newsfirstkannada.com

MI vs DC; ಫ್ಯಾನ್ಸ್​ ತೋರಿಸ್ತಿರೋ ಪ್ರೀತಿಯನ್ನ ಹಾಡಿ ಹೊಗಳಿದ ಹಿಟ್​ಮ್ಯಾನ್​.. ಇವತ್ತಾದ್ರು ಮುಂಬೈ ಗೆಲ್ಲುತ್ತಾ?

Share :

Published April 7, 2024 at 2:53pm

Update April 7, 2024 at 2:58pm

    ರಿಷಬ್​ ಪಂತ್ ಜೊತೆ ಅಖಾಡಕ್ಕೆ ಇಳಿಯಲಿರೋ ರೋಹಿತ್ ಶರ್ಮಾ

    ವರ್ಲ್ಡ್​​ಕಪ್​ ಸೋಲಿನ ಕಹಿ ಅನುಭವದ ಬಗ್ಗೆ ರೋಹಿತ್ ಏನಂದ್ರು?

    ಸತತ ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟು ಹೋದ ಮುಂಬೈ ಟೀಮ್

ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ಐಪಿಎಲ್​ ಪಂದ್ಯಗಳ ಬ್ಯುಸಿಯಲ್ಲಿದ್ದಾರೆ. ಇದರ ಜೊತೆಗೆ ಭಾರತ ಏಕದಿನ ವಿಶ್ವಕಪ್​ ಸೋತಿರುವ ಹಾಗೂ ಮುಂಬೈ ಟೀಮ್​ ನಾಯಕತ್ವ ಕಳೆದುಕೊಂಡ ಕಹಿ ಅನುಭವದಲ್ಲಿದ್ದಾರೆ. ಆದರೆ ಹೋದಲ್ಲಿ, ಬಂದಲ್ಲಿ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ನಾನು ಏನು ಹೇಳೋಕೆ ಆಗುತ್ತಿಲ್ಲ ಎಂದು ಹಿಂದಿಯ ರಿಯಾಲಿಟಿ ಶೋ ಕಪಿಲ್ ಶರ್ಮಾ ಶೋನಲ್ಲಿ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಟೀಮ್​ನಲ್ಲಿ ಹಿಟ್​ಮ್ಯಾನ್​ ರೋಹಿತ್ ಆಡುತ್ತಿದ್ದಾರೆ. ಸತತ ಹ್ಯಾಟ್ರಿಕ್ ಸೋಲುಗಳಿಂದ ತಂಡ ಕಂಗೆಟ್ಟು ಹೋಗಿದ್ದರಿಂದ ಹಾರ್ದಿಕ್​ ವಿರುದ್ಧ ಫ್ಯಾನ್ಸ್​ ಗರಂ ಆಗಿದ್ದಾರೆ. ಇದರ ಬೆನ್ನಲ್ಲೇ ಕಪಿಲ್ ಶರ್ಮಾ ಶೋನಲ್ಲಿ ಹಿಟ್​ಮ್ಯಾನ್ ರೋಹಿತ್ ಹಾಗೂ ಕೆಕೆಆರ್ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಭಾಗಿಯಾಗಿ ಜಾಲಿಯಾಗಿ ಟೈಮ್​ಪಾಸ್ ಮಾಡಿ ಶೋನಲ್ಲಿ ನಕ್ಕು, ಕುಣಿದಾಡಿದ್ದಲ್ಲದೇ ಬ್ಯಾಟ್​ ಕೂಡ ಬೀಸಿದ್ದಾರೆ.

ಇದನ್ನೂ ಓದಿ: MS ಧೋನಿ ಲಾಂಗ್​ ಹೇರ್​​ಸ್ಟೈಲ್​ಗೆ ಫ್ಯಾನ್ಸ್​ ಫಿದಾ.. ಮಹಿ ಎಲ್ಲಿಗೆ ಹೋದ್ರೂ ಗ್ರ್ಯಾಂಡ್ ವೆಲ್​ಕಮ್

ಇನ್ನು ಇದೇ ವೇಳೆ ಕಪಿಲ್ ಶರ್ಮಾ ಕೇಳಿದ ಪ್ರಶ್ನೆಗೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಉತ್ತರಿಸಿದ್ದು, ನನ್ನ ನಾಯಕತ್ವದಲ್ಲಿ ವರ್ಲ್ಡ್​​ಕಪ್​ ಸೋತ ಮೇಲೆ ತುಂಬಾ ಚಿಂತಿಸುತ್ತಿದ್ದೇನೆ. ಕ್ರಿಕೆಟ್ ಫ್ಯಾನ್ಸ್​ ನಮ್ಮ ಮೇಲೆ ಕೋಪ ಮಾಡಿಕೊಂಡಿರಬಹುದು. ಆದರೆ ಫೈನಲ್​ನಲ್ಲಿ ಮುಗ್ಗರಿಸಿದ ಬಳಿಕ ನಾನು ಎಲ್ಲಿಗೆ ಹೋದರು ಜನರು ತುಂಬಾ ಪ್ರೀತಿ ತೋರಿಸುತ್ತಿದ್ದಾರೆ. ಅಲ್ಲದೇ ವರ್ಲ್ಡ್​​ಕಪ್​ನಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದೀರಿ ಎಂದು ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ತುಳಸಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.. ಮನೆ ಅಂದವಷ್ಟೇ ಅಲ್ಲ, ಆರೋಗ್ಯಕ್ಕೂ ವೃಂದಾ ಬಹುಉಪಕಾರಿ

ಇನ್ನು ಸತತ ಸೋಲುಗಳಿಂದ ಫ್ಯಾನ್ಸ್​ಗಳಿಂದ ಬೈಯಿಸಿಕೊಳ್ಳುತ್ತಿರುವ ಮುಂಬೈ ಇನ್ನೇನು ಕೆಲವೇ ಕ್ಷಣದಲ್ಲಿ ಡೆಲ್ಲಿ ವಿರುದ್ಧ ಮೈದಾನಕ್ಕೆ ಇಳಿಯುತ್ತಿದೆ. ಈ 4ನೇ ಪಂದ್ಯವನ್ನಾದ್ರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ ಕೂಡ 4 ಪಂದ್ಯಗಲ್ಲಿ 1 ಮಾತ್ರ ಗೆದ್ದಿದ್ದರಿಂದ ಅದಕ್ಕೂ ಈ ಪಂದ್ಯ ಗೆಲ್ಲುವುದು ಅನಿವಾರ್ಯ ಎನಿಸಿದೆ. ಇಂದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 3:30ಕ್ಕೆ ಆರಂಭವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MI vs DC; ಫ್ಯಾನ್ಸ್​ ತೋರಿಸ್ತಿರೋ ಪ್ರೀತಿಯನ್ನ ಹಾಡಿ ಹೊಗಳಿದ ಹಿಟ್​ಮ್ಯಾನ್​.. ಇವತ್ತಾದ್ರು ಮುಂಬೈ ಗೆಲ್ಲುತ್ತಾ?

https://newsfirstlive.com/wp-content/uploads/2024/04/ROHIT_SHARMA-5.jpg

Load More