ಕ್ಯಾಪ್ಟನ್ ರೋಹಿತ್ ಔಟ್.. ವಿರಾಟ್ ಕೊಹ್ಲಿ ಇನ್; ಟೀಮ್ ಇಂಡಿಯಾದಲ್ಲಿ ಬದಲಾವಣೆ?

author-image
Bheemappa
Updated On
ಟೀಮ್​ ಇಂಡಿಯಾದ ಈ ಆಟಗಾರ ಸೆಂಚುರಿ ಸಿಡಿಸಿದರೆ ಗೆಲುವು ಪಕ್ಕಾ.. ಯಾರು ಆ ಲಕ್ಕಿ ಪ್ಲೇಯರ್​..?
Advertisment
  • ತಂಡದಿಂದ ನಾಯಕ ರೋಹಿತ್ ಶರ್ಮಾರನ್ನ ಹೊರಗಿಡುವುದು ಏಕೆ?
  • ಸದ್ಯ ಐಪಿಎಲ್-18 ಸೀಸನ್​ನಲ್ಲಿ ದಿಗ್ಗಜ ಬ್ಯಾಟ್ಸ್​ಮನ್ಸ್ ಫುಲ್ ಬ್ಯುಸಿ
  • ವಿರಾಟ್ ಕೊಹ್ಲಿ ಈ ಪ್ರವಾಸದಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸ್ತಾರಾ?

ಐಪಿಎಲ್ ಸೀಸನ್​ 18ರ ಟೂರ್ನಿ ಮುಗಿದ ಮೇಲೆ ಟೀಮ್ ಇಂಡಿಯಾ, ಟೆಸ್ಟ್ ಸರಣಿಗಾಗಿ ವಿದೇಶ ಪ್ರವಾಸ ಕೈಗೊಳ್ಳಲಿದೆ. ಭಾರೀ ಮಹತ್ವ ಪಡೆದುಕೊಂಡಿರುವ ಈ ಟೂರ್ನಿಯನ್ನು ಟೀಮ್ ಇಂಡಿಯಾ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ನ್ಯೂಜಿಲೆಂಡ್ ಹಾಗೂ ಬಾರ್ಡರ್​ ಗವಾಸ್ಕಾರ್ ಟ್ರೋಫಿಯಲ್ಲಿ ಸೋತಿರುವ ಕಾರಣ ಇಂಗ್ಲೆಂಡ್​ ಪ್ರವಾಸ ಭಾರತಕ್ಕೆ ಅತಿ ಮುಖ್ಯವಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅಲಭ್ಯರಾಗುತ್ತಾರೆ. ಈ ಕುರಿತು ಸ್ವತಹ ರೋಹಿತ್ ಶರ್ಮಾ ಅವರೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್ ಟ್ರೋಫಿಯ 3 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಹಿಟ್​ಮ್ಯಾನ್​ ಕೇವಲ 31 ರನ್ ಮಾತ್ರ ಗಳಿಸಿದ್ದರು. ಅಲ್ಲದೇ ಸಿಡ್ನಿ ಟೆಸ್ಟ್​ನಿಂದಲೂ ತಾವೇ ಹಿಂದಿ ಸರಿದ್ದರು. ಈ ಕಾರಣದಿಂದ ರೋಹಿತ್, ಇಂಗ್ಲೆಂಡ್​ ಪ್ರವಾಸದಿಂದ ಹೊರಗುಳಿಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 9 ಟೀಮ್​ಗಳಿಗೆ ವಿರಾಟ್ ಬ್ಯಾಟಿಂಗ್​ ಥ್ರೆಟ್.. 500, 600, 700​ ಪ್ರತಿ ಸೀಸನ್​ನಲ್ಲಿ ಕೊಹ್ಲಿ ರನ್ ದಾಹ ಹೇಗಿದೆ?

publive-image

ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟ್ ಬೀಸಲಿದ್ದು ಇವರ ಪಾತ್ರ ಅತ್ಯಂತ ಮುಖ್ಯವಾಗಲಿದೆ. ಕಳಪೆ ಬ್ಯಾಟಿಂಗ್ ಪರ್ಫಾಮೆನ್ಸ್​ನಿಂದ ರೋಹಿತ್ ಶರ್ಮಾ ತಂಡದಿಂದ ಹೊರಗಿದ್ರೆ, ತಂಡದ ನಾಯಕತ್ವ ಯಾರ ಹೆಗಲೇರಲಿದೆ ಎಂದು ಇನ್ನು ಅಂತಿಮ ಆಗಿಲ್ಲ. ಭಾರತ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್ ಮ್ಯಾಚ್ ಜೂನ್ 20 ರಂದು ಹೆಡಿಂಗ್ಲಿ ನಗರದಲ್ಲಿ ನಡೆಯಲಿದೆ.

ಟೀಮ್ ಇಂಡಿಯಾ ಒಟ್ಟು 45 ದಿನಗಳ ಕಾಲ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ. 2007ರ ನಂತರ ಆಂಗ್ಲರ ವಿರುದ್ಧ ಭಾರತ ಸರಣಿ ಗೆದ್ದಿಲ್ಲ. ಹೀಗಾಗಿ ಈ ಸಲದ ಪ್ರವಾಸದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಂಡರೇ ಭಾರತ ಇತಿಹಾಸ ನಿರ್ಮಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment