CSKಗೆ ಹಿಗ್ಗಾಮುಗ್ಗಾ ಬಾರಿಸಿದ ರೋಹಿತ್, ಸೂರ್ಯಕುಮಾರ್.. ಧೋನಿಗೆ ಭಾರೀ ಅವಮಾನ!

author-image
Bheemappa
Updated On
Qualifier- 2ರಲ್ಲಿ ಯಾರಿಗೆ ಯಾರು ಚೆಕ್​ಮೇಟ್ ಕೊಡ್ತಾರೆ..? ಫೈನಲ್ ಟಿಕೆಟ್​ಗಾಗಿ ಬಿಗ್ ಫೈಟ್​
Advertisment
  • ರೋಹಿತ್ ಶರ್ಮಾಗೆ ಒಳ್ಳೆಯ ಸಾಥ್​ ಕೊಟ್ಟ ಸೂರ್ಯಕುಮಾರ್
  • ಎಲ್ಲ ಪಂದ್ಯಗಳಲ್ಲಿ ವಿಫಲವಾಗಿದ್ದ ರೋಹಿತ್ ಭರ್ಜರಿ ಬ್ಯಾಟಿಂಗ್
  • ಧೋನಿ ನೇತೃತ್ವದ ಚೆನ್ನೈ ತಂಡವನ್ನ ಹೊಡೆದುರುಳಿಸಿದ ಮುಂಬೈ

ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಸೋಲಿನ ಸುಳಿಗೆ ಸಿಲುಕುತ್ತಾ ಹೋಗುತ್ತಿದ್ರೆ, ಮುಂಬೈ ಇಂಡಿಯನ್ಸ್​ ತಂಡ ಗೆಲುವಿನ ಹಳಿಗೆ ಮೆಲ್ಲಗೆ ಮರಳುತ್ತಿದೆ. ಸಿಎಸ್​​ಕೆ ವಿರುದ್ಧ ಮುಂಬೈ ಇಂಡಿಯನ್ಸ್​ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಎದುರಾಳಿ ಚೆನ್ನೈ ತಂಡ ಮೊದಲ ಬ್ಯಾಟಿಂಗ್ ಮಾಡಿತು. ಪಂದ್ಯದಲ್ಲಿ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಶೇಕ್ ರಶೀದ್ 19 ಹಾಗೂ ರಚಿನ್ ರವೀಂದ್ರ 05 ರನ್​ಗೆ ಬೇಗನೇ ಔಟ್ ಆದರು. ಬಳಿಕ ಬಂದ ಆಯುಷ್ ಮ್ಹಾತ್ರೆ 32 ರನ್​ ಗಳಿಸಿ ತಂಡದ ರನ್​ಗಳನ್ನ ಹಿಗ್ಗಿಸುತ್ತಿದ್ದರು. ಆದ್ರೆ ಇದೇ ವೇಳೆ ದೀಪಕ್ ಚಹರ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿ 35 ಎಸೆತಗಳಲ್ಲಿ 4 ಫೋರ್ 2 ಸಿಕ್ಸರ್​ನಿಂದ ಅರ್ಧಶತಕ ಸಿಡಿಸಿದರು. ಎಂದಿನಂತೆ ಶಿವಂ ದುಬೆ ಬ್ಯಾಟಿಂಗ್​ನಲ್ಲಿ ಆರ್ಭಟಿಸಿದರು. ಈ ಪಂದ್ಯದಲ್ಲಿ ಕೆವಲ 32 ಬಾಲ್ ಎದುರಿಸಿದ ದುಬೆ 2 ಬೌಂಡರಿ 4 ಸಿಕ್ಸರ್​ನಿಂದ 50 ಚಚ್ಚಿದರು. ನಾಯಕ ಧೋನಿ ಈ ಪಂದ್ಯದಲ್ಲೂ ಕೇವಲ 4 ರನ್​ಗೆ ವಿಕೆಟ್​ ಒಪ್ಪಿಸಿದರು. ದುಬೆ, ಜಡೇಜಾ ಅವರ ಅರ್ಧಶತಕದಿಂದ ಚೆನ್ನೈ 20 ಓವರ್​ನಲ್ಲಿ 176 ರನ್​ಗಳ ಗುರಿ ನೀಡಿತ್ತು.

ಇದನ್ನೂ ಓದಿ:RCB ಭರ್ಜರಿ ಗೆಲುವು.. ಐಪಿಎಲ್​ನಲ್ಲಿ ಐತಿಹಾಸಿಕ ರೆಕಾರ್ಡ್ ಬ್ರೇಕ್ ಮಾಡಿದ ಕಿಂಗ್ ಕೊಹ್ಲಿ!

publive-image

ಈ ರನ್​ಗಳ ಹಿಂದೆ ಬಿದ್ದ ಮುಂಬೈ ಇಂಡಿಯನ್ಸ್​ ಒಳ್ಳೆಯ ಆರಂಭ ಪಡೆದುಕೊಂಡಿತು. ತಂಡದ ಮೊತ್ತ 63 ಆಗಿದ್ದಾಗ ರಯಾನ್ ರಿಕೆಲ್ಟನ್ ಔಟ್ ಆದರು. ಪ್ರತಿ ಪಂದ್ಯದಲ್ಲಿ ಸುಲಭವಾಗಿ ಔಟ್​ ಆಗುತ್ತಿದ್ದ ಸ್ಫೋಟಕ ಬ್ಯಾಟರ್​ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಚೆನ್ನೈ ಬೌಲರ್​ಗಳನ್ನ ಚೆಂಡಾಡಿದ ರೋಹಿತ್ ಕೇವಲ 33 ಎಸೆತಗಳಲ್ಲಿ 50 ರನ್​ಗಳನ್ನು ಚಚ್ಚಿದರು. ಇದು ಈ ಸೀಸನ್​ನಲ್ಲಿ ರೋಹಿತ್ ಅವರ ಮೊದಲ ಹಾಫ್​ ಸೆಂಚುರಿ ಆಗಿದೆ.

ರೋಹಿತ್ ಶರ್ಮಾ ಜೊತೆ ಒಳ್ಳೆಯ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಕೂಡ ಚೆನ್ನೈ ಬೌಲರ್​ಗಳಿಗೆ ಬೆಂಡೆತ್ತಿದರು. ಪಂದ್ಯದಲ್ಲಿ ಕೇವಲ 30 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್​ 6 ಬೌಂಡರಿ ಹಾಗೂ 5 ಬಿಗ್ ಸಿಕ್ಸರ್​ಗಳಿಂದ 68 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನು ರೋಹಿತ್ ಕೂಡ ಹಾಫ್​ಸೆಂಚುರಿ ಬಾರಿಸಿ ಬ್ಯಾಟಿಂಗ್ ಮುಂದುವರೆಸಿದರು. 45 ಎಸೆತದಲ್ಲಿ 4 ಬೌಂಡರಿಗಳ ಜೊತೆಗೆ 6 ಅತ್ಯದ್ಭುತವಾದ ಸಿಕ್ಸರ್​ಗಳಿಂದ ರೋಹಿತ್ 76 ರನ್​ಗಳ ಕಾಣಿಕೆ ನೀಡಿದರು. ಇದರಿಂದ ಮುಂಬೈ ಇಂಡಿಯನ್ಸ್​ 9 ವಿಕೆಟ್​ಗಳ ಅಮೋಘವಾದ ಗೆಲುವು ಪಡೆಯಿತು. 15.4 ಓವರ್​ಗಳಲ್ಲಿ ಕೇವಲ ಒಂದು ವಿಕೆಟ್​ನಿಂದ  177 ರನ್​ ಗಳಿಸಿ ಮುಂಬೈ ಗೆಲುವಿನ ಸಂತಸದಲ್ಲಿ ತೇಲಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment