/newsfirstlive-kannada/media/post_attachments/wp-content/uploads/2024/07/SURYA_ROHIT.jpg)
ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ T20 ಸರಣಿ ಇಂದಿನಿಂದ ಆರಂಭವಾಗಲಿದ್ದು ಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಟೀಮ್ ಇಂಡಿಯಾದ T20ಗೆ ನೂತನ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ಸೋರುತ್ತಿರೋ ತಹಶೀಲ್ದಾರ್ ಕಚೇರಿ.. ಅಪಾಯದ ಮಟ್ಟ ಮೀರಿದ ರಾಜ್ಯದ ನದಿಗಳು, ಆತಂಕ
ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕು ಎನ್ನುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಅದರಂತೆ ಟೀಮ್ ಇಂಡಿಯಾದಲ್ಲಿ ಆಡಬೇಕು ಎನ್ನುವುದು ನನ್ನ ಫಸ್ಟ್ ಕನಸಾಗಿತ್ತು. ಮುಂದೆ ಮುಂದೆ ಹೋದ ಹಾಗೆ ದೊಡ್ಡ ಸರಣಿ ಗೆಲ್ಲಬೇಕಾಗುತ್ತದೆ. ಈ ಗುರಿ ಮುಟ್ಟಬೇಕು ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ.
ಇದಾದ ಬಳಿಕ ಭಾರತದ ನಾಯಕನಾಗಬೇಕು. ಅದು ಹೇಗೆಲ್ಲ ಮಾಡಬೇಕು ಎನ್ನುವುದು ಅಲ್ಲೇ ಗೊತ್ತಾಗುತ್ತದೆ. ನಾನು ನಾಯಕತ್ವದ ಬಗ್ಗೆ ರೋಹಿತ್ ಶರ್ಮಾರಿಂದ ಸಾಕಷ್ಟು ಕಲಿತುಕೊಂಡೆ. ಅವರು ನನ್ನ ದೃಷ್ಟಿಯಲ್ಲಿ ಕ್ಯಾಪ್ಟನ್ ರೀತಿಯಲ್ಲ, ಲೀಡರ್ ರೀತಿ ಇದ್ದರು. ಮೈದಾನದ ಹೊರಗೂ, ಒಳಗೂ ಲೀಡರ್ ಆಗಿದ್ದರು. ಲೀಡರ್- ಕ್ಯಾಪ್ಟನ್ಗೂ ಜಾಸ್ತಿ ವ್ಯತ್ಯಾಸ ಇದೆ. ಅದನ್ನ ರೋಹಿತ್ ಶರ್ಮಾರಲ್ಲಿ ನೋಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ನೀರಿನ ಮೇಲೆ ಉದ್ಘಾಟನೆಯಾದ ಒಲಿಂಪಿಕ್ಸ್.. ಅದ್ಧೂರಿ ಕ್ರೀಡಾಜಾತ್ರೆಗೆ ವರ್ಣರಂಜಿತ ಚಾಲನೆ
Suryakumar Yadav talking about the importance of Rohit Sharma in Indian cricket. ?? [PTI] pic.twitter.com/mGj0UOyTM5
— Johns. (@CricCrazyJohns)
Suryakumar Yadav talking about the importance of Rohit Sharma in Indian cricket. 🇮🇳 [PTI] pic.twitter.com/mGj0UOyTM5
— Johns. (@CricCrazyJohns) July 26, 2024
">July 26, 2024
ಲೀಡರ್ ರೀತಿಯಲ್ಲಿ ಗುಂಪಿನ ಮಧ್ಯೆ ನಿಂತು ಹೇಗೆ ಆಡಬೇಕು ಎಂದು ರೋಹಿತ್ ಶರ್ಮಾ ದಾರಿ ತೋರಿಸಿಕೊಟ್ಟಿದ್ದಾರೆ. ಟಿ20 ಟೂರ್ನಿಮೆಂಟ್ ಹೇಗೆ ಗೆಲ್ಲಬೇಕೆಂದು ಮಾರ್ಗದರ್ಶನ ನೀಡಿದ್ದಾರೆ. ಇವೆಲ್ಲ ಅವರಿಂದ ಕಲಿತುಕೊಂಡಿದ್ದೇನೆ. ಅವರು ಹೇಳಿಕೊಟ್ಟಿದ್ದ ರೀತಿಯಲ್ಲೇ ಇನ್ಮುಂದೆ ಟ್ರೈನ್ ಮುಂದೆ ಹೋಗುತ್ತದೆ. ಇಂಜಿನ್ ಮಾತ್ರ ಚೇಂಜ್ ಆಗಿರೋದು, ಬೋಗಿಗಳೆಲ್ಲ ಸೇಮ್ ಎಂದು ರೋಹಿತ್ ಶರ್ಮಾರನ್ನ ಗುಣಗಾನ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ