ಕೊಹ್ಲಿ, ರೋಹಿತ್​​, ಜಡೇಜಾ ಸ್ಥಾನಕ್ಕೆ ಕಠಿಣ ಸ್ಪರ್ಧೆ; ರೇಸ್​​ನಲ್ಲಿ ಯಾರೆಲ್ಲ ಇದ್ದಾರೆ?

author-image
Ganesh
Updated On
BCCI ಮೇಲೆ ಅಭಿಮಾನಿಗಳು ಕೋಪ.. ಕೊಹ್ಲಿ, ರೋಹಿತ್​ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ..?
Advertisment
  • ಆಟಗಾರರಿಗೆ ಐಪಿಎಲ್ ತುಂಬಾ ಮುಖ್ಯ ಯಾಕೆ?
  • ಕೋಚ್, ಸೆಲೆಕ್ಟರ್ಸ್​ ಮುಂದಿರೋ ಸವಾಲು ಏನು?
  • 11 ತಿಂಗಳು, 23 T20 ಪಂದ್ಯಗಳನ್ನ ಆಡಲಿರುವ ಭಾರತ

2026ರ ಟಿ-20 ವಿಶ್ವಕಪ್​​ಗೆ ಹನ್ನೊಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಗೆ, ಇದೇ ಐಪಿಎಲ್ ಸೀಸನ್ 18 ಬೆಸ್ಟ್ ಪ್ರಿಪರೇಶನ್. ಈಗಾಗಲೇ T20 ಫಾರ್ಮೆಟ್​​ಗೆ ನಿವೃತ್ತಿ ಘೋಷಿಸಿರುವ ರೋಹಿತ್, ಕೊಹ್ಲಿ, ಜಡೇಜಾ ರಿಪ್ಲೇಸ್​ಮೆಂಟ್​​ ಹುಡುಕೋಕೆ ಒಳ್ಳೆಯ ಅವಕಾಶ.

ಚಾಂಪಿಯನ್ಸ್ ಟ್ರೋಫಿ ಗೆದ್ರೂ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ಸೆಲೆಕ್ಟರ್ಸ್​ ಕೆಲಸ ಮುಗಿಲಿಲ್ಲ. ಕೋಚ್ ಗಂಭೀರ್ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್​ಕರ್ ಮುಂದೆ, ದೊಡ್ಡ ಸವಾಲಿದೆ. ಅದೇ 2026 ಫೆಬ್ರವರಿ-ಮಾರ್ಚ್​ನಲ್ಲಿ ನಡೆಯಲಿರುವ T20 ವಿಶ್ವಕಪ್ ಗೆಲ್ಲೋದು.

ಟಿ20 ಫಾರ್ಮೆಟ್​​ನಿಂದ ನಿವೃತ್ತಿಯಾಗಿರುವ ಸೂಪರ್​​ಸ್ಟಾರ್​ ಆಟಗಾರರ ರಿಪ್ಲೇಸ್​ಮೆಂಟ್ ಹುಡುಕೋದೆ ಕೋಚ್ ಮತ್ತು ಚೀಫ್ ಸೆಲೆಕ್ಟರ್​​​ ಮುಂದಿರುವ ಬಿಗ್ ಟಾಸ್ಕ್​​​. ಐಪಿಎಲ್ ಸೀಸನ್-18ರಲ್ಲಿ ಗಂಭೀರ್ ಮತ್ತು ಅಗರ್​ಕರ್ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮುಂದಾಗಿದ್ದಾರೆ.

ಇದನ್ನೂ ಓದಿ: Sunita Williams ಮಾರ್ಚ್​ 19 ರಂದು ಬಾಹ್ಯಾಕಾಶದಿಂದ ನಿರ್ಗಮನ; ಭೂಮಿಗೆ ಬರೋದು ಯಾವಾಗ?

publive-image

ಬದಲಿ ಆಟಗಾರ ಯಾರು?

T20 ಫಾರ್ಮೆಟ್​ನಲ್ಲಿ 2 ಶತಕ ಮತ್ತು 2 ಅರ್ಧಶತಕಗಳನ್ನ ಸಿಡಿಸಿರುವ ಅಭಿಷೇಕ್ ಶರ್ಮಾ, ರೋಹಿತ್​ಗೆ ಬೆಸ್ಟ್ ರೀಪ್ಲೇಸ್​ಮೆಂಟ್. ರೋಹಿತ್​ರಂತೆ ಟೆಂಪ್ಲೆಟ್, ಅಗ್ರೆಸಿವ್ ಬ್ಯಾಟಿಂಗ್ ಮತ್ತು ಅತ್ಯಾದ್ಭುತ ಸ್ಟ್ರೈಕ್​ರೇಟ್ ಹೊಂದಿರುವ ಅಭಿಷೇಕ್, ಮುಂಬರುವ T20 ವಿಶ್ವಕಪ್​ನಲ್ಲಿ ಆರಂಭಿಕನಾಲು ಬೆಸ್ಟ್ ಚಾಯ್ಸ್. ಮತ್ತೊಂದೆಡೆ ಕೋಚ್ ಮತ್ತು ಸೆಲೆಕ್ಟರ್ಸ್ ಮುಂಬರುವ ಐಪಿಎಲ್​ನಲ್ಲಿ ಯಶಸ್ವಿ ಜೈಸ್ವಾಲ್ ಮೇಲೂ ಕಣ್ಣಿಡಲು ಮುಂದಾಗಿದ್ದಾರೆ.

ಕೊಹ್ಲಿ ಸ್ಥಾನ ತುಂಬೋದ್ಯಾರು?

ಕಿಂಗ್ ಕೊಹ್ಲಿಯನ್ನ ರೀಪ್ಲೇಸ್ ಮಾಡೋದು ತುಂಬಾ ಕಷ್ಟ. ಕೊಹ್ಲಿ T20 ಫಾರ್ಮೆಟ್​​ಗೆ ಗುಡ್​ಬೈ ಹೇಳಿದಾಗಿನಿಂದ ಸೂರ್ಯಕುಮಾರ್ ಯಾದವ್, ನಂಬರ್ 3 ಸ್ಲಾಟ್​​ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. SKY ಔಟ್​ ಆಫ್​ ಫಾರ್ಮ್​​ನಿಲ್ಲಿರೋದು ದೊಡ್ಡ ಚಿಂತೆಯಾಗಿದೆ. ಹೀಗಿರುವಾಗ ಮೂರನೇ ಸ್ಲಾಟ್​ಗೆ ತಿಲಕ್ ವರ್ಮಾ, ಗಿಲ್, ಪಂತ್, ಸಂಜು ಸ್ಯಾಮ್ಸನ್​​ ಸ್ಟ್ರಾಂಗ್ ಕಂಟೆಂಡರ್ಸ್ ಆಗಲಿದ್ದಾರೆ.

T20 ವಿಶ್ವಕಪ್​ಗೆ ವಿಕೆಟ್ ಕೀಪರ್ಸ್ ಯಾಱರು?

ಪಂತ್ T20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್. ನಂಬರ್ 5, ನಂಬರ್ 6 ಮತ್ತು ನಂಬರ್ 7 ಸ್ಥಾನಗಳಿಗೆ, ಈ ಐಪಿಎಲ್​ನಲ್ಲಿ ಆಡಿಷನ್ ನಡೆಯಲಿದೆ. ಪಂತ್, ಜುರೆಲ್, ಜಿತೇಶ್ ಶರ್ಮಾ ಈ ಸ್ಲಾಟ್ಸ್​​​ಗೆ ಹೇಳಿ ಮಾಡಿಸಿದ ವಿಕೆಟ್ ಕೀಪರ್​​​. ಸಂಜು ಸ್ಯಾಮ್ಸನ್ ಟಫ್ ಕಾಂಪಿಟೇಷನ್ ಎದುರಿಸಲಿದ್ದಾರೆ.

ಇದನ್ನೂ ಓದಿ: ಈ ಸಲ ಆರ್​ಸಿಬಿ ಹಣೆಬರಹ ಬದಲಾಯಿಸಲಿದ್ದಾರೆ ನಾಲ್ವರು ಸ್ಟಾರ್​ಗಳು..!

publive-image

ವೈಟ್​​ಬಾಲ್ ಕ್ರಿಕೆಟ್​​​​​ಗೆ ಆಲ್​ರೌಂಡರ್ಸ್ ತುಂಬಾ ಇಂಪಾರ್ಟೆಂಟ್. ಇದು ಚಾಂಪಿಯನ್ಸ್ ಟ್ರೋಫಿಯಲ್ಲೂ ಪ್ರೂವ್ ಆಗಿದೆ. T20 ಫಾರ್ಮೆಟ್​​ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಲ್​ರೌಂಡರ್ಸ್​​​ ಹುಡುಕಾಟದಲ್ಲಿದೆ. ಕಳೆದ ವರ್ಷ ನಿವೃತ್ತಿ ಘೋಷಿಸಿದ ಜಡೇಜಾ ಸ್ಥಾನಕ್ಕೆ ಅಕ್ಷರ್ ಪಟೇಲ್ ಬೆಸ್ಟ್​ ರೀಪ್ಲೇಸ್​ಮೆಂಟ್. ಆರ್​.ಅಶ್ವಿನ್​ಗೆ ಸುಂದರ್ ಸೂಕ್ತ ಸ್ಪಿನ್ನರ್. ಫಾಸ್ಟ್ ಬೌಲಿಂಗ್ ಆಲ್​ರೌಂಡರ್​ ಆಗಿ ಹಾರ್ದಿಕ್ ತಂಡದ ಮೊದಲ ಆಯ್ಕೆ. ದುಬೆ ಮತ್ತು ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್​​ಗೆ ಬ್ಯಾಕ್​ಅಪ್​ ಸ್ಥಾನಕ್ಕೆ ಪೈಪೋಟಿ ನಡೆಸಬೇಕಾಗುತ್ತದೆ.

11 ತಿಂಗಳು, 23 T20 ಪಂದ್ಯ

2026ರ T20 ವಿಶ್ವಕಪ್, ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಉಳಿದಿರೋದು ಕೇವಲ 11 ತಿಂಗಳು ಮಾತ್ರ. ಈ ಅವಧಿಯಲ್ಲಿ ಟೀಮ್ ಇಂಡಿಯಾ 23 ಟಿ20 ಪಂದ್ಯಗಳನ್ನ ಆಡಲಿದೆ. ಅಷ್ಟರಲ್ಲೇ ಕೋಚ್ ಮತ್ತು ಚೀಫ್ ಸೆಲೆಕ್ಟರ್, ರೀಪ್ಲೇಸ್​ಮೆಂಟ್ಸ್ ಮತ್ತು ಸ್ಲಾಟ್​​​​​​​​​​​​​ ಫಿಲ್ ಮಾಡಬೇಕಾಗುತ್ತದೆ. ಈ ಕಾರಣದಿಂದ ಈ ಐಪಿಎಲ್ ಸೀಸನ್-18 ಆಟಗಾರರಿಗಷ್ಟೇ ಅಲ್ಲ. ಕೋಚ್, ಚೀಫ್ ಸೆಲೆಕ್ಟರ್​​ಗೂ ತುಂಬಾ ಮುಖ್ಯ.

ಇದನ್ನೂ ಓದಿ: ಭಾರತದಲ್ಲೇ ಅತ್ಯಂತ ದುಬಾರಿ ಜಾಹೀರಾತು ಚಿತ್ರೀಕರಣ; ಇದರ ಹೈಬಜೆಟ್‌ ಎಷ್ಟು ಕೋಟಿ ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment