ಟೀಮ್ ಇಂಡಿಯಾದ ಓಪನಿಂಗ್​ ಬ್ಯಾಟಿಂಗ್​ನಲ್ಲಿ ದೊಡ್ಡ ಬದಲಾಣೆ.. ಕನ್ನಡಿಗ KL ರಾಹುಲ್​​ಗೆ ಬಿಗ್ ಶಾಕ್

author-image
Bheemappa
Updated On
IND vs AUS; ಟೀಮ್ ಇಂಡಿಯಾಕ್ಕೆ ಕೈಕೊಟ್ಟ KL ರಾಹುಲ್.. ಕನ್ನಡಿಗ ಕ್ಲೀನ್ ಬೋಲ್ಡ್
Advertisment
  • ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್​​ ಗವಾಸ್ಕರ್ ಟ್ರೋಫಿ
  • ತಲಾ ಒಂದೊಂದು ಪಂದ್ಯ ಗೆದ್ದು, ಒಂದು ಮ್ಯಾಚ್ ಡ್ರಾ ಆಗಿದೆ
  • ಓಪನರ್ ಬ್ಯಾಟರ್ ಆಗಿ ಜೈಸ್ವಾಲ್ ಜೊತೆ ಯಾರು ಆಡುತ್ತಾರೆ?

ಟೀಮ್​ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ 4ನೇ ಟೆಸ್ಟ್​ ಪಂದ್ಯ ಮೇಲ್ಬೋರ್ನ್‌ ಸ್ಟೇಡಿಯಂನಲ್ಲಿ ನಾಳೆ ನಡೆಯಲಿದೆ. ತಲಾ ಒಂದೊಂದು ಪಂದ್ಯ ಗೆದ್ದಿರುವ ತಂಡಗಳು 3ನೇ ಪಂದ್ಯವನ್ನು ಡ್ರಾ ಮಾಡಿಕೊಂಡಿವೆ. 4ನೇ ಟೆಸ್ಟ್ ಮ್ಯಾಚ್ ಗೆಲುವು ಭಾರತ- ಆಸಿಸ್​ಗೆ ಮುಖ್ಯವಾಗಿದೆ. ಇದರ ಜೊತೆ ಟೀಮ್ ಇಂಡಿಯಾದಲ್ಲಿ ಓಪನರ್ ಬ್ಯಾಟರ್​ ಬದಲಾವಣೆ ಮಾಡಲಾಗಿದೆ.

ಕಳೆದ ಮೂರು ಪಂದ್ಯಗಳಿಂದ ಟೀಮ್ ಇಂಡಿಯಾದಲ್ಲಿ ಓಪನರ್ ಆಗಿ ಯಶಸ್ವಿ ಜೈಸ್ವಾಲ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಕ್ರೀಸ್​ಗೆ ಬರುತ್ತಿದ್ದರು. ಆದರೆ 4ನೇ ಟೆಸ್ಟ್​ ಮ್ಯಾಚ್​ನಲ್ಲಿ ಈ ಓಪನಿಂಗ್ ಜೋಡಿಯಲ್ಲಿ ಬದಲಾವಣೆ ಮಾಡಲಾಗಿದೆ. ಕೆ.ಎಲ್ ರಾಹುಲ್ ಬದಲಿಗೆ ಓಪನರ್ ಆಗಿ ಎಂದಿನಂತೆ ಕ್ಯಾಪ್ಟನ್ ರೋಹಿತ್ ಶರ್ಮಾ ಆಗಮಿಸಲಿದ್ದಾರೆ. ಇದರಿಂದ ಕೆ.ಎಲ್ ರಾಹುಲ್ ಯಾವ ಸ್ಲಾಟ್​ನಲ್ಲಿ ಆಡಲಿದ್ದಾರೆ ಎನ್ನುವುದು ಅಭಿಮಾನಿಗಳ ಪ್ರಶ್ನೆ ಆಗಿದೆ.

ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಕ್ರಿಕೆಟ್​ ಯುಗಾಂತ್ಯಕ್ಕೆ ಮತ್ತೊಂದು ಸೂಚನೆ..

publive-image

ಕೆ.ಎಲ್ ರಾಹುಲ್ ಅವರು ಓಪನಿಂಗ್ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ರೋಹಿತ್ ಶರ್ಮಾ ಕಳೆದ ಎರಡು ಪಂದ್ಯಗಳಲ್ಲಿ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ವಿಫಲವಾದ ಕಾರಣ ಮತ್ತೆ ಓಪನರ್ ಆಗಿ ಬ್ಯಾಟ್ ಬೀಸಲಿದ್ದಾರೆ. ಈ ಇಬ್ಬರು ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವ ಲೈನ್ ಕ್ಲೀಯರ್ ಆಗಿದೆ. ಆದರೆ ಶುಭ್​ಮನ್​ ಗಿಲ್ ಯಾವ ಹಂತದಲ್ಲಿ ಕ್ರೀಸ್​​​ಗೆ ಬರುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಹೇಳಲಾಗಿದೆ.

ಬಾರ್ಡರ್​​ ಗವಾಸ್ಕರ್ ಟ್ರೋಫಿಯ 5 ಪಂದ್ಯಗಳಲ್ಲಿ ಈಗಾಗಲೇ ಭಾರತ ಹಾಗೂ ಆಸಿಸ್​ ತಲಾ ಒದೊಂದು ಗೆದ್ದುಕೊಂಡಿದ್ದು ಒಂದು ಪಂದ್ಯ ಡ್ರಾ ಆಗಿದೆ. ಹೀಗಾಗಿ ನಾಳೆ ಮೆಲ್ಬೋರ್ನ್​ನಲ್ಲಿ ನಡೆಯುವ 4 ನೇ ಪಂದ್ಯ ಎರಡು ತಂಡಗಳಿಗೆ ನಿರ್ಣಾಯಕವಾಗಿದೆ. ಏಕೆಂದರೆ ಈ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಭಾರತ ಗೆದ್ದರೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ದಾರಿ ಸುಲಭವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment