newsfirstkannada.com

ಪಾಕ್​​ ವಿರುದ್ಧ ರೋಚಕ ಪಂದ್ಯ.. ಕೊಹ್ಲಿ ರೋಲ್​ ಬಗ್ಗೆ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​!

Share :

Published June 6, 2024 at 5:23pm

Update June 6, 2024 at 5:24pm

  ಜೂನ್​​ 9ನೇ ತಾರೀಕು ಟೀಮ್​ ಇಂಡಿಯಾ, ಪಾಕ್​ ಮಧ್ಯೆ ರೋಚಕ ಪಂದ್ಯ

  ಪಾಕ್​ ವಿರುದ್ಧ ಗೆಲ್ಲಲು ಭಾರತದ ತಯಾರಿ ಬಗ್ಗೆ ಬಿಚ್ಚಿಟ್ಟ ರೋಹಿತ್​ ಶರ್ಮಾ

  ಟೀಮ್​​ ಇಂಡಿಯಾದಲ್ಲಿ ಕೊಹ್ಲಿ ರೋಲ್ ಬಗ್ಗೆ ರೋಹಿತ್​ ಹೇಳಿದ್ದೇನು ಗೊತ್ತಾ?

ಇತ್ತೀಚೆಗೆ ಐರ್ಲೆಂಡ್​ ವಿರುದ್ಧ ಗೆದ್ದಿರೋ ಟೀಮ್​ ಇಂಡಿಯಾ ಜೂನ್​​ 9ನೇ ತಾರೀಕು ನ್ಯೂಯಾರ್ಕ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕಿಸ್ತಾನ್​​ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ.

ಇನ್ನು, ಪಾಕ್​​ ವಿರುದ್ಧ ಗೆಲ್ಲಲು ಟೀಮ್​ ಇಂಡಿಯಾ ತಯಾರಿ ಬಗ್ಗೆ ಮಾತಾಡಿದ ಕ್ಯಾಪ್ಟನ್​ ರೋಹಿತ್​​ ಶರ್ಮಾ ವಿರಾಟ್​ ಕೊಹ್ಲಿ ರೋಲ್​​ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಟೀಮ್​ ಇಂಡಿಯಾ ಪರ ಕೊಹ್ಲಿ ಓಪನಿಂಗ್​ ಮಾಡುತ್ತಿರೋ ಹಿಂದಿನ ರೀಸನ್​ ಕೂಡ ಹೇಳಿದ್ದಾರೆ.

ವಿರಾಟ್​​ ಕೊಹ್ಲಿ ಅದ್ಭುತ ಕ್ರಿಕೆಟರ್​​. 2024ರ ಸೀಸನ್​ನಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಓಪನರ್​ ಆಗಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಯುಎಸ್​​ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ಡ್ರಾಪ್​​-ಇನ್​ ಪಿಚ್​ ಆಗಿರೋ ಕಾರಣ ಹೊಸಬರಿಗೆ ಆಡಲು ಕಷ್ಟ. ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಆಡಲು ಎಲ್ಲಾ ಫಾರ್ಮೇಟ್​ ಪ್ಲೇಯರ್​ನಿಂದ ಮಾತ್ರ ಸಾಧ್ಯ. ಅದಕ್ಕೆ ಕೊಹ್ಲಿ ಓಪನಿಂಗ್​ ಮಾಡುತ್ತಿದ್ದಾರೆ. ವಿಕೆಟ್​ ಬೀಳದೆ ವೇಗವಾಗಿ ಸ್ಕೋರ್​ ಮಾಡಲು ಕೊಹ್ಲಿ ಬೇಕು. ಯಾವಾಗಲೂ ಫೋರ್​ ಮತ್ತು ಸಿಕ್ಸರ್​ಗಳು ಮಾತ್ರವಲ್ಲ ಸಿಂಗಲ್​ ಡಬಲ್ಸ್​ ಕೂಡ ಅಷ್ಟೇ ಇಂಪಾರ್ಟೆಂಟ್​. ಪಾಕ್​ ವಿರುದ್ಧ ಒತ್ತಡದಲ್ಲೂ ಬ್ಯಾಟ್​ ಬೀಸಲು ಕೊಹ್ಲಿ ಬೇಕು ಎಂದರು ರೋಹಿತ್​​.

ಇದನ್ನೂ ಓದಿ: ಭಾರತ VS ಪಾಕ್​​.. ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​​ ವಿರುದ್ಧ ರೋಚಕ ಪಂದ್ಯ.. ಕೊಹ್ಲಿ ರೋಲ್​ ಬಗ್ಗೆ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​!

https://newsfirstlive.com/wp-content/uploads/2024/06/Kohli_Rohit_PAK.jpg

Load More