/newsfirstlive-kannada/media/post_attachments/wp-content/uploads/2025/02/ROHIT.jpg)
ಇಂದು ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ತಂಡಗಳು ಮುಖಾಮುಖಿ ಆಗಿವೆ.
ಇನ್ನು, ಈ ಟೂರ್ನಿ ಮಧ್ಯೆಯೇ ಭಾರತ ಕ್ರಿಕೆಟ್​ ತಂಡದಲ್ಲಿ ಭಾರೀ ಬೆಳವಣಿಗೆ ನಡೆಯುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿತ್ತು. 20 ವರ್ಷಗಳ ನಂತರ ತವರಿನಲ್ಲಿ ಟೀಮ್​ ಇಂಡಿಯಾ ನ್ಯೂಜಿಲೆಂಡ್​ ವಿರುದ್ಧ 3-0 ಅಂತರದಿಂದ ಟೆಸ್ಟ್​ ಸೀರೀಸ್​ನಲ್ಲಿ ವೈಟ್​ ವಾಶ್​ ಆಗಿತ್ತು. ಈ ಬೆನ್ನಲ್ಲೇ ಟೀಮ್​ ಇಂಡಿಯಾ 3-1 ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿ ಸೋತಿತ್ತು. ಈ ಬೆನ್ನಲ್ಲೀಗ ರೋಹಿತ್​​ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.
ಭಾರತ ಜೂನ್ ತಿಂಗಳಲ್ಲಿ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಜೊತೆಗೆ ಟೀಮ್ ಇಂಡಿಯಾಗೆ ಮುಂದಿನ ಪ್ರಮುಖ ಏಕದಿನ ಟೂರ್ನಿ 2027ರ ವಿಶ್ವಕಪ್. ಚಾಂಪಿಯನ್ಸ್ ಟ್ರೋಫಿ 2025ರ ಭಾರತದ ಮುಂದಿನ ಟಾರ್ಗೆಟ್​​​ 2027ರ ವಿಶ್ವಕಪ್​​ ಆಗಿದೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಲಿದೆ.
ಫೈನಲ್ಸ್​ ಸೋತರೆ ರೋಹಿತ್​ಗೆ ಕೊಕ್​​
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಸೋತ್ರೂ ಗೆದ್ರೂ ಕ್ಯಾಪ್ಟನ್ಸಿಯಿಂದ ರೋಹಿತ್​ ಶರ್ಮಾಗೆ ಕೊಕ್​ ನೀಡಬಹುದು. ಹಾಗೆಯೇ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ವೃತ್ತಿಜೀವನ ಕೊನೆ ಆಗಬಹುದು. ನಾಯಕತ್ವದಿಂದ ಕೆಳಗಿಳಿದು ಆಟಗಾರನಾಗಿ ಮುಂದುವರೆಯಬಹುದು.
ರೋಹಿತ್ ಶರ್ಮಾ ನಂತರ ಭಾರತ ಏಕದಿನ ತಂಡದ ನಾಯಕ ಯಾರು? ಅನ್ನೋ ಚರ್ಚೆ ಇದೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಟೀಮ್​ ಇಂಡಿಯಾದ ಇಬ್ಬರು ಹೆಸರು ರೇಸ್​ನಲ್ಲಿದೆ. ಉಪ ನಾಯಕ ಶುಭ್ಮನ್​​ ಗಿಲ್​ ಅಥವಾ ಹಾರ್ದಿಕ್​ ಪಾಂಡ್ಯ ಕ್ಯಾಪ್ಟನ್​ ಆಗಬಹುದು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us