/newsfirstlive-kannada/media/post_attachments/wp-content/uploads/2024/06/Rohit-sharma-2-1.jpg)
ಭಾರತೀಯರು ತಾಯಿ ಮತ್ತು ಭೂಮಿ ತಾಯಿಯನ್ನು ಸದಾ ಪೂಜಿಸುತ್ತಾರೆ, ಗೌರವಿಸುತ್ತಾರೆ. ನಿನ್ನೆ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲೂ ಅಂತಹದ್ದೇ ಕ್ಷಣವೊಂದು ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ವಿಶ್ವಕಪ್ ಗೆದ್ದ ಬಳಿಕ ಮೈದಾನದ ಮಣ್ಣು ಸವಿದಿದ್ದಾರೆ. ಆ ಮೂಲಕ ಭೂಮಿ ತಾಯಿಗೆ ವಂದಿಸಿದ್ದಾರೆ.
Rohit Sharma tasting the soil on which he won the World Cup ?
Had this been a film, this is what we would have called "ABSOLUTE CINEMA" moment #RohitSharma#T20WorldCupFinalpic.twitter.com/Shu7OIJtET
— $@M (@SAMTHEBESTEST_)
Rohit Sharma tasting the soil on which he won the World Cup 🏆
Had this been a film, this is what we would have called "ABSOLUTE CINEMA" moment #RohitSharma#T20WorldCupFinalpic.twitter.com/Shu7OIJtET— $@M (@SAMTHEBESTEST_) June 30, 2024
">June 30, 2024
ಇದನ್ನೂ ಓದಿ: ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್ ಕೊಹ್ಲಿ ಭಾವುಕ ಪೋಸ್ಟ್
13 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಈ ಗೆಲುವಿನ ಕ್ಷಣದಲ್ಲಿ ರೋಹಿತ್ ಮೈದಾನದಲ್ಲೇ ಉದ್ದಂಡ ನಮಸ್ಕಾರ ಹಾಕಿದ್ದಾರೆ. ಭೂಮಿಗೆ ಮುಖವಿಟ್ಟು ಅತ್ತಿದ್ದಾರೆ. ಗೆಲುವಿನ ಸಂಭ್ರಮದ ಜೊತೆಗೆ ಕಣ್ಣೀರ ಕಂಬನಿ ಸುರಿಸಿದ್ದಾರೆ.
ಇದನ್ನೂ ಓದಿ: ಗಟ್ಟಿಗಿತ್ತಿ ಸುನಿತಾ ವಿಲಿಯಮ್ಸ್.. ಈಕೆಯ ಛಲ, ಸಾಧನೆ ಮಹಿಳೆಯರಿಗೆ ಸ್ಫೂರ್ತಿ
ಇದಾದ ಬಳಿಕ ಪಂದ್ಯ ಗೆಲ್ಲಲು ಸಾಕ್ಷಿಯಾದ ಮೈದಾನದ ಮಣ್ಣು ಸವಿದಿದ್ದಾರೆ. ಬಳಿಕ ನಮಸ್ಕರಿಸಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ರೋಹಿತ್ ಭೂಮಿ ತಾಯಿಯನ್ನು ಗೌರವಿಸಿದ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ