newsfirstkannada.com

ವಿಶ್ವಕಪ್ ವೇದಿಕೆಯಲ್ಲೇ ವಿರಾಟ್ ನಿವೃತ್ತಿ ಘೋಷಣೆ.. ಕೊಹ್ಲಿಯಂತೆ ರೋಹಿತ್ ಹಾಗೆ ಮಾಡಲಿಲ್ಲ ಯಾಕೆ ಗೊತ್ತಾ?

Share :

Published July 1, 2024 at 12:42pm

  ದ್ರಾವಿಡ್, ರೋಹಿತ್, ಕೊಹ್ಲಿ, ಜಡೇಜಾ ಗುಡ್​ಬೈ

  ಟೀಂ ಇಂಡಿಯಾಗೆ ಈ ನಾಲ್ವರ ಸ್ಥಾನ ತುಂಬೋರು ಯಾರು?

  ರೋಹಿತ್ ನಿರ್ಧಾರದ ಹಿಂದಿಂದೆ ಒಂದು ಸಿಕ್ರೇಟ್​..!

ಟಿ-20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಗೆ ನಾಲ್ಕು ಆಘಾತ ಆಗಿದೆ. ತಂಡದ ದಿಗ್ಗಜರು ಟಿ-20 ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಖ್ಯ ಕೋಚ್​ ರಾಹುಲ್ ದ್ರಾವಿಡ್​, ಕ್ಯಾಪ್ಟನ್ ರೋಹಿತ್ ಶರ್ಮಾ, ಬ್ಯಾಟಿಂಗ್ ದೈತ್ಯ ವಿರಾಟ್ ಕೊಹ್ಲಿ, ಸ್ಟಾರ್ ಆಲ್​​ರೌಂಡರ್ ಸರ್ ಜಡೇಜಾ ನಿವೃತ್ತಿಯಾಗಿದ್ದಾರೆ.

ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಪ್ರಶಸ್ತಿ ಸ್ವೀಕರಿಸುವ ವೇಳೆ ನಿವೃತ್ತಿ ಘೋಷಣೆ ಮಾಡಿದರು. ಆದರೆ ರೋಹಿತ್ ಶರ್ಮಾ ಸುದ್ದಿಗೋಷ್ಟಿ ವೇಳೆ ತಮ್ಮ ನಿವೃತ್ತಿ ಬಗ್ಗೆ ಮಾಹಿತಿ ನೀಡಿದರು. ಕೊಹ್ಲಿಯಂತೆ ರೋಹಿತ್ ಕೂಡ ಯಾಕೆ ಟ್ರೋಫಿ ಸ್ವೀಕರಿಸುವ ವೇಳೆ ನಿವೃತ್ತಿ ಘೋಷಣೆ ಮಾಡಿಲ್ಲ ಎಂಬ ಪ್ರಶ್ನೆ ಶುರುವಾಗಿದೆ.

ಇದನ್ನೂ ಓದಿ:ಭಯಂಕರ ಚಂಡ ಮಾರುತಕ್ಕೆ ಟೀಂ ಇಂಡಿಯಾ ಲಾಕ್.. ಆಟಗಾರರು ಭಾರತಕ್ಕೆ ಬರೋದು ಯಾವಾಗ..?

ಮಾಹಿತಿಗಳ ಪ್ರಕಾರ.. ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್​​ಗೆ ಗುಡ್​ಬೈ ಹೇಳ್ತಿರೋದು ರೋಹಿತ್ ಶರ್ಮಾಗೆ ಮೊದಲೇ ಗೊತ್ತಿತ್ತು. ವಿರಾಟ್ ಕೊಹ್ಲಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರೋಹಿತ್ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಅದೇ ಕಾರಣಕ್ಕೆ ಸುದ್ದಿಗೋಷ್ಟಿ ವೇಳೆ ತಮ್ಮ ನಿರ್ಧಾರವನ್ನು ತಿಳಿಸಲು ಮುಂದಾಗಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ರೋಹಿತ್.. ಟಿ-20 ಕ್ರಿಕೆಟ್‌ನಿಂದ ನಿವೃತ್ತಿ ಆಗುವ ಬಗ್ಗೆ ನಾನು ಎಂದಿಗೂ ಯೋಚಿಸಿರಲಿಲ್ಲ. ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ನಾನು ನಿವೃತ್ತಿ ಪಡೆಯಲು ಸರಿಯಾದ ಸಮಯ. ನಾನು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಕಳೆದ ಬಾರಿ ODI ವಿಶ್ವಕಪ್ ಸೋತ ನಂತರ ವಿಶ್ವಕಪ್ ಆಡುತ್ತೇನೆಯೇ? ಇಲ್ಲವೇ ಎಂದು ಯೋಚಿಸಿರಲಿಲ್ಲ. T20ಯಿಂದ ನಿವೃತ್ತಿ ಹೊಂದುತ್ತೇನೆ ಎಂದು ಎಂದಿಗೂ ಯೋಚಿಸಲಿಲ್ಲ. ಆ ಸಮಯ ಈಗ ಬಂದಿದೆ. ವಿಶ್ವ ಕಪ್ ಗೆದ್ದ ಬಳಿಕ ವಿದಾಯ ಹೇಳುವುದು ಅದ್ಭುತ ಅನುಭವ ಎಂದಿದ್ದಾರೆ.

ಇದನ್ನೂ ಓದಿ:ಬೂಮ್ರಾ ಸೆನ್ಸೇಷನ್.. ವಿಶ್ವಕಪ್​​ನಲ್ಲಿ ಹೆಚ್ಚು ವಿಕೆಟ್ ಪಡೆಯದಿದ್ರೂ ಸರಣಿ ಶ್ರೇಷ್ಠ ಕಿರೀಟ ಕೊಟ್ಟಿದ್ಯಾಕೆ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್ ವೇದಿಕೆಯಲ್ಲೇ ವಿರಾಟ್ ನಿವೃತ್ತಿ ಘೋಷಣೆ.. ಕೊಹ್ಲಿಯಂತೆ ರೋಹಿತ್ ಹಾಗೆ ಮಾಡಲಿಲ್ಲ ಯಾಕೆ ಗೊತ್ತಾ?

https://newsfirstlive.com/wp-content/uploads/2024/07/ROHIT-VIRAT.jpg

Load More