/newsfirstlive-kannada/media/post_attachments/wp-content/uploads/2024/10/ABD.jpg)
ಐಪಿಎಲ್ ಹರಾಜಿಗೂ ಮುನ್ನವೇ ಅಭಿಮಾನಿಗಳ ಲೆಕ್ಕಾಚಾರ ಜೋರಾಗಿದೆ. ಅದರಲ್ಲೂ ಆರ್ಸಿಬಿ ಅಭಿಮಾನಿಗಳು ರೋಹಿತ್ ಶರ್ಮಾ ಅವರು ಬೆಂಗಳೂರು ತಂಡವನ್ನು ಸೇರಿಕೊಳ್ಳಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ರೋಹಿತ್ ಆರ್ಸಿಬಿಗೆ ಬರ್ತಾರೆ ಎಂಬ ವದಂತಿ ಕೂಡ ಇದೆ. ಈ ನಡುವೆ ಆರ್ಸಿಬಿ ದಂತಕತೆ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲ್ಲಿಯರ್ಸ್, ರೋಹಿತ್ ಆರ್ಸಿಬಿಗೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ನ ಸ್ಟಾರ್ ಆಟಗಾರನ ಮೇಲೆ ಕಣ್ಣಿಟ್ಟ ಆರ್ಸಿಬಿ; ಇವರು ಬಂದರೆ ಒಂದೇ ಕಲ್ಲಲ್ಲಿ 2 ಹಕ್ಕಿ..!
ತಮ್ಮ ಯೂಟ್ಯೂಬ್ನಲ್ಲಿ ರೋಹಿತ್ ಬಗ್ಗೆ ಉತ್ತರಿಸಿರುವ ಅವರು.. ರೋಹಿತ್ ಶರ್ಮಾ ಬೆಂಗಳೂರಿಗೆ ಬಂದರೆ, ಐಪಿಎಲ್ ಇತಿಹಾಸದಲ್ಲೇ ದೊಡ್ಡ ಬೆಳವಣಿಗೆ ಆಗಲಿದೆ. ಹಾರ್ದಿಕ್ ಪಾಂಡ್ಯ ಗುಜರಾತ್ನಿಂದ ಮತ್ತೆ ಮುಂಬೈಗೆ ಬಂದಿದ್ದರೋ, ಅದಕ್ಕಿಂತ ದೊಡ್ಡ ಬೆಳವಣಿಗೆ ಆಗಲಿದೆ.
ರೋಹಿತ್ ಶರ್ಮಾ ಕುರಿತ ಈ ಕಮೆಂಟ್ಗೆ ನಾನು ಬಹುತೇಕ ನಕ್ಕಿದ್ದೇನೆ. ಅವರು ಮುಂಬೈ ಇಂಡಿಯನ್ಸ್ನಿಂದ ಆರ್ಸಿಬಿಗೆ ಹೋದರೆ ಕತೆಯೇ ಬೇರೆ. WoW! ಆ ಹೆಡ್ಲೈನ್ ಕಲ್ಪಿಸಿಕೊಳ್ಳೋದಕ್ಕೂ ಆಗಲ್ಲ. ರೋಹಿತ್ ಅಂಥ ನಿರ್ಧಾರ ತೆಗೆದುಕೊಳ್ತಾರೆ ಎಂದು ನನಗೆ ಕಾಣಲ್ಲ. 0.1 ಪರ್ಸೆಂಟ್ ಅಷ್ಟೇ ಚಾನ್ಸ್ ಇದೆ ಎಂದಿದ್ದಾರೆ.
ಇದನ್ನೂ ಓದಿ:IPLಗೂ ಮುನ್ನವೇ ಮತ್ತೊಂದು ವಾರ್; ನಮ್ಮ ಆರ್ಸಿಬಿಯೇ ಹೆಚ್ಚು ಸ್ಟ್ರಾಂಗ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್