/newsfirstlive-kannada/media/post_attachments/wp-content/uploads/2024/04/ROHIT-SHARMA-5.jpg)
ಅಂಬಾನಿ ಬ್ರಿಗೆಡ್ನಲ್ಲಿ ಸೃಷ್ಟಿಯಾಗಿದ್ದ ಆಂತರಿಕ ಕಲಹಕ್ಕೆ ಒಂದು ಗೆಲುವು ಬ್ರೇಕ್ ಹಾಕಬಹುದು ಅನ್ನೋ ನಿರೀಕ್ಷೆ ಹುಸಿಯಾಗಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ತಂಡ ಗೆಲುವಿನ ಹಳಿಗೆ ಮರಳಿದ್ರೂ, ಮುಂಬೈ ಇಂಡಿಯನ್ಸ್ನಲ್ಲಿ ಒಗ್ಗಟ್ಟು ಮಾಯವಾಗಿದೆ. ಅಭಿಮಾನಿಗಳ ವಲಯದಲ್ಲಂತೂ ರೋಹಿತ್ vs ಹಾರ್ದಿಕ್ ಫೈಟ್ ಮುಗಿಯುವ ಲಕ್ಷಣಗಳೇ ಕಾಣ್ತಿಲ್ಲ.
ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಹೋಮ್ಗ್ರೌಂಡ್ ವಾಂಖೆಡೆಯಲ್ಲಿ ಬೊಂಬಾಟ್ ಪರ್ಫಾಮೆನ್ಸ್ ನೀಡಿದ ಅಂಬಾನಿ ಬ್ರಿಗೆಡ್, ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಮುಂಬೈ ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮವೂ ಜೋರಾಗಿದೆ.
ಇದನ್ನೂ ಓದಿ:ಚೆಪಾಕ್ನಲ್ಲಿ ಧೋನಿ ಅಭಿಮಾನಿಗಳಿಗೆ ಚಮಕ್ ಕೊಟ್ಟ ರವಿಂದ್ರ ಜಡೇಜಾ -Video
ಗೆಲುವಿನ ಹಳಿಗೇರಿದ್ರೂ, ನಿಲ್ಲದ ಫ್ಯಾನ್ಸ್ ವಾರ್..!
ಮುಂಬೈ ಇಂಡಿಯನ್ಸ್ ತಂಡ ಗೆದ್ದ ಸಂಭ್ರಮದಲ್ಲಿ ತೇಲಾಡ್ತಿದೆ. ಆದ್ರೂ, ಫ್ಯಾನ್ಸ್ ವಾರ್ಗೆ ಬ್ರೇಕ್ ಬಿದ್ದಿಲ್ಲ. ಈ ಗೆಲುವಿನ ಹೊರತಾಗಿಯೂ ಹಾರ್ದಿಕ್ ಮೇಲಿನ ಮುನಿಸು ರೋಹಿತ್ ಶರ್ಮಾ ಅಭಿಮಾನಿಗಳಲ್ಲಿ ಮುಂದುವರೆದಿದೆ.
ಗೆಲುವಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮ..!
ಮುಂಬೈ, ಡೆಲ್ಲಿ ಎದುರು ಗೆದ್ದ ಬೆನ್ನಲ್ಲೇ ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ರು. ಹಾರ್ದಿಕ್ ಪಾಂಡ್ಯ We’re up and running ಎಂಬ ಕ್ಯಾಪ್ಶನ್ ನೀಡಿ 4 ಫೋಟೋ ಶೇರ್ ಮಾಡಿದ್ರು. ಇದ್ರಲ್ಲಿ ಮಾಜಿ ಕ್ಯಾಪ್ಟನ್ ರೋಹಿತ್ ಫೋಟೋ ಕೂಡ ಇತ್ತು.
We’re up and running 💙 pic.twitter.com/7BNn3xwo3m
— hardik pandya (@hardikpandya7) April 7, 2024
ಹಾರ್ದಿಕ್ರಂತೆ ರೋಹಿತ್ ಶರ್ಮಾ ಕೂಡ ??? ??? ???? ಎಂದು ಕ್ಯಾಪ್ಶನ್ ನೀಡಿ ಪೋಸ್ಟ್ ಹಾಕಿದ್ರು. ಒಟ್ಟಾರೆ 3 ಫೋಟೋಗಳನ್ನ ಶೇರ್ ಮಾಡಿದ್ದ ಈ ಪೋಸ್ಟ್ನಲ್ಲಿ ಹಾರ್ದಿಕ್ರ ಫೋಟೋ ಕಾಣೆಯಾಗಿದೆ. ಈ ಪೋಸ್ಟ್ ಸದ್ಯ ಬಿರುಗಾಳಿ ಎಬ್ಬಿಸಿದೆ. ರೋಹಿತ್ ಹಾಗೂ ಹಾರ್ದಿಕ್ ಫ್ಯಾನ್ಸ್ ಈ ವಿಚಾರವನ್ನ ಇಟ್ಟುಕೊಂಡು ಕೆಸರೆರಚಾಟ ಶುರು ಮಾಡಿಕೊಂಡಿದ್ದಾರೆ.
𝗢𝗳𝗳 𝘁𝗵𝗲 𝗺𝗮𝗿𝗸 🏁 pic.twitter.com/9Zo5heBN80
— Rohit Sharma (@ImRo45) April 7, 2024
ಮೊದಲ ಗೆಲುವಿನ ಬೆನ್ನಲ್ಲೇ ಶುರುವಾಯ್ತು ಕ್ರೆಡಿಟ್ ವಾರ್..!
ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 27 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿ ಸಹಿತ 49 ರನ್ ಚಚ್ಚಿದ್ರು. 181.48ರ ಸ್ಟ್ರೈಕ್ರೇಟ್ನಲ್ಲಿ ತಂಡಕ್ಕೆ ಸಾಲಿಡ್ ಓಪನಿಂಗ್ ನೀಡಿದ್ರು. ಆದ್ರೆ, ಹಾರ್ದಿಕ್ ಪಾಂಡ್ಯ ಮತ್ತೊಂದು ಸ್ಲೋ ಇನ್ನಿಂಗ್ಸ್ ಕಟ್ಟಿದ್ರು. 33 ಎಸೆತ ಎದುರಿಸಿ ಕೇವಲ 39 ರನ್ಗಳಿಸಿದ್ರು. ಹೀಗಾಗಿ ಈ ಗೆಲುವಿಗೆ ಕಾರಣ ರೋಹಿತ್ ಶರ್ಮಾ ಅನ್ನೋದು ಫ್ಯಾನ್ಸ್ ವಾದವಾಗಿದೆ.
ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ PSI ಜಗದೀಶ್ ಬರ್ಬರ ಹತ್ಯೆ ಕೇಸ್; ಅಪರಾಧಿಗೆ ಜೀವಾವಧಿ ಶಿಕ್ಷೆ
ಡ್ರೆಸ್ಸಿಂಗ್ ರೂಮ್ ಇಬ್ಭಾಗ.. ಒಂದು ತಂಡ, ಎರಡು ಬಣ..!
ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಟೂರ್ನಿ ಆರಂಭಕ್ಕೂ ಮುನ್ನ ಮಾಡಿದ ಒಂದು ಯಡವಟ್ಟು, ಮುಂಬೈ ಇಂಡಿಯನ್ಸ್ ತಂಡವನ್ನ ಹಾಗೂ ಅಭಿಮಾನಿಗಳನ್ನ ಇಬ್ಬಾಗ ಮಾಡಿತ್ತು. ಆದ್ರೆ, ತಂಡ ಗೆಲುವಿನ ಹಳಿಗೆ ಮರಳಿದಾಗ ಎಲ್ಲವೂ ಸರಿಯಾಗುತ್ತೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ, ಗೆದ್ದ ನಂತರದ ಹಾರ್ದಿಕ್ ಹಾಗೂ ರೋಹಿತ್ರ ಸೋಷಿಯಲ್ ಮೀಡಿಯಾಗಳು ಪೋಸ್ಟ್ಗಳು ಒನ್ ಫ್ಯಾಮಿಲಿ, ಮೆನಿ ಫ್ಯಾಮಿಲಿ ಆಗಿರೋ ಕಥೆಯನ್ನೇ ಹೇಳ್ತಿವೆ. ಫ್ಯಾನ್ಸ್ ವಲಯದಲ್ಲಂತೂ ವಾರ್ ಜೋರಾಗೆ ನಡೀತಿದೆ. ಈ ಸೀಸನ್ನಲ್ಲಿ ಈ ಕಲಹಕ್ಕೆ ಬ್ರೇಕ್ ಬೀಳೋ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಕಾಣಿಸ್ತಿಲ್ಲ.
ಇದನ್ನೂ ಓದಿ: ಯುಗ ಯುಗಗಳೇ ಕಳೆದರೂ.. ಬೇವು-ಬೆಲ್ಲ ಒಟ್ಟಿಗೆ ತಿನ್ನೋದ್ರಿಂದ ಎಷ್ಟೊಂದು ಪ್ರಯೋಜನ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್