Advertisment

ಕೊಹ್ಲಿ, ರೋಹಿತ್ ಕೇಂದ್ರೀಯ ಒಪ್ಪಂದಲ್ಲಿ ಎಷ್ಟು ಕೋಟಿ ಹಣ ಗಳಿಸ್ತಾರೆ.. 7 ಕೋಟಿ ರೂ ಪಡೆಯೋ ಸ್ಟಾರ್ ಪೇಸರ್?

author-image
Bheemappa
Updated On
BCCI ಮೇಲೆ ಅಭಿಮಾನಿಗಳು ಕೋಪ.. ಕೊಹ್ಲಿ, ರೋಹಿತ್​ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ..?
Advertisment
  • ರಿಷಭ್ ಪಂತ್ ಪರ್ಫಾಮೆನ್ಸ್​ ಮೆಚ್ಚಿ ಬಡ್ತಿ ನೀಡಿತಾ ಕ್ರಿಕೆಟ್ ಮಂಡಳಿ?
  • ಕೇಂದ್ರೀಯ ಒಪ್ಪಂದದಲ್ಲಿ ಮತ್ತೆ ಸ್ಥಾನ ಪಡೆದ ಇಶನ್ ಕಿಶನ್, ಶ್ರೇಯಸ್​
  • ಮೊಹಮ್ಮದ್ ಶಮಿ, ಸಿರಾಜ್, ಗಿಲ್, ಪಾಂಡ್ಯಗೆ ಎಷ್ಟು ಕೋಟಿ ಸಿಗುತ್ತದೆ?

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) 1 ಅಕ್ಟೋಬರ್​​ 2024 ರಿಂದ 30 ಸೆಪ್ಟೆಂಬರ್​ 2025 ಈ ಒಂದು ವರ್ಷದವರೆಗೆ ಕೇಂದ್ರೀಯ ಒಪ್ಪಂದಲ್ಲಿ ಹೆಸರು ಪಡೆದ ಆಟಗಾರರನ್ನು ಘೋಷಣೆ ಮಾಡಿದೆ. ಎ+, ಎ, ಬಿ, ಸಿ ಎಂದು ನಾಲ್ಕು ವರ್ಗಗಳಿವೆ. ಇವುಗಳಲ್ಲಿ ಯಾವ ಯಾವ ಆಟಗಾರರು ಯಾವ್ಯಾವ ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತೆ ಇದೆ.

Advertisment

ಬಿಸಿಸಿಐ ಈ 4 ಕ್ಯಾಟಗರಿಯಲ್ಲಿ ಈ ಬಾರಿ ಒಟ್ಟು 34 ಆಟಗಾರರು ಇದ್ದಾರೆ. A+ ವರ್ಗದಲ್ಲಿರುವ ಆಟಗಾರರು ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಎ ವಿಭಾಗದಲ್ಲಿರುವ ಪ್ಲೇಯರ್ಸ್​ 5 ಕೋಟಿ ರೂಪಾಯಿ ಹಣ ಪಡೆಯುತ್ತಾರೆ. ಅದರಂತೆ B ವರ್ಗದಲ್ಲಿರುವ ಆಟಗಾರರು 3 ಕೋಟಿ ಹಣ ಗಳಿಸಿದ್ರೆ, C ವಿಭಾಗದಲ್ಲಿರುವವರು ವಾರ್ಷಿಕ 1 ಕೋಟಿ ರೂಪಾಯಿ ಪಡೆಯಲಿದ್ದಾರೆ. ಇನ್ನು ರಿಷಬ್ ಪಂತ್ ಮಾತ್ರ ಬಿ ವರ್ಗದಿಂದ ಎ ವರ್ಗಕ್ಕೆ ಹೋಗಿದ್ದರಿಂದ ಈಗ 5 ಕೋಟಿ ಹಣ ಪಡೆಯಲಿದ್ದಾರೆ.

ಇದನ್ನೂ ಓದಿ: RCB ವಿಕೆಟ್ ಕೀಪರ್​ ಸೇರಿ 5 ಪ್ಲೇಯರ್ಸ್​ಗೆ ಬಿಗ್​ ಶಾಕ್​.. ಸೆಂಟ್ರಲ್​ ಕಂಟ್ರಾಕ್ಟರ್​​ನಿಂದ ಔಟ್

publive-image

  • ಎ+ ವರ್ಗ- ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​​ಪ್ರಿತ್ ಬೂಮ್ರಾ ಹಾಗೂ ಜಡೇಜಾ
  • ಎ ವರ್ಗ- ಕೆ.ಎಲ್ ರಾಹುಲ್, ರಿಷಭ್ ಪಂತ್, ಮೊಹಮ್ಮದ್ ಶಮಿ, ಸಿರಾಜ್, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ
  • ಬಿ ವರ್ಗ- ಸೂರ್ಯ ಕುಮಾರ್, ಕುಲ್​ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್
  • ಸಿ ವರ್ಗ- ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್,
Advertisment

ಇನ್ನು ವಿಕೆಟ್​ ಕೀಪರ್ ಕಮ್ ಬ್ಯಾಟರ್ ರಿಷಬ್​ ಪಂತ್ ಅವರಿಗೆ ಮಾತ್ರ ಬಡ್ತಿ ನೀಡಲಾಗಿದೆ.​ ರಜತ್ ಪಾಟೀದಾರ್ ಕಳೆದ ಬಾರಿ ಇದ್ದಂತೆ ಸಿ ಸ್ಥಾನದಲ್ಲೇ ಇದ್ದಾರೆ. 2024ರ ಒಪ್ಪಂದಿಂದ ಕೈಬಿಡಲಾಗಿದ್ದ ಇಶನ್ ಕಿಶನ್, ಶ್ರೇಯಸ್ ಅಯ್ಯರ್​​ ಅವರನ್ನು ಫುನಃ ಒಪ್ಪಂದದಲ್ಲಿ ಸೇರಿಸಿಕೊಳ್ಳಲಾಗಿದೆ. ಕಳೆದುಕೊಂಡಿದ್ದ ಒಂದೊಳ್ಳೆ ಅವಕಾಶವನ್ನು ಪಡೆದ ಖುಷಿಯಲ್ಲಿ ಯುವ ಆಟಗಾರರು ಇದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment