಲ್ಲರಿಗೂ 10 ಓವರ್ ನೀಡೋದು ಸ್ವಲ್ಪ ಕಷ್ಟ. ನಿನ್ನೆಯ ಪಂದ್ಯದಲ್ಲಿ ಅಕ್ಸರ್ ಮತ್ತು ಕುಲ್ದೀಪ್ ಅದ್ಭುತ. ಜಡೇಜಾ ಅವರು ಹಿಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದರು ಎಂದರು.
ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ, ವಿರಾಟ್ ಕೊಹ್ಲಿ ಯಾವುತ್ತೂ ದೇಶಕ್ಕಾಗಿ ಆಡೋದನ್ನು ಇಷ್ಟಪಡುತ್ತಾರೆ. ದೇಶಕ್ಕಾಗಿ, ತಂಡಕ್ಕಾಗಿ ಕೊಹ್ಲಿ ಆಟವು ಡ್ರೆಸ್ಸಿಂಗ್ ರೂಮ್ನಲ್ಲಿ ಕೂತು ನೋಡುವ ನಮಗೆ ಸರ್ಪ್ರೈಸಿಂಗ್ ಆಗಿರುವುದಿಲ್ಲ. ಅದೆಷ್ಟೋ ಬಾರಿ ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಗೆಲುವಿಗೆ ಕಾರಣರಾದರು. ನಾನು ಕೂಡ ಬೌಂಡರಿಗಳನ್ನು ಬಾರಿಸುವಲ್ಲಿ ಯಶಸ್ವಿಯಾದೆ ಎಂದರು.
ಇದನ್ನೂ ಓದಿ: ಶಿವಣ್ಣನಿಗೆ ಸಿಕ್ತು ಗುರು ರಾಯರ ಆಶೀರ್ವಾದ.. ಮಂತ್ರಾಲಯದಲ್ಲಿ ವಿಶೇಷ ಪೂಜೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್