ರೋಹಿತ್​​ ಮಾತಿಗೆ ಮನ್ನಣೆ ಕೊಟ್ಟ ಬಿಸಿಸಿಐ; ಹಾರ್ದಿಕ್​ ಅಲ್ಲ, ಸೂರ್ಯ ಕ್ಯಾಪ್ಟನ್​​!

author-image
Ganesh Nachikethu
Updated On
ಹಾರ್ದಿಕ್ ಪಾಂಡ್ಯಗೆ ಕೊಕ್ ಕೊಟ್ಟು ಸೂರ್ಯಗೆ ಪಟ್ಟ ಕಟ್ಟಿದ್ಯಾಕೆ..? ಅಸಲಿ ಸತ್ಯ ಇದೀಗ ರಿವೀಲ್​!
Advertisment
  • ಭಾರತ ಟಿ20 ಕ್ರಿಕೆಟ್​ ತಂಡಕ್ಕೆ ಹೊಸ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​​
  • ಸೂರ್ಯಕುಮಾರ್​ ಯಾದವ್​ ಬೆನ್ನಿಗೆ ನಿಂತ ಭಾರತದ ಕ್ಯಾಪ್ಟನ್​ ರೋಹಿತ್​..!
  • ಹಾರ್ದಿಕ್​ ಬೇಡ, ಸೂರ್ಯ ಕ್ಯಾಪ್ಟನ್​​ ಆಗಲಿ ಎಂದಿದ್ದೇಕೆ ರೋಹಿತ್​ ಶರ್ಮಾ?

ಜಿಂಬಾಬ್ವೆ ಕ್ರಿಕೆಟ್​ ತಂಡದ ವಿರುದ್ಧ ನಡೆದ ಟಿ20 ಸರಣಿಯಲ್ಲಿ 4-1 ಅಂತರದಿಂದ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಟಿ20 ವಿಶ್ವಕಪ್​ ಚಾಂಪಿಯನ್​ ತಂಡ ಟೀಮ್​ ಇಂಡಿಯಾ ಮತ್ತೊಂದು ಸರಣಿಯನ್ನು ಗೆದ್ದಿದೆ. ಈ ಬೆನ್ನಲ್ಲೇ ಶ್ರೀಲಂಕಾ ವಿರುದ್ಧ ಜೂನ್​​ 27ನೇ ತಾರೀಕಿನಿಂದ 3 ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಇದಕ್ಕಾಗಿ ಬಲಿಷ್ಠ ಟೀಮ್​ ಇಂಡಿಯಾ ಅನೌನ್ಸ್​ ಆಗಬೇಕಿದೆ.

ರಾಹುಲ್​ ದ್ರಾವಿಡ್​​ ನಿರ್ಗಮನದ ನಂತರ ಈಗಾಗಲೇ ಬಿಸಿಸಿಐ ಟೀಮ್​ ಇಂಡಿಯಾಗೆ ಹೊಸ ಮುಖ್ಯ ಕೋಚ್​ ಆಯ್ಕೆ ಮಾಡಿದೆ. ಟೀಮ್​ ಇಂಡಿಯಾದ ಮುಖ್ಯ ಕೋಚ್​​ ಆಗಿ ಗೌತಮ್​ ಗಂಭೀರ್​ ಆಯ್ಕೆ ಆಗಿದ್ದಾರೆ. ವಿಶ್ವಕಪ್​ ಗೆದ್ದ ಕೂಡಲೇ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ದಾರೆ. ಹಾಗಾಗಿ ಟಿ20 ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಹೊಸ ಕ್ಯಾಪ್ಟನ್​ ಬೇಕಿದೆ. ಭಾರತ ಟಿ20 ಕ್ರಿಕೆಟ್​ ತಂಡದ ಕ್ಯಾಪ್ಟನ್​ ರೇಸ್​ನಲ್ಲಿ ಹಾರ್ದಿಕ್​ ಪಾಂಡ್ಯ ಹೆಸರು ಕೇಳಿ ಬಂದಿತ್ತು. ಈಗ ಕ್ಯಾಪ್ಟನ್​​ ಆಗೋ ಕನಸು ಕಂಡಿದ್ದ ಹಾರ್ದಿಕ್​ ಪಾಂಡ್ಯಗೆ ಕೋಚ್​ ಗೌತಮ್​ ಗಂಭೀರ್​ ಬಿಗ್​ ಶಾಕ್​ ಕೊಟ್ಟಿದ್ದಾರೆ.

ಕೋಚ್​​ ಗೌತಮ್​​ ಗಂಭೀರ್​​ ಹಾರ್ದಿಕ್​ ಪಾಂಡ್ಯ ಬದಲಿಗೆ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್​ ಭಾರತ ಟಿ20 ತಂಡದ ಕ್ಯಾಪ್ಟನ್​ ಆಗಲಿ ಎಂದು ಸೆಲೆಕ್ಷನ್​ ಕಮಿಟಿ ಮುಂದೆ ಪ್ರಪೋಸಲ್​ ಇಟ್ಟಿದ್ದಾರಂತೆ. ಯಾವುದೇ ಕಾರಣಕ್ಕೂ ಹಾರ್ದಿಕ್​ ಪಾಂಡ್ಯ ಟಿ20 ಕ್ರಿಕೆಟ್​​ನಲ್ಲಿ ಟೀಮ್​ ಇಂಡಿಯಾ ಕ್ಯಾಪ್ಟನ್ ಆಗೋದು ಬೇಡ. ಇವರ ಬದಲಿಗೆ ಸೂರ್ಯ ಭಾರತ ತಂಡವನ್ನು ಮುನ್ನಡೆಸಲಿ ಎಂದು ಗಂಭೀರ್​ ಖಡಕ್​ ಆಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ವರದಿಯಾಗಿದೆ.​

ರೋಹಿತ್ ಅಭಿಪ್ರಾಯವೇನು..?

ಗೌತಮ್​ ಗಂಭೀರ್​ ಅಷ್ಟೇ ಅಲ್ಲ ಭಾರತ ಟಿ20 ಕ್ರಿಕೆಟ್​​ ತಂಡಕ್ಕೆ ಸೂರ್ಯಕುಮಾರ್​ ಯಾದವ್​ ಕ್ಯಾಪ್ಟನ್​ ಆಗಲಿ ಎಂದು ಟಿ20 ವಿಶ್ವಕಪ್​ ವಿನ್ನಿಂಗ್​ ಕ್ಯಾಪ್ಟನ್​​ ರೋಹಿತ್​ ಶರ್ಮಾ ಕೂಡ ಹೇಳಿದ್ದಾರೆ. ಬಿಸಿಸಿಐ ರೋಹಿತ್​ ಶರ್ಮಾ ಮತ್ತು ಗಂಭೀರ್​​ ಅಭಿಪ್ರಾಯದ ಬಳಿಕವೇ ಸೂರ್ಯಕುಮಾರ್​ ಯಾದವ್​ ಕ್ಯಾಪ್ಟನ್​​ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಸೂರ್ಯಗೆ ಟೀಮ್​ ಇಂಡಿಯಾ ನಾಯಕತ್ವ’- ಹಾರ್ದಿಕ್​​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಗಂಭೀರ್​!​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment