newsfirstkannada.com

ರೋಹಿತ್ ಪರೋಕ್ಷ ಸಂದೇಶ.. ಈ ಆಟಗಾರರಿಗೆ ಟೀಂ ಇಂಡಿಯಾದ ಡೋರ್ ಕ್ಲೋಸ್ ಆಗ್ತಿದ್ಯಾ?

Share :

Published February 28, 2024 at 12:04pm

  ಕ್ಯಾಪ್ಟನ್ ರೋಹಿತ್ ಸಿರೀಯಸ್ ವಾರ್ನಿಂಗ್

  ಯುವ ಆಟಗಾರರಿಗೆ ರೋಹಿತ್ ಶರ್ಮಾ ಅಭಯ

  ಯುವಕರಿಗೆ ಬಹುಪರಾಕ್.. ಭವಿಷ್ಯದ ಭರವಸೆ

ರಾಂಚಿ ಟೆಸ್ಟ್​ ಗೆದ್ದ ಟೀಮ್ ಇಂಡಿಯಾ, ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದೆ. ಈ ಟೆಸ್ಟ್ ಸರಣಿ ಗೆಲುವಿನ ಬಳಿಕ ರೋಹಿತ್ ಆಡಿದ ಒಂದೇ ಒಂದು ಮಾತು ಹಲವರ ಎದೆಯಲ್ಲಿ ನಡುಕ ಹುಟ್ಟಿದೆ. ಕೆಲ ಆಟಗಾರರ ಪಾಲಿಗೆ ಟೀಮ್​ ಇಂಡಿಯಾ ಡೋರ್ ಕಂಪ್ಲೀಟ್ ಕ್ಲೋಸ್ ಆಯ್ತಾ ಎಂಬ ಪ್ರಶ್ನೆಯೂ ಹುಟ್ಟಿದೆ.

ರಾಂಚಿ ಟೆಸ್ಟ್‌ ಗೆದ್ದ ಟೀಮ್ ಇಂಡಿಯಾ, ಟೆಸ್ಟ್ ನಲ್ಲಿ ಗೆಲುವಿನ ನಾಗಲೋಟ ಮುಂದುವರಿಸಿದೆ. ತವರಿನಲ್ಲಿ ಸತತ 17 ಟೆಸ್ಟ್ ಸರಣಿ ಗೆಲುವುಗಳ ದಾಖಲೆ ಬರೆದಿದೆ. ಈ ಗೆಲುವಿನ ಸಂಭ್ರದಲ್ಲಿದ್ದಾಗಲೇ ಹಿಟ್​ಮ್ಯಾನ್ ರೋಹಿತ್, ಕೆಲ ಆಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಯುವಕರಿಗೆ ರೋಹಿತ್ ಅಭಯ.. ಸ್ಥಾನ ಗ್ಯಾರಂಟಿ
ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಆಟಗಾರ ಕಮಿಟ್ಮೆಂಟ್​​ಗೆ ರೋಹಿತ್ ಫಿದಾ ಆಗಿದ್ದಾರೆ. ಕಷ್ಟಕರ ಪಿಚ್​​ಗಲ್ಲಿ ಯುವಕರ ದಿಟ್ಟ ಹೋರಾಟಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಯಂಗ್ ಸ್ಟರ್​ಗಳ ಪ್ರದರ್ಶನಕ್ಕೆ ಸಲಾಂ ಹೇಳಿರೋ ರೋಹಿತ್, ತಂಡದಲ್ಲಿ ಸ್ಥಾನ ನೀಡುವ ಅಭಯವನ್ನು ನೀಡಿದ್ದಾರೆ. ಇದೇ ವೇಳೆ ತಂಡ ಬಿಟ್ಟವರಿಗೆ ವಾರ್ನಿಂಗ್ ನೀಡಿದ್ದಾರೆ.

ಸಾಕಷ್ಟು ಯುವ ಆಟಗಾರರು ಹಿಂದೆ ಟೆಸ್ಟ್ ಕ್ರಿಕೆಟ್​ ಆಡಿರಲಿಲ್ಲ. ಡ್ರೆಸ್ಸಿಂಗ್ ರೂಮ್​ನ ಭಾಗವೂ ಆಗಿರಲಿಲ್ಲ. ಪ್ರಮುಖವಾಗಿ ಡ್ರೆಸ್ಸಿಂಗ್ ರೂಮ್​ ಕಲ್ಚರ್​ ಅರ್ಥ ಮಾಡಿಕೊಳ್ಳುವುದು ಮುಖ್ಯ. ನಮಗೆ ಬೇಕಾದದ್ದು ಅಡಾಪ್ಟ್​ ಮಾಡಿಕೊಂಡು ಆಡುವುದು ಮುಖ್ಯ. ಈ ಆಟಗಾರರು ಮುಕ್ತ ಮನಸ್ಸಿನಿಂದ ತಂಡದ ಅಗತ್ಯತೆಗೆ ತಕ್ಕಂತೆ ಆಡಿದ್ದಾರೆ. ಇಂಥಹ ಆಟಗಾರರೇ ತಂಡಕ್ಕೆ ಬೇಕಾಗಿದ್ದಾರೆ. ವೈಯಕ್ತಿಕ ಆದ್ಯತೆಗಿಂತ ತಂಡದ ಹಿತಾಸಕ್ತಿಗೆ ಆದ್ಯತೆ ನೀಡುವವರ ಅವಶ್ಯಕತೆ ಇರುತ್ತೆ. ಈ ಆಟಗಾರರು ಅದನ್ನೇ ತೋರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಅತ್ಯಂತ ಕಠಿಣ ಫಾರ್ಮೆಟ್​. ಈ ಮಾದರಿಯ ಕ್ರಿಕೆಟ್​​​ನಲ್ಲಿ ನಿಮಗೆ ಯಶಸ್ಸು ಸಿಗಬೇಕಾದರೆ ಹಸಿವು ಇರಬೇಕು. ಯಾವ ಆಟಗಾರರಲ್ಲಿ ಹಸಿವಿದೆ, ಯಾರಲ್ಲಿ ಇಲ್ಲ ಎನ್ನವುದು ನೋಡಿದರೇ ಗೊತ್ತಾಗುತ್ತದೆ. ಕಷ್ಟಕರ ಕಂಡೀಷನ್ಸ್​ನಲ್ಲಿ ಯುವ ಆಟಗಾರರು ಆಡಿದ್ದಾರೆ. ಅಂತಹ ಆಟಗಾರರಿಗೆ ಆದ್ಯತೆ ನೀಡಲೇಬೇಕಿದೆ. ಐಪಿಎಲ್ ಕೂಡ ಉತ್ತಮ ಫಾರ್ಮೆಟ್​ ಆಗಿದೆ. ಅದರಲ್ಲಿ ಅನುಮಾನವೇ ಇಲ್ಲ. ಆದ್ರೆ, ಈ ಫಾರ್ಮೆಟ್​​ ಬಹಳಷ್ಟು ಕಷ್ಟಕರ-ರೋಹಿತ್ ಶರ್ಮಾ, ನಾಯಕ

ಇಂತಹ ಯುವ ಆಟಗಾರರೇ ತಂಡಕ್ಕೆ ಬೇಕಿದ್ದಾರೆ ಎಂದಿರುವ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ಆಡಲು ಬಯಸದೆ, ಐಪಿಎಲ್​ನತ್ತ ಫೋಕಸ್ ಮಾಡ್ತಿರುವವರಿಗೂ ಡೈರೆಕ್ಟ್​ ಹಿಟ್​ ಹೊಡೆದಿದ್ದಾರೆ. ನಿಮ್ಮ ಪಾಲಿಗೆ ಡೋರ್​​ಕ್ಲೋಸ್​ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಹೆಸರು ಹೇಳದೇ ಇಶಾನ್ ಕಿಶನ್-ಶ್ರೇಯಸ್​​ಗೆ ಟಾಂಗ್​..?
ರೋಹಿತ್ ಶರ್ಮಾರ ಹೇಳಿಕೆ ಸೌತ್​ ಆಫ್ರಿಕಾದಲ್ಲಿ ಟೆಸ್ಟ್ ತಂಡ ತೊರೆದ ಇಶಾನ್​​​ ಕಿಶನ್​​​​ ಹಾಗೂ ಕಳೆದ 5 ವರ್ಷಗಳಿಂದ ಟೆಸ್ಟ್ ಕ್ರಿಕೆಟ್​ ಆಡದೆ, ವೈಟ್​​ಬಾಲ್​​ನತ್ತ ಮಾತ್ರ ಫೋಕಸ್ ಮಾಡ್ತಿರೋ ಹಾರ್ದಿಕ್ ಪಾಂಡ್ಯಗೆ ನೇರವಾಗಿ ಹೇಳಿದಂತಿದೆ. ಇಬ್ಬರೂ ಟೆಸ್ಟ್​ ಕ್ರಿಕೆಟ್​​ನತ್ತ ಗಮನವನ್ನೇ ನೀಡದೇ ಐಪಿಎಲ್​ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು, ಶ್ರೇಯಸ್​ ಅಯ್ಯರ್​ ಕೂಡ ಇದೇ ಹಾದಿಯಲ್ಲಿದ್ದಾರೆ. ಪರೋಕ್ಷವಾಗಿ ರೋಹಿತ್​ ಇವ್ರಿಗೆ ಹೇಳಿದ್ದು ಅನ್ನೋದು ಎಲ್ಲರ ವಿಶ್ಲೇಷಣೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್ ಪರೋಕ್ಷ ಸಂದೇಶ.. ಈ ಆಟಗಾರರಿಗೆ ಟೀಂ ಇಂಡಿಯಾದ ಡೋರ್ ಕ್ಲೋಸ್ ಆಗ್ತಿದ್ಯಾ?

https://newsfirstlive.com/wp-content/uploads/2024/02/Rohit-Sharma_test.jpg

Load More