ಪಾಂಡ್ಯ ವಿರುದ್ಧ ಘೋಷಣೆ ಕೂಗದಂತೆ ರೋಹಿತ್ ಮನವಿ; ಮೈದಾನದಲ್ಲೇ ದಿಲ್ ಗೆದ್ದ ಹಿಟ್​​ಮ್ಯಾನ್ -VIDEO

author-image
Ganesh
Updated On
ಪಾಂಡ್ಯ ವಿರುದ್ಧ ಘೋಷಣೆ ಕೂಗದಂತೆ ರೋಹಿತ್ ಮನವಿ; ಮೈದಾನದಲ್ಲೇ ದಿಲ್ ಗೆದ್ದ ಹಿಟ್​​ಮ್ಯಾನ್ -VIDEO
Advertisment
  • ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ವಿರುದ್ಧ ಪ್ರೇಕ್ಷಕರು ಕೂಗು
  • ಬೌಂಡರಿ ಲೈನ್​​ನಲ್ಲಿದ್ದ ರೋಹಿತ್ ಶರ್ಮಾ ಏನ್ ಹೇಳಿದರು ಗೊತ್ತಾ?
  • ಈ ಬಾರಿ ಮುಂಬೈ ಇಂಡಿಯನ್ಸ್​ಗೆ ಸತತ ಮೂರನೇ ಸೋಲು

ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್ ಪಾಂಡ್ಯ 2024ರ ಐಪಿಎಲ್​​ನಲ್ಲಿ ಅಭಿಮಾನಿಗಳಿಂದ ದ್ವೇಷ ಮತ್ತು ಆಡಿರುವ ಟೂರ್ನಿಗಳಲ್ಲಿ ಬರೀ ಸೋಲನ್ನು ಮಾತ್ರ ಎದುರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಸತತ ಮೂರನೇ ಪಂದ್ಯವನ್ನು ಸೋತಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈಗೆ ಮೂರನೇ ಸೋಲು ನೀಡಿತು.

ಕ್ಯಾಪ್ಟನ್ ರೋಹಿತ್ ಶರ್ಮಾ ನಿನ್ನೆಯ ಪಂದ್ಯದಲ್ಲಿ ಗೋಲ್ಡನ್ ಡಕ್​​ ಆದರು. ಬ್ಯಾಟಿಂಗ್​ನಿಂದ ಅಭಿಮಾನಿಗಳ ಮನಗೆಲ್ಲದಿದ್ದರೂ ಫೀಲ್ಡಿಂಗ್​ ವೇಳೆ ತಮ್ಮ ಒಂದು ಹಾವಭಾವದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹೌದು, ಈ ಪಂದ್ಯದಲ್ಲೂ ಕುತೂಹಲಕಾರಿ ದೃಶ್ಯ ಕಂಡುಬಂದಿದೆ. ಪಂದ್ಯದ ಸಮಯದಲ್ಲಿ, ರೋಹಿತ್ ಶರ್ಮಾ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸಿದರು.

ಇದನ್ನೂ ಓದಿ: ಬೆಂಗಳೂರಲ್ಲಿ IPL ಪಂದ್ಯ; ಪ್ಲೇಯಿಂಗ್-11ನಿಂದ ಆರ್​ಸಿಬಿಯ ಈ ಮೂವರು ಆಟಗಾರರಿಗೆ ಕೊಕ್?

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡ್ತಿರುವಾಗ ಪ್ರೇಕ್ಷಕರು ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಮಯದಲ್ಲಿ ರೋಹಿತ್ ಶರ್ಮಾ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು. ಹಾರ್ದಿಕ್ ವಿರುದ್ಧ ಘೋಷಣೆ ಕೂಗುತ್ತಿರುವುದನ್ನು ನೋಡಿದ ಶರ್ಮಾ, ಹಾಗೆ ಕೂಗದಂತೆ ಕೈ ಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಅವರ ಈ ಗೆಸ್ಚರ್ ಎಲ್ಲರ ಮನ ಗೆದ್ದಿದೆ.

ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿತ್ತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 125/9 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ 15.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment