/newsfirstlive-kannada/media/post_attachments/wp-content/uploads/2025/01/Rohit-14.jpg)
ಭಾರತೀಯ ಕ್ರಿಕೆಟ್ ತಂಡ ಜನವರಿ 3 ರಂದು ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯವನ್ನು ಜಸ್ಪಿತ್ ಬುಮ್ರಾ ನಾಯಕತ್ವದಲ್ಲಿ ಆಡಲು ತಯಾರಿ ನಡೆಸಿದೆ. ಈಗಾಗಲೇ ರೋಹಿತ್ ಶರ್ಮಾ ತಾವು ಕೊನೆಯ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆಯುವುದಾಗಿ ಹೇಳಿಕೊಂಡಿದ್ದು ವರದಿಯಾಗಿದೆ. 37 ವರ್ಷಷದ ರೋಹಿತ್ ಶರ್ಮಾ ಹೆಡ್​ ಕೋಚ್ ಗೌತಮ್ ಗಂಭೀರ್​ ಹಾಗೂ ಆಟಗಾರರ ಆಯ್ಕೆ ಸಮಿತಿಯ ಚೇರ್​​ಮೆನ್ ಅಜಿತ್ ಅಗರ್ಕರ್ ಜೊತೆ ಈಗಾಗಲೇ ಮಾತನಾಡಿ ತಾವು ಪಂದ್ಯದಿಂದ ಹೊರಗೆ ಉಳಿಯುವ ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ತಂಡದ ಕೋಚ್ ಗೌತಮ್ ಗಂಭೀರ. ಮೆಲ್ಬರ್ನ್​ ಟೆಸ್ಟ್​​ನಲ್ಲಿ ಸೋತ ಬಳಿಕ ಆಟಗಾರರ ಮೇಲೆ ದೊಡ್ಡದಾಗಿ ಜಗಳ ಮಾಡಿದ್ದರು ಎಂದು ವರದಿಗಳು ಆಚೆ ಬಂದಿದ್ದವು. ಪ್ರತಿಯೊಬ್ಬರ ಮೇಲೂ ಕ್ರಮ ಕೈಗೊಳ್ಳುತ್ತೇನೆ ಎಂದು ಗುಡುಗಿದ್ದರು ಎಂದು ಕೂಡ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ತಳ್ಳಿ ಹಾಕಿರುವ ಗೌತಮ್ ಗಂಭೀರ್ ಆ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ನನ್ನ ಹಾಗೂ ರೋಹಿತ್ ನಡುವೆ ಎಲ್ಲವೂ ಸರಿಯಾಗಿಯೇ ಇದೆ. ನಾವು ನಾಳೆ ನಡೆಯುವ ಮ್ಯಾಚ್ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/01/GAMBIR.jpg)
ಈ ಎಲ್ಲಾ ಪ್ರತಿಕ್ರಿಯೆಗಳು ಸದ್ಯ ನಾಳೆ ಅಂದ್ರೆ ಜನವರಿ 3ರಂದು ನಡೆಯುವ ಪಂದ್ಯದಲ್ಲಿ ರೋಹಿತ್ ಶರ್ಮಾ ಖಂಡಿತವಾಗಿ ಗೈರಾಗಲಿದ್ದು. ಮೂರನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಅಖಾಡಕ್ಕೆ ಇಳಿಯಲಿದ್ದಾರೆ. ಈಗಾಗಲೇ ಗಂಭೀರ್, ಶರ್ಮಾ ಹಾಗೂ ಬುಮ್ರಾನೆಟ್ ಪ್ರಾಕ್ಟಿಸ್​ ವೇಳೆ ಮಾತಕತೆಗಳನ್ನು ನಡೆಸಿರುವ ಫೋಟೋ ವಿಡಿಯೋ ಕೂಡ ಹರಿದಾಡಿವೆ ನಾಳೆ 4.30ಕ್ಕೆ ಸಿಡ್ನಿ ಅಂಗಳದಲ್ಲಿ ಟಾಸ್​ ನಭಕ್ಕೆ ಚಿಮ್ಮುವ ವೇಳೆ ರೋಹಿತ್ ಜಾಗದಲ್ಲಿ ಜಸ್ಪ್ರಿತ್ ಬುಮ್ರಾಇರೋದು ಪಕ್ಕಾ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us