/newsfirstlive-kannada/media/post_attachments/wp-content/uploads/2024/11/TEAM-INDIA-3.jpg)
ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎರಡು ಟೆಸ್ಟ್ ಸೋತು ಹಿನ್ನಡೆ ಅನುಭವಿಸಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನ ನಿರಾಸೆ ಮೂಡಿಸಿದೆ. ಹೀಗಾಗಿ ಇಬ್ಬರನ್ನೂ ತಂಡದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಕಳಪೆ ಫಾರ್ಮ್ ನಡುವೆ ಈ ಆಟಗಾರರು ಆಸ್ಟ್ರೇಲಿಯಾದಿಂದ ವಾಪಸ್ ಬೆನ್ನಲ್ಲೇ ರಜೆ ಮೇಲೆ ತೆರಳಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದಿಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಸರಣಿಯಿಂದ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಕೆಲಸದ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಮೂವರು ಆಟಗಾರರಿಗೆ ಇಂಗ್ಲೆಂಡ್ ಸರಣಿಯಿಂದ ವಿರಾಮ ನೀಡುವ ಆಲೋಚನೆಯಲ್ಲಿ ಬಿಸಿಸಿಐ ಇದೆ. ಸಿಡ್ನಿ ಟೆಸ್ಟ್ ಬಳಿಕ ಮೂವರು ರೆಸ್ಟ್ಗೆ ಹೋಗಲಿದ್ದಾರೆ. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ:ಮಾವಿನ ಎಲೆಯಲ್ಲಿ ಆರೋಗ್ಯದ ರಹಸ್ಯ! ಈ ವಿಚಾರಗಳು ಗೊತ್ತಾದ್ರೆ ನೀವು ಮಿಸ್ ಮಾಡಲ್ಲ..!
ಜನವರಿಯಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಬರಲಿದೆ. ಉಭಯ ತಂಡಗಳ ನಡುವೆ 5 ಟಿ20 ಪಂದ್ಯ ಹಾಗೂ ಮೂರು ಏಕದಿನ ಸರಣಿ ನಡೆಯಲಿದೆ. ವಿರಾಟ್ ಮತ್ತು ರೋಹಿತ್ ಈಗಾಗಲೇ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಬುಮ್ರಾ ಮೂರು ಸ್ವರೂಪದ ಕ್ರಿಕೆಟ್ಗಳಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಕಳೆದ 3 ತಿಂಗಳಿಂದ ನಿರಂತರವಾಗಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಂತಹ ಟೂರ್ನಮೆಂಟ್‌ಗೆ ಫಿಟ್ ಆಗಿರಲು ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಕೊನೆಯ ಸರಣಿಯಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಏಕದಿನ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:BBK11; ವೀಲ್ಚೇರ್ ಮೇಲಿದ್ದ ತಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ.. ಅಕ್ಕನನ್ನೇ ಮರೆತನಾ ಸಹೋದರ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್